ಮಂಗಳೂರು(ಜು.29): ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿ ಎಚ್ಚರಿಕೆ ನೀಡಿದ್ದ ದ.ಕ ನಿರ್ಗಮನ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ಗೆ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.

ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸಂಘರ್ಷಕ್ಕೆ ಅವಕಾಶ ನೀಡದೆ, ಪೊಲೀಸರಿಗೆ ದೂರು ನೀಡಬೇಕು ಎಂದು ಸೋಮವಾರ ನಡೆದ ಸಭೆಯಲ್ಲಿ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದರು.

ಬಿಬಿಎಂಪಿಯಿಂದ ದೂರು ದಾಖಲು: ಕಟ್ಟಡ ನಕ್ಷೆ ರದ್ದು

ಇದು ಜಾಲತಾಣಗಳಲ್ಲಿ ಪ್ರಚುರವಾಗಿತ್ತು. ಇದಕ್ಕೆ ಜಾಲತಾಣದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ತುಳು ಭಾಷೆಯಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ. ‘ಫಸ್ಟ್‌ ಮೊಲೆನ್‌ ಕತ್‌ರ್‍ ಕೆರೊಡು’(ಮೊದಲು ಇವಳನ್ನು ಕಡಿದು ಕೊಲ್ಲಬೇಕು) ಎಂದು ಬೆದರಿಕೆ ಮಾತುಗಳನ್ನು ಪೋಸ್ಟ್‌ ಮಾಡಲಾಗಿದೆ.

ನಮ್ಮ ಹಿಂದುತ್ವ, ನಮ್ಮ ದೇವರಿಗೆ ಧಕ್ಕೆಯಾದರೆ ನಾವು ಯಾವುದಕ್ಕೂ ಸಿದ್ಧವಾಗಿದ್ದೇವೆ ಎಂಬ ಎಚ್ಚರಿಕೆ ಮಾತು ಪೋಸ್ಟ್‌ನಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಮಂಗಳೂರು ಪೊಲೀಸರು ಸ್ವಯಂ ಆಗಿ ತನಿಖೆ ಕೈಗೆತ್ತಿಕೊಂಡಿದ್ದಾರೆ.