ಚಿತ್ರದುರ್ಗ: ಡಿಎಂಎಫ್ ಹಣ ದುರುಪಯೋಗ ಅಧಿಕಾರಿಗಳು ಡಿಸ್ಮಿಸ್ ಮಾಡಿ ಡಿಸಿ ಆದೇಶ
ಸರ್ಕಾರದ ಹಣ ದುರುಪಯೋಗ ಆಗದಿರಲಿ ಅಂತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಗುತ್ತಿಗೆ ನೀಡೋದು ವಾಡಿಕೆ. ಆದ್ರೆ DMF ಫಂಡ್ ದುರುಪಯೋಗ ಮಾಡಿಕೊಂಡ ಇಬ್ಬರು ಅಧಿಕಾರಿಗಳು ಡಿಸ್‌ಮಿಸ್ ಆಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ..
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.24) ಸರ್ಕಾರದ ಹಣ ದುರುಪಯೋಗ ಆಗದಿರಲಿ ಅಂತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಗುತ್ತಿಗೆ ನೀಡೋದು ವಾಡಿಕೆ. ಆದ್ರೆ DMF ಫಂಡ್ ದುರುಪಯೋಗ ಮಾಡಿಕೊಂಡ ಇಬ್ಬರು ಅಧಿಕಾರಿಗಳು ಡಿಸ್‌ಮಿಸ್ ಆಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ..
ಬೃಹತ್ತಾಗಿ ತಲೆಯೆತ್ತಿರುವ ಕಟ್ಟಡಗಳು. ಕಾಮಗಾರಿ ಮುಗಿಯುವ ಮುನ್ನವೇ ಕಾಮಗಾರಿಯಲ್ಲಿ ಅಕ್ರಮದ ವಾಸನೆ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ನಗರದಲ್ಲಿ. ಹೌದು, ಸತತ 20 ವರ್ಷಗಳಿಂದ ಕೋಟೆನಾಡು ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಮೂಡಲಗಿರಿಯಪ್ಪ ಹಾಗು ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಎಂಬ ಇಬ್ಬರು ಅಧಿಕಾರಿಗಳು ಶಾಮೀಲಾಗಿ 12ಲಕ್ಷ ವೆಚ್ಚದ ನೀರಿನ ಘಟಕ ಕಾಮಗಾರಿಯ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಜಿಲ್ಲೆಯಾದ್ಯಂತ ಸರ್ಕಾರಿ ಕಟ್ಟಡ ನಿರ್ಮಾಣಮಾಡದೇ 93 ಲಕ್ಷಕ್ಕು ಅಧಿಕ ಹಣ ದುರುಪಯೋಗ ಮಾಡಿ ಕೊಂಡಿದ್ದಾರೆಂಬ ದೂರನ್ನು ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಡಿಸಿಗೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿದ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಆ ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.ಈ ವಿಚಾರ ಜಿಪಂ ಕೆಡಿಪಿ ಸಭೆಯಲ್ಲು ಪ್ರತಿಧ್ವನಿಸಿತು.
ಸದ್ಯಕ್ಕೆ ಮದ್ಯದ ದರ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ: ಅಬಕಾರಿ ಸಚಿವ ತಿಮ್ಮಾಪುರ
ಇನ್ನು ಇತ್ತೀಚೆಗೆ ನಡೆದಿದ್ದ 2023 ರ ಚುನಾವಣೆಗೆ ಜೆಡಿ ಎಸ್ ನಿಂದ ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿದ್ದರು. ಆದ್ರೆ ಮೂಡಲಗಿರಿಯಪ್ಪಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕಣದಿಂದ ಹಿಂದೆ ಸರಿದಿದ್ರು. ಹೀಗಾಗಿ ಈ ಆರೋಪದ ಬೆನ್ನಲ್ಲೇ ಸಚಿವ ಸುಧಾಕರ್ ಸಹ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದು, ಪ್ರಕರಣ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಒಟ್ಟಾರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಅಧಿಕಾರಿಗಳೇ ಸರ್ಕಾರದ ಅನುದಾನದಲ್ಲಿ ಅಕ್ರಮ ಎಸೆಗಿರೋದು ಬೇಲಿಯೇ ಎದ್ದು ಹೊಲವನ್ನು ಮೇಯ್ದ ರೀತಿಯಾಯ್ತು. ಹೀಗಾಗಿ ಇಂತಹ ವಂಚಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಉಗ್ರ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Viral video: ಮಹಿಳೆಯೊಂದಿಗೆ ಅನುಚಿತ ವರ್ತನೆ: ಸಾರಿಗೆ ಬಸ್ ನಿರ್ವಾಹಕನಿಗೆ ಬಿತ್ತು ಧರ್ಮದೇಟು