ಕೊರೋನಾ ರೋಗ ತಡೆಗಟ್ಟುವುದು ಸಾರ್ವಜನಿಕರ ಕೈಯಲ್ಲಿದೆ: ಡಿಸಿಎಂ ಕಾರಜೋಳ

ಬಿಪಿಎಲ್‌ ಕಾರ್ಡ್‌ದಾರರಿಗೆ, ತೊಂದರೆಯಾಗಬಾರದು ಎಂದು ರೇಶನ್‌ ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ| ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ವಿಚಾರ ಇಲ್ಲ, ಅದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸರ್ಕಾರದ ಎದುರು ಪ್ರಸ್ತಾವನೆ ಇಲ್ಲ ಎಂದು ಲಾಕ್‌ಡೌನ್‌ ವಿಚಾರ ತಳ್ಳಿ ಹಾಕಿದ ಕಾರಜೋಳ|

DCM Govind Karjol Talks Over how to Prevent Coronavirus

ಧಾರವಾಡ(ಜು.01): ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ. ಆದರೆ, ಈ ವಿಷಯದಲ್ಲಿ ಸಾರ್ವಜನಿಕರ ಜವಾಬ್ದಾರಿ ಜಾಸ್ತಿ ಇದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಂಗಳವಾರ ಸಂಜೆ ಧಾರವಾಡಕ್ಕೆ ದಿಢೀರ್‌ ಆಗಮಿಸಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೋಗ ತಡೆಗಟ್ಟುವುದು ಸಾರ್ವಜನಿಕರ ಕೈಯಲ್ಲಿದೆ. ರಾಜ್ಯದಲ್ಲಿ ಕೋವಿಡ್‌ ಹೆಚ್ಚಾಗುತ್ತಿದೆ. ಹೊರಗಡೆಯಿಂದ ಬಂದವರಿಂದ, ವಲಸೆ ಕಾರ್ಮಿಕರಿಂದ, ಅವರೆಲ್ಲರೂ ಹೊರಗಡೆ ಓಡಾಡುತ್ತಿರುವುದರಿಂದ ಹೆಚ್ಚಾಗುತ್ತಿದೆ ಎಂದರು.

ಮತ್ತೆ ಲಾಕ್‌ಡೌನ್‌: ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಕ್ರಮ, ಸಚಿವ ಶೆಟ್ಟರ್‌

ಕೇಂದ್ರ ಸರ್ಕಾರ ನವೆಂಬರ್‌ವರೆಗೂ ಪಡಿತರ ಹಂಚಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಪಿಎಲ್‌ ಕಾರ್ಡ್‌ದಾರರಿಗೆ, ತೊಂದರೆಯಾಗಬಾರದು ಎಂದು ರೇಶನ್‌ ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ವಿಚಾರ ಇಲ್ಲ, ಅದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸರ್ಕಾರದ ಎದುರು ಪ್ರಸ್ತಾವನೆ ಇಲ್ಲ ಎಂದು ಲಾಕ್‌ಡೌನ್‌ ವಿಚಾರ ತಳ್ಳಿ ಹಾಕಿದರು.

ಕೋವಿಡ್‌ ನಿಯಂತ್ರಿಸಲು ಸರ್ಕಾರ ವಿಫಲತೆ ಎಂದು ವಿರೋಧ ಪಕ್ಷದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಹೊಗಳಿದ್ದನ್ನು ನೋಡಿದ್ದೇವೆ. ತೆಗಳಿದ್ದನ್ನು ನೋಡಿದ್ದೇವೆ. ಈಗ ಹೀಗೆ ಹೇಳಿದ್ರೆ ಏನು ಹೇಳುವುದು? ರೋಗ ತಡೆಗಟ್ಟುವದು ಜನರ ಕೈಯಲ್ಲಿದೆ ಎಂದರು.
 

Latest Videos
Follow Us:
Download App:
  • android
  • ios