Asianet Suvarna News Asianet Suvarna News

ರಸ್ತೆ ಆಗೋವರ್ಗೂ ಮದುವೆಯಾಗಲ್ಲ, ಯುವತಿಯ ಹೋರಾಟಕ್ಕೆ ಡಿಸಿ ಸ್ಪಂದನೆ..!

- ರಸ್ತೆ ದುರಸ್ತಿಯಾಗುವವರೆಗು ಮದುವೆಯಾಗುವುದಿಲ್ಲವೆಂದು ಪಣ ತೊಟ್ಟಿದ್ದ ಯುವತಿಗೆ ಸ್ಪಂದಿಸಿದ ಸರ್ಕಾರ

- ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಯ ಕೊಂಡ ಹೋಬಳಿ ಹೆಚ್ ರಾಂಪುರ ಗ್ರಾಮಕ್ಕೆ ಭೇಟಿ 

- ಕಚ್ಚಾ ರಸ್ತೆ ದುರಸ್ತಿಗೆ ನಾಳೆಯಿಂದಲೇ ಕ್ರಮ ಕೈಗೊಳ್ಳುವ ಭರವಸೆ 

Davanagere Lady Vows Not To Marry Unless Her Village Gets Road DC assures to Repair Roads hls
Author
Bengaluru, First Published Sep 16, 2021, 2:53 PM IST

ದಾವಣಗೆರೆ (ಸೆ. 16): ರಸ್ತೆ ದುರಸ್ತಿಯಾಗುವವರೆಗೂ ಮದುವೆಯಾಗುವುದಿಲ್ಲವೆಂದು ಪಣ ತೊಟ್ಟಿದ್ದ ಯುವತಿಗೆ ಸರ್ಕಾರ ಸ್ಪಂದಿಸಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಾಯಕೊಂಡ ಹೋಬಳಿ ಹೆಚ್ ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಕಚ್ಚಾ ರಸ್ತೆ ದುರಸ್ತಿಗೆ ನಾಳೆಯಿಂದಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

"

ರಸ್ತೆ ರಿಪೇರಿ ನಂತರ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗುತ್ತದೆ  ಎಂದು ಗ್ರಾಮದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಯುವತಿಯೊಂದಿಗೆ ಪೋನ್ ನಲ್ಲಿ ಮಾತನಾಡಿ, ಭರವಸೆ ನೀಡಿದ್ದಾರೆ. 

ಹೆಚ್ ರಾಂಪುರ ಗ್ರಾಮ ಯುವತಿ ಆರ್ ಡಿ ಬಿಂದು ಎಂಬಾಕೆ ತಮ್ಮೂರಿಗೆ ರಸ್ತೆ ಆಗುವವರೆಗೂ ಮದುವೆ ಆಗುವುದಿಲ್ಲವೆಂದು ಪಣ ತೊಟ್ಟಿದ್ದರು ಇವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರಸ್ತೆ ಇಲ್ಲ ಎನ್ನುವ ಕಾರಣಕ್ಕೆ ಮದುವೆ ಮುರಿದು ಬಿದ್ದದ್ದಕ್ಕೆ ಮನನೊಂದ ಬಿಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ರಸ್ತೆ ಇಲ್ಲದೇ ಈ ಗ್ರಾಮಕ್ಕೆ ಹೆಣ್ಣು ಕೊಡುವುದಾಗಲಿ, ತೆಗೆದುಕೊಂಡು ಹೋಗುವುದಾಗಲಿ ಮಾಡುತ್ತಿಲ್ಲ. ಬಿಂದು ಅವರ ಸೈದ್ಧಾಂತಿಕ ಹೋರಾಟಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. 

 

Follow Us:
Download App:
  • android
  • ios