ಚುನಾವಣಾ ಕಾರ್ಯಕ್ಕಾಗಿ ಕರ್ಫ್ಯೂನಿಂದ ವಿನಾಯ್ತಿ ಕೇಳಿದ ಡಿಸಿ​ಎಂ ಅ​ಶ್ವತ್ಥ್‌..!

ನಗ​ರ​ಸಭೆ ಚುನಾ​ವ​ಣೆಯಲ್ಲಿ ಬಿಜೆಪಿ ಅಭ್ಯರ್ಥಿ​ಗಳ ಪರ ಪ್ರಚಾರ ನಡೆ​ಸಲು ಆಗ​ಮಿ​ಸಿದ್ದ ಅಶ್ವತ್ಥ ನಾರಾ​ಯ​ಣ| ಜಿಲ್ಲಾ​ಧಿಕಾರಿ ಡಾ.ಕೆ.​ರಾ​ಕೇಶ್‌ ಕುಮಾರ್‌ರನ್ನು ದೂರ​ವಾಣಿ ಮೂಲಕ ಸಂಪ​ರ್ಕಿಸಿ ವೀಕೆಂಡ್‌ ಕರ್ಫ್ಯೂನಿಂದ ವಿನಾಯ್ತಿ ಕೋರಿ​ದ ಡಿಸಿಎಂ|  ಸಚಿವರ ನಡೆಗೆ ವ್ಯಾಪಕ ಟೀಕೆ| 

DCM Ashwathnarayan Asked DC for Exemption From Curfew for Election Work grg

ರಾಮ​ನ​ಗ​ರ(ಏ.23): ನಗ​ರ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಶನಿ​ವಾರ ರಾಮ​ನ​ಗ​ರ​ದಲ್ಲಿ ವೀಕೆಂಡ್‌ ಕರ್ಫ್ಯೂನಿಂದ ವಿನಾಯ್ತಿ ನೀಡು​ವಂತೆ ಉಪ​ಮು​ಖ್ಯ​ಮಂತ್ರಿಯೂ ಆಗಿರುವ ಜಿಲ್ಲಾ ಉಸ್ತು​ವಾರಿ ಸಚಿ​ವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯ​ಣ ಅ​ವರು ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ದೂರ​ವಾಣಿ ಮೂಲಕ ಮನವಿ ಮಾಡಿ​ರುವ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಚುನಾವಣಾ ಕಾರ್ಯಕ್ಕೆ ವಿನಾಯ್ತಿ ಕೇಳಿರುವ ಸಚಿವರ ನಡೆ ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ.

ನಗ​ರ​ಸಭೆ ಚುನಾ​ವ​ಣೆಯಲ್ಲಿ ಬಿಜೆಪಿ ಅಭ್ಯರ್ಥಿ​ಗಳ ಪರ ಪ್ರಚಾರ ನಡೆ​ಸಲು ಆಗ​ಮಿ​ಸಿದ್ದ ಅಶ್ವತ್ಥ ನಾರಾ​ಯ​ಣ ಅವರು ಜಿಲ್ಲಾ​ಧಿಕಾರಿ ಡಾ.ಕೆ.​ರಾ​ಕೇಶ್‌ ಕುಮಾರ್‌ರನ್ನು ದೂರ​ವಾಣಿ ಮೂಲಕ ಸಂಪ​ರ್ಕಿಸಿ ವೀಕೆಂಡ್‌ ಕರ್ಫ್ಯೂನಿಂದ ವಿನಾಯ್ತಿ ಕೋರಿ​ದ್ದಾ​ರೆ.

ಮಾಲಾಧಾರಿಯಾಗಿ ಅಯ್ಯಪ್ಪ ದರ್ಶನ ಪಡೆದ ಡಿಸಿಎಂ ಅಶ್ವಥ್ ನಾರಾಯಣ

ಶನಿ​ವಾರ ತಮ್ಮ ಪಕ್ಷದ ಪ್ರಣಾ​ಳಿಕೆ ಬಿಡು​ಗಡೆ, ಮಾಧ್ಯಮ ಪ್ರತಿ​ನಿ​ಧಿ​ಗ​ಳೊಂದಿಗೆ ಮಾತ​ನಾಡುವ ಕಾರ್ಯಕ್ರಮ ಇದ್ದು, ಕರ್ಫ್ಯೂ ಇದ್ದರೆ ಅದು ಸಾಧ್ಯ​ವಾ​ಗು​ವು​ದಿಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ವಿನಾಯ್ತಿ ನೀಡುವಂತೆ ಸಾರ್ವ​ಜ​ನಿ​ಕರ ಎದುರಿ​ನಲ್ಲೇ ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಮನವಿ ಮಾಡಿ​ದರು. ಸರ್ಕಾ​ರದ ಮುಖ್ಯ ಕಾರ್ಯ​ದ​ರ್ಶಿ​ಗಳು ಅನು​ಮತಿ ನೀಡಿ​ದರೆ ಅವ​ಕಾಶ ಮಾಡಿ​ಕೊ​ಡು​ವು​ದಾಗಿ ಜಿಲ್ಲಾ​ಧಿ​ಕಾ​ರಿ​ಗಳು ಪ್ರತಿ​ಕ್ರಿ​ಯಿ​ಸಿ​ದ್ದಾರೆ ಎಂದು ಗೊತ್ತಾ​ಗಿದೆ. ಈ ಸಂಭಾ​ಷ​ಣೆಯ ವಿಡಿಯೋ ಈಗ ಸಾಮಾ​ಜಿಕ ಜಾಲ​ತಾ​ಣ​ದ​ಲ್ಲಿ ಹರಿ​ದಾ​ಡು​ತ್ತಿದ್ದು, ಟೀಕೆ​ಗಳು ವ್ಯಕ್ತ​ವಾ​ಗಿ​ವೆ.
 

Latest Videos
Follow Us:
Download App:
  • android
  • ios