ದಾವಣಗೆರೆ: ಹೊಲಿಗೆ ಕೆಲಸಗಾರರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ, ಡಿಸಿಗೆ ಮನವಿ

ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಂಖ್ಯಾತ ಹೊಲಿಗೆ ಕೆಲಸಗಾರರಿದ್ದಾರೆ, ಹೊಲಿಗೆ ಕೆಲಸದಿಂದ ಬರುವ ಅಲ್ಪ ಆದಾಯದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೊಲಿಗೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ: ಕೆ.ಜಿ ಯಲ್ಲಪ್ಪ 

Demand for Establishment of Garment Workers Welfare Board grg

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ

ದಾವಣಗೆರೆ(ಅ.20):  ಹೊಲಿಗೆ ಕೆಲಸಗಾರರ ಕಲ್ಯಾಣ ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ಜಿ ಯಲ್ಲಪ್ಪ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರಿಗೆ ಮನವಿ ಸಲ್ಲಿಸಿದರು.  ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಂಖ್ಯಾತ ಹೊಲಿಗೆ ಕೆಲಸಗಾರರಿದ್ದಾರೆ, ಹೊಲಿಗೆ ಕೆಲಸದಿಂದ ಬರುವ ಅಲ್ಪ ಆದಾಯದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೊಲಿಗೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೊಲಿಗೆ ಕೆಲಸಗಾರರಿಗೆ ಈವರೆಗೆ ಯಾವುದೇ ಸರ್ಕಾರಗಳು ಮಾನವೀಯ ನೆಲೆಯಲ್ಲಿ ಯಾವ ಸೌಲಭ್ಯಗಳನ್ನೂ ಒದಗಿಸದೇ ಇರುವುದು ದುರದೃಷ್ಟಕರ ಸಂಗತಿ ಅಂತ ತಿಳಿಸಿದ್ದಾರೆ. 

ಅದರಲ್ಲೂ ಕೋವಿಡ್ ನಿಂದ ಸಂಕಷ್ಟಕ್ಕೀಡಾದ ದರ್ಜಿಗಳ ಕುಟುಂಬಗಳು ಇನ್ನೂ ಸುಧಾರಿಸಿಕೊಂಡಿಲ್ಲ. ಆಗ ಬೀದಿಗೆ ಬಿದ್ದ ಅನೇಕ ದರ್ಜೆಗಳ ಕುಟುಂಬಗಳಿಗೆ, ಇದುವರೆಗೆ ಸರಿಯಾದ ನೆಲೆಯಿಲ್ಲ, ದರ್ಜೆಗಳಿಗೆ ಯಾವುದೇ ವಿಮೆಯಾಗಲೀ, ಭವಿಷ್ಯನಿಧಿಯಾಗಲೀ ಇರುವುದಿಲ್ಲ. ದರ್ಜೆಗಳಿಗೆ ಸೇವಾ ಭದ್ರತೆಯೇ ಇಲ್ಲ. ಪಕ್ಕದ ರಾಜ್ಯವಾದ ಕೇರಳದಲ್ಲಿ ಅನೇಕ ವರ್ಷಗಳಿಂದ ಅಲ್ಲಿನ ರಾಜ್ಯ ಸರ್ಕಾರ "ಟೈಲರ್ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಟೈಲರ್‌ಗಳ ಹಿತವನ್ನು ಕಾಪಾಡುತ್ತಿದೆ ಅಂತ ಹೇಳಿದ್ದಾರೆ. 

ದಾವಣಗೆರೆ: ಪಾಲಿಕೆಯ ಇತಿಹಾಸದಲ್ಲೇ ಇಂತಹ ಕೆಟ್ಟ ಆಡಳಿತ ನೋಡಿಲ್ಲ, ಗಡಿಗುಡಾಳ್ ಮಂಜುನಾಥ್

ಸರ್ಕಾರದ ವತಿಯಿಂದ ಸೌಲಭ್ಯಗಳಿಲ್ಲದ, ಸ್ವಯಂ ಉದ್ಯೋಗಕ್ಕೆ ಸೂಕ್ತ ಸಂಭಾವನೆ ದೊರಕದೇ ಈ ಉದ್ಯೋಗ ನಿರತರು ಆತ್ಯಂತ ದುಸ್ಥಿತಿಯಲ್ಲಿ ಜೀವನ ನಿರ್ವಹಿಸಬೇಕಾಗಿದೆ. ಆದ್ದರಿಂದ ಹೊಲಿಗೆ ಕೆಲಸಗಾರರ ಅನೇಕ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಕರ್ನಾಟಕ ರಾಜ್ಯ ಸರ್ಕಾರ "ಟೈಲರ್ ಕಲ್ಯಾಣ ಮಂಡಳಿ'ಯನ್ನು ಸ್ಥಾಪಿಸಿ, ಬಡ ಟೈಲರ್‌ಗಳ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.
 

Latest Videos
Follow Us:
Download App:
  • android
  • ios