ಬೆಂಗಳೂರಿನ ಮೊದಲ ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಒತ್ತಾಯ

ಶಿವಾನಂದ ವೃತ್ತದ ಬಳಿ ನಿರ್ಮಾಣ ಮಾಡಿರೋ ಸ್ಟೀಲ್ ಫ್ಲೈ ಓವರ್ ಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹೆಸರಿಡುವಂತೆ  ಒತ್ತಡ ಹೆಚ್ಚಿದೆ.

demand for Puneeth rajkumar name for  Bengaluru's steel flyover gow

ಬೆಂಗಳೂರು (ಅ.14): ಶಿವಾನಂದ ವೃತ್ತದ ಬಳಿ ನಿರ್ಮಾಣ ಮಾಡಿರೋ ಸ್ಟೀಲ್ ಫ್ಲೈ ಓವರ್ ಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹೆಸರಿಡುವಂತೆ  ಒತ್ತಡ ಹೆಚ್ಚಿದೆ. ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಅವರು ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಆಡಳಿತಾಧಿಕಾರಿಗೆ ರಮೇಶ್ ಮನವಿ ಮಾಡಿದ್ದಾರೆ. ಫಿಲ್ಮಂ ಛೇಂಬರ್ ಮುಂಭಾಗವಿರೋ ಫ್ಲೈ ಓವರ್ ಆಗಿರೋದ್ರಿಂದ ಪುನೀತ್ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಉಕ್ಕಿನ‌ ಸೇತುವೆ ‌ನಿರ್ಮಾಣದ ವೇಳೆ ಕಾಮಾಗಾರಿಗೆ ಅತೀ ಹೆಚ್ಚು ತೊಂದರೆ ಕೊಟ್ಟವರು ಶಿವಾನಂದ ಸ್ಟೋರ್ ಮಾಲೀಕರು, ಈವಾಗ ಸ್ಟೀಲ್ ಫ್ಲೈ ಓವರ್ ಗೆ ಅದೇ ಸ್ಟೋರ್ ಹೆಸರು ನಾಮಕರಣ ಮಾಡೋದು ಸರಿ ಅಲ್ಲ. ಸ್ಥಳೀಯ ನಾಗರೀಕರ ಪ್ರಕಾರ ಸ್ಟೀಲ್ ಬ್ರಿಡ್ಜ್ ಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜರ ಕುಮಾರ್ ಹೆಸರಿಡೋದೆ ಸರಿ ಎಂದು ಹೇಳಿದ್ದಾರೆ.

 ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳ ಮೇಲ್ಸೇತುವೆಗೆ ಮರುಜೀವ: ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾದ ಚಾಲುಕ್ಯ ಸರ್ಕಲ್‌ನಿಂದ (ಬಸವೇಶ್ವರ ವೃತ್ತ) ಹೆಬ್ಬಾಳವರೆಗಿನ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಬಿಬಿಎಂಪಿ ಮರು ಜೀವ ನೀಡಲು ಸಿದ್ಧತೆ ನಡೆಸಿದೆ.

ಬಿಡಿಎಯಿಂದ ರೂಪಿಸಲಾಗಿದ್ದ ಚಾಲುಕ್ಯವೃತ್ತದಿಂದ ಹೆಬ್ಬಾಳದವರೆಗೆ ಆರು ಪಥದ 6.7 ಕಿ.ಮೀ. ಉದ್ದದ ಬರೋಬ್ಬರಿ 1,350 ಕೋಟಿ ರು. ವೆಚ್ಚದ ಸ್ಟೀಲ್‌ ಫ್ಲೈಓವರ್‌ (ಉಕ್ಕಿನ ಮೇಲ್ಸೇತುವೆ) ನಿರ್ಮಾಣ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ 2016ರಲ್ಲಿ ಅಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಇದೀಗ ಅದೇ ಯೋಜನೆಗೆ ಮರು ಜೀವನ ನೀಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಆದರೀಗ ಮೇಲ್ಸೇತುವೆಯನ್ನು ಉಕ್ಕಿನ ಅಥವಾ ಕಾಂಕ್ರೀಟ್‌ ರೂಪದಲ್ಲಿ ನಿರ್ಮಿಸಬೇಕೆ? ಮೇಲ್ಸೇತುವೆ ನಿರ್ಮಾಣಕ್ಕೆ ಎಷ್ಟುವೆಚ್ಚವಾಗಲಿದೆ?, ಶಿವಾನಂದ ವೃತ್ತದಲ್ಲಿ ನಿರ್ಮಿಸಲಾದ ಉಕ್ಕು ಹಾಗೂ ಕಾಂಕ್ರಿಟ್‌ ಎರಡನ್ನೂ ಒಳಗೊಂಡ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅದರೊಂದಿಗೆ ಅರಮನೆ ಮೈದಾನ ಹಾಗೂ ಗಾಲ್‌್ಫ ಕ್ಲಬ್‌ನ ಭೂ ಸ್ವಾಧೀನ ಪಡಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಹೀಗೆ ಹಲವು ವಿಷಯಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಚರ್ಚಿಸಿದ್ದಾರೆ.

ಫ್ಲೈಓವರ್‌ನ ವಿನ್ಯಾಸ, ಯೋಜನಾ ವೆಚ್ಚ ಅಂತಿಮಗೊಂಡ ಬಳಿಕ ಯೋಜನೆಯಿಂದಾಗುವ ಪ್ರಯೋಜನಗಳು ಸೇರಿ ಇನ್ನಿತರ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು. ಸರ್ಕಾರದಿಂದ ಅನುಮೋದನೆ ಹಾಗೂ ಅನುದಾನ ದೊರೆತ ನಂತರ ಟೆಂಡರ್‌ ಆಹ್ವಾನಿಸಿ ಮುಂದಿನ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ಚಾಲುಕ್ಯ ವೃತ್ತದಿಂದ ಹೆಬ್ಬಾಳ ಹಾಗೂ ಹೆಬ್ಬಾಳದಿಂದ ಚಾಲುಕ್ಯ ವೃತ್ತಕ್ಕೆ ಸಂಪರ್ಕಿಸುವ ಎರಡೂ ಮಾರ್ಗದಲ್ಲಿ ಒಟ್ಟು ನಾಲ್ಕರಿಂದ ಐದು ಡೌನ್‌ ರಾರ‍ಯಂಪ್‌ ನಿರ್ಮಿಸಲು ಚರ್ಚಿಸಲಾಗಿದೆ. ಪ್ರಮುಖವಾಗಿ ಮೇಖ್ರಿ ವೃತ್ತದಲ್ಲಿ ಸಂಜಯನಗರ ಕಡೆ ತೆರಳಲು, ಸ್ಯಾಂಕಿ ಕೆರೆ ಕಡೆಗೆ ತೆರಳಲು ಕಾವೇರಿ ಜಂಕ್ಷನ್‌ ಬಳಿ, ಆರ್‌ಟಿ ನಗರ ಕಡೆ ತೆರಳಲು ಬಿಡಿಎ ಕಚೇರಿ ಬಳಿ, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಕಡೆಗೆ ಡೌನ್‌ ರಾರ‍ಯಂಪ್‌ಗಳನ್ನು ನಿರ್ಮಿಸಲಾಗುತ್ತದೆ. ಅದರ ಜತೆಗೆ ಈಗಾಗಲೇ ಇರುವ ಬಿಡಿಎ ಕೇಂದ್ರ ಕಚೇರಿ ಬಳಿ, ಸಿಬಿಐ ಜಂಕ್ಷನ್‌, ಮೇಖ್ರಿ ವೃತ್ತದ ಮೇಲ್ಸೇತುವೆ ಹಾಗೂ ವಿಂಡ್ಸರ್‌ ಮ್ಯಾನರ್‌ ಬಳಿಯ ರೈಲ್ವೆ ಮೇಲ್ಸೇತುವೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ಫ್ಲೈಓವರ್‌ ನಿರ್ಮಾಣಕ್ಕೆ ಚರ್ಚೆ ನಡೆಸಲಾಗುತ್ತಿದೆ.

Latest Videos
Follow Us:
Download App:
  • android
  • ios