ಅಥಣಿ(ನ.30): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಉಲ್ಟಾ ಭವಿಷ್ಯಗಾರ, ಆತ ನುಡಿದ ಭವಿಷ್ಯ ಎಲ್ಲವೂ ತಲೆ ಕೆಳೆಗಾಗುತ್ತವೆ. ತಿಪ್ಪರಲಾಗ ಅವರ ಸಂಕೇತ, ತಿಪ್ಪರಲಾಗ ಅಂದ್ರೆ ತಲೆ ಕೆಳಗೆ ಕಾಲು ಮೇಲೆ, ಅವರು ಏನೇ ಹೇಳಿದ್ರು ಅದು ಉಲ್ಟಾ ಆಗುತ್ತದೆ. ಅವರು ಏನು ಭವಿಷ್ಯ ಹೇಳ್ತಾರೋ ಅದನ್ನ ವಿರುದ್ಧವಾಗಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ಡಿ. 9 ಕ್ಕೆ ಬಿಜೆಪಿ ಸರ್ಕಾರ ಪತನ ಪಿಕ್ಸ್ ಎಂದು ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಶನಿವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಓರ್ವ ಒಳ್ಳೆಯ ಭವಿಷ್ಯಗಾರರಾಗಿದ್ದಾರೆ. ಅವರು ಈಗ ಸರ್ಕಾರ ಬರುತ್ತೆ ಅಂತಾ ಹೇಳಿದ್ದಾರೆ ಅದು ಬರಲ್ಲ ಎಂದು ಲೇವಡಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಂ ಬಿ ಪಾಟೀಲ ಮತ್ತೆ ನೀರಾವರಿ ಸಚಿವ ಆಗ್ತಾರೆ ಎಂದಿದ್ದಾರೆ ಅದು ಆಗಲ್ಲ, ಸಿದ್ದರಾಮಯ್ಯಗೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಇಷ್ಟವಿಲ್ಲ. ತಮ್ಮ ಸರ್ಕಾರ ಬಂದ್ರೆ ಅವರಿಗೆ ಅಧಿಕಾರ ಸಿಗಲ್ಲ ಅನ್ನೋದು ಗೊತ್ತಿದೆ. ಕಾಂಗ್ರೆಸ್ ನಲ್ಲಿ ನಾಲ್ಕು ಗುಂಪುಗಳಿವೆ, ಅದ್ರಲ್ಲಿ ಮೂರು ಗುಂಪುಗಳು ಸಿದ್ದು ರಾಜೀನಾಮೆಗೆ ಕಾಯುತ್ತಿವೆ. ತಾವು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಲು ಹೊಂಚು ಹಾಕಿ‌ ಕುಳಿತಿದ್ದಾರೆ ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.