ಮಾಗಡಿ(ನ.27): ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಸಚಿವರಾಗಬೇಕು ಎಂಬುದು ನಮ್ಮೆಲ್ಲರ ಆಸೆ ಎಂದು ಉಪ ​ಮು​ಖ್ಯ​ಮಂತ್ರಿ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ ಪ್ರತಿ​ಕ್ರಿಯೆ ನೀಡಿ​ದ​ರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಚಿವ ಸಂಪುಟದ ವಿಸ್ತರಣೆಯನ್ನು ಮುಖ್ಯಮಂತ್ರಿಗಳು ವರಿಷ್ಠರೊಂದಿಗೆ ಸಮಾಲೋಚನೆ ಮಾಡಿ ನಿಶ್ಚಯ ಮಾಡುತ್ತಾರೆ. ಯಾರು ಯಾರನ್ನು ಸಚಿವರನ್ನಾಗಿಸಬೇಕು ಎಂದು ಮುಖ್ಯಮಂತ್ರಿಗಳು ವರಿಷ್ಠರೊಂದಿಗೆ ಸಮಾಲೋಚನೆ ಮಾಡಿ ಮಂತ್ರಿ ಸ್ಥಾನ ಕೊಡುತ್ತಾರೆ ಎಂದರು.

ಒಕ್ಕಲಿಗರ ಅಭಿವೃದ್ಧಿ ನಿಗಮ ತ್ವರಿತವಾಗಿ ಆಗಲಿಕ್ಕೆ ಒತ್ತಾಯ ಮಾಡಿದ್ದು, ನಾನು ಸಹ ಆ ಪ್ರಯತ್ನದಲ್ಲಿ ಕೈಜೋಡಿಸುವ ಕೆಲಸ ಮಾಡುತ್ತಿದ್ದೇನೆ. ಒಕ್ಕಲಿಗರಿಗೆ ನಿಗಮವಾಗುವುದು ಅವಶ್ಯಕತೆ ಇದೆ. ಇದನ್ನು ಮಾಡಲು ಸರ್ಕಾರ​ದಲ್ಲಿ ಎಲ್ಲ ಪ್ರಯತ್ನ ಮಾಡಿ ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತೇನೆ. ಡಿ. 5ರಂದು ಕರ್ನಾಟಕ ಬಂದ್‌ ಮಾಡಲು ಸರ್ಕಾರ ಒಪ್ಪುವುದಿಲ್ಲ. ಅವರವರ ಸ್ವಾತಂತ್ರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ಕಾರ ಎಲ್ಲರಿಗೂ ಸಲ್ಲುವಂತಹದ್ದು. ಮರಾಠ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಅವಶ್ಯಕತೆ ಇದ್ದು, ಇದನ್ನು ಸರ್ಕಾರ ಪೂರೈಸುತ್ತಿದೆ ಎಂದು ಹೇಳಿದರು.

ಮತ್ತೆ ಸ್ವ ಕ್ಷೇತ್ರಕ್ಕೆ ಹೋದ್ರು ಅನಿತಾ : ಇದೇ ವೇಳೆ ವಾರ್ನಿಂಗ್ ಕೊಟ್ರು

ಶಾಸಕ ಎ.ಮಂಜುನಾಥ್‌ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅಶ್ವತ್ಥ ನಾರಾ​ಯಣ ಅವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿ​ದರು. ತಿಪ್ಪಸಂದ್ರ ಹೋಬಳಿಯಲ್ಲಿ ಪ್ರಾರಂಭಿಸಲಿರುವ ಸಂಸ್ಕೃತ ವಿಶ್ವವಿದ್ಯಾಲಯದ ನೀಲಿ ನಕ್ಷೆ ತಯಾರು ಮಾಡುತ್ತಿದ್ದು, ಯಾವ ರೀತಿ ಕಟ್ಟಬೇಕು, ಎಂದು ತಯಾರಿ ಮಾಡಿದ್ದು, ಈ ಬಗ್ಗೆ ಮುಂದಿನ ವಾರ ಸಭೆ ಮಾಡುತಿದ್ದೇವೆ. ಹೊಸದಾಗಿ ಉಪ ಕುಲ​ಪತಿ ಬಂದಿದ್ದು, ಅವರ ಜೊತೆಯಲ್ಲಿ ಸಮಾಲೋಚನೆ ಮಾಡಿ ಸಲಹೆಗಳನ್ನು ಪಡೆಯುತ್ತೇವೆ. ಉತ್ತಮವಾದ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತೇವೆ ಎಂದು ಡಿಸಿಎಂ ಡಾ.ಸಿ.ಎನ್‌.ಅ​ಶ್ವತ್ಥ ನಾರಾ​ಯಣ ತಿಳಿಸಿದ್ದಾರೆ. 

ಈ ಸಂದ​ರ್ಭ​ದಲ್ಲಿ ಜಿಪಂ ಅಧ್ಯಕ್ಷ ಎಚ್‌.ಎನ್‌.ಅಶೋಕ್‌, ವಿಧಾನ ಪರಿ​ಷತ್‌ ಸದಸ್ಯ ಅ.ದೇವೇಗೌಡ, ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಸದಸ್ಯೆ ಚಂದ್ರಮ್ಮನಂಜಯ್ಯ, ಪುರಸಭಾಧ್ಯಕ್ಷೆ ಭಾಗ್ಯಮ್ಮ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಪ್ರಾಧಿಕಾರದ ಅಧ್ಯಕ್ಷ ಡಾ.ರಂಗಧಾಮಯ್ಯ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ತಾಪಂ ಸದಸ್ಯೆ ಸುಮ ರಮೇಶ್‌, ಜಿಪಂ ಮಾಜಿ ಸದಸ್ಯ ವಿಜಯ್‌ ಕುಮಾರ್‌, ಕೆಡಿಪಿ ಸದಸ್ಯ ನಾಗರಾಜ್‌ ಹಾ​ಜ​ರಿ​ದ್ದರು.