ಗೋಕರ್ಣ ರಥೋತ್ಸವ ಸಂಪನ್ನ : ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ

ಗೋಕರ್ಣ ಮಹಾಬಲೇಶ್ವರನಿಗೆ ಹರಕೆ ಸ್ವರೂಪದಲ್ಲಿ ಅರ್ಪಿಸಿದ ಬಾಳೆಹಣ್ಣಿನ ಮೇಲೆ ಕೆಲವು ಭಕ್ತರು, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಂಜೂರು ಮಾಡಿಸುವಂತೆ ಕೋರಿ ಪೆನ್ನನಿಲ್ಲಿ ಬರೆದಿದ್ದಾರೆ.

Demands For Multi speciality hospital in Gokarna Rathotsav snr

ಗೋಕರ್ಣ (ಮಾ.15):  ಗೋಕರ್ಣದ ಮಹಾಬಲೇಶ್ವರ ಸ್ವಾಮಿಯ ಮಹಾರಥೋತ್ಸವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿಶೇಷ ಪುಷ್ಪಗಳಿಂದ ಅಲಂಕರಿಸಿದ್ದ ಮಹಾರಥವನ್ನು ಎಳೆಯುತ್ತಿದ್ದಂತೆ ಸಾವಿರಾರು ಭಕ್ತರು ಹರ ಹರ ಮಹಾದೇವ ಎಂಬ ಘೋಷಣೆ ಮೊಳಗಿಸಿದರು. ಮಹಾಬಲೇಶ್ವರ ದೇವಾಲಯದ ಶಾರ್ವರಿ ಸಂವತ್ಸರದ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಶ್ರೀಮನ್ಮಹಾರಥೋತ್ಸವದ ಸಾನ್ನಿಧ್ಯವನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವಹಿಸಿದ್ದರು.

ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ; ಸುಪ್ರೀಂ ತೀರ್ಪಿಗೆ ಕಾಯಲೇಬೇಕು ...

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ:  ಇನ್ನು ರಥಕ್ಕೆ ಬಾಳೆಹಣ್ಣು ಅರ್ಪಿಸಿ, ಹರಕೆ ತೀರಿಸೆಂದು ಭಕ್ತರು ಬೇಡಿಕೊಳ್ಳುವುದು ಸಾಮಾನ್ಯ. ಹೀಗೆ ಮಹಾಬಲೇಶ್ವರನಿಗೆ ಹರಕೆ ಸ್ವರೂಪದಲ್ಲಿ ಅರ್ಪಿಸಿದ ಬಾಳೆಹಣ್ಣಿನ ಮೇಲೆ ಕೆಲವು ಭಕ್ತರು, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಂಜೂರು ಮಾಡಿಸುವಂತೆ ಕೋರಿ ಪೆನ್ನನಿಲ್ಲಿ ಬರೆದಿದ್ದಾರೆ. ಸರ್ಕಾರವಂತೂ ನಮ್ಮ ಬೇಡಿಕೆ ಈಡೇರಿಸಲಿಲ್ಲ ದೇವರಾದರೂ ಆಸ್ಪತ್ರೆ ಕರುಣಿಸಲಿ ಎಂದು ದೇವರಲ್ಲಿ ಕೋರಿಕೊಂಡಿದ್ದಾರೆ.

ಹೀಗೆ ಭಕ್ತರು ಅರ್ಪಿಸಿದ್ದ ಬಾಳೆಹಣ್ಣಿನ ಫೋಟೋ ವೈರಲ್‌ ಆಗಿದ್ದು, ಸರ್ಕಾರ ಇನ್ನಾದರೂ ಆಸ್ಪತ್ರೆ ಬಗ್ಗೆ ಗಮನ ಹರಿಸಲಿ ಎಂದು ಜಿಲ್ಲೆಯ ಜನತೆ ಆಶಿಸಿದ್ದಾರೆ.

Latest Videos
Follow Us:
Download App:
  • android
  • ios