ವಿರೋಧ ಪಕ್ಷದವರು ಇರೋದೆ ನಮ್ಮನ್ನು ತೆಗಳೋಕೆ, ಅವರೇನು ನಮ್ಮನ್ನ ಹೊಗಳ್ತಾರಾ?

ದೇಶದ ಸಂವಿಧಾನದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದ್ದು ತಪ್ಪಲ್ಲ| ಸಂವಿಧಾನದ ಬಗ್ಗೆ ಸಿದ್ದರಾಮಯ್ಯಗೆ ತಿಳುವಳಿಕೆ ಕೊಟ್ಟಿದ್ದೇವೆ| ದೇಶದ ಸಂವಿಧಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕರ್ತವ್ಯ ಪ್ರಧಾನಿ ಮಾಡಿದ್ದಾರೆ| ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಲಕ್ಷ್ಮಣ ಸವದಿ|

DCM Laxman Savadi Talks Over Opposition Parties

ವಿಜಯಪುರ(ಜ.04): ವಿರೋಧ ಪಕ್ಷದವರು ಇರೋದೆ ನಮ್ಮನ್ನು ಹೊಗಳಲು ಅಲ್ಲ, ನಮ್ಮನ್ನು ತೆಗಳೋಕೆ, ರಾಜಕೀಯಗೋಸ್ಕರ ಅವರು ಅನೇಕ ಟೀಕೆ ಟಿಪ್ಪಣೆಗಳನ್ನು ಮಾಡುತ್ತಾರೆ. ಅವುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಶನಿವಾರ ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ಕೃಷಿ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ತುಮಕೂರಿನಲ್ಲಿ ಮೋದಿ ಕಾರ್ಯಕ್ರಮದ ಬಗ್ಗೆ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ ವಿಚಾರದ ಬಗ್ಗೆ  ಮಾತನಾಡಿದ ಅವರು, ಆದ್ರೆ ವಿರೋಧ ಪಕ್ಷದವರು  ಅವಲೋಕನ ಮಾಡಿ ಮಾತಾಡಬೇಕಿತ್ತು. ದೇಶದ ಸಂವಿಧಾನದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದ್ದು ತಪ್ಪಲ್ಲ. ಅದರ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳುವಳಿಕೆ ಕೊಟ್ಟಿದ್ದೇವೆ. ದೇಶದ ಸಂವಿಧಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕರ್ತವ್ಯ ಪ್ರಧಾನಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸಿಎಂ ಸ್ಥಾನಗಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಸ್ಥಾನಗಳ ಬಗ್ಗೆ ನಾನು ಹಾದಿಬೀದಿಯಲ್ಲಿ ಮಾತನಾಡುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಅದು ಚರ್ಚೆ ಆಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಮೂವರು ಡಿಸಿಎಂಗಳಾದ ನಾವು ವಿಶೇಷ ಭದ್ರತೆ ತಗೆದುಕೊಂಡಿಲ್ಲ. ನಾವೇನು ಝಿರೋ ಟ್ರಾಫಿಕ್ ತಗೊಂಡಿಲ್ಲ. ಸಚಿವರಿಗೆ ಏನು ಭದ್ರತೆ ಇರುತ್ತೆ. ಅದನ್ನು ನಾವು ತೆಗೆದುಕೊಂಡಿದ್ದೇವೆ. ಹಿಂದಿನ ಸರ್ಕಾರದಲ್ಲಿ ಜಿ. ಪರಮೇಶ್ವರ ಅವರು ಝಿರೋ ಟ್ರಾಫಿಕ್ ತಗೊಂಡಿದ್ರು, ಹಾಗಾಗಿ ಅದು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹಾಗಾಗಿ ನಾವು ಝಿರೋ ಟ್ರಾಫಿಕ್ ಸೌಲಭ್ಯ ತಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. 

ಸಚಿವ ಸಂಪುಟ ವಿಸ್ತರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಾರೆ. ಅದರ ಪರಮಾಧಿಕಾರ ಅವರಿಗೆ ಇರುತ್ತೆ‌ ಎಂದು ತಿಳಿಸಿದ್ದಾರೆ. ಅಥಣಿ, ಕಾಗವಾಡಕ್ಕೆ ಸಚಿವ ಸ್ಥಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಿಗೂ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದೇವೆ ನೊಡೋಣ ಎಂದು ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಭಾಗವಹಿಸಿದ್ದರು. 
 

Latest Videos
Follow Us:
Download App:
  • android
  • ios