ಭೂ ಲೋಕ ನಡುಗಿತಲೇ ಎಚ್ಚರ : ಕಮ್ಮಾರಗಟ್ಟೆ ಕಾರ್ಣಿಕ

  • ಐತಿಹಾಸಿಕ ಪ್ರಸಿದ್ಧವಾದ ಹೆಳವನಕಟ್ಟೆ ಗಿರಿಯಮ್ಮನ ಪವಿತ್ರ ಕ್ಷೇತ್ರ ತಾಲೂಕಿನ ಕಮ್ಮಾರಗಟ್ಟೆ
  • ಕಮ್ಮಾರಗಟ್ಟೆಯಲ್ಲಿ ಪ್ರತಿ ವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ನಡೆಯಲಿರುವ  ಕಾರ್ಣಿಕ ಉತ್ಸವ 
  • ಹಸುಳಿನ ಕೂಗು ಗೋಳಾಡಿತಲೇ, ಭೂ ಲೋಕ ನಡುಗಿತಲೇ ಎಚ್ಚರ ಎಂದು ಕಾರ್ಣಿಕ 
Davanagere kammaragatte karanika Prediction snr

 ಹೊನ್ನಾಳಿ(ಆ.14): ಐತಿಹಾಸಿಕ ಪ್ರಸಿದ್ಧವಾದ ಹೆಳವನಕಟ್ಟೆ ಗಿರಿಯಮ್ಮನ ಪವಿತ್ರ ಕ್ಷೇತ್ರ ತಾಲೂಕಿನ ಕಮ್ಮಾರಗಟ್ಟೆಯಲ್ಲಿ ಪ್ರತಿ ವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ನಡೆಯಲಿರುವ  ಕಾರ್ಣಿಕ ಉತ್ಸವ ನಾಡಿನಲ್ಲೇ ಅತ್ಯಂತ ಪ್ರಸಿದ್ಧಿಯಾಗಿದೆ. 

ಆದರೆ ಈ ಬಾರಿ ಕೋವಿಡ್  ಹಿನ್ನೆಲೆ  ಕೆಲವೇ ಜನರ ಸಮ್ಮುಖದಲ್ಲಿ ಪದ್ಧತಿ ಆಚರಣೆ ಕಾರಣಕ್ಕಾಗಿ ಕಾರ್ಣಿಕ ಕಾರ್ಯಕ್ರಮ ಜರುಗಿತು. 

ವ್ರತನಿರತ  ಗಣಮಗ  ಪುಜಾ ವಿಧಿಗಳನ್ನು ಪೂರೈಸಿದ ನಂತರ ಹಸುಳಿನ ಕೂಗು ಗೋಳಾಡಿತಲೇ, ಭೂ ಲೋಕ ನಡುಗಿತಲೇ ಎಚ್ಚರ ಎಂದು ಕಾರ್ಣಿಕ ನುಡಿಯಲಾಯಿತು. 

ಗಡ್ಡಧಾರಿ ಸಿಎಂ ಸುಳ್ಳು, ಅದು ರಾಜಕೀಯ ಪ್ರೇರಿತ ಹೇಳಿಕೆ: ಗೊರವಯ್ಯ

ಸಾಮಾನ್ಯವಾಗಿ ಕಮ್ಮಾರಗಟ್ಟೆ  ಕಾರ್ಣಿಕ ನಾಡಿನಲ್ಲಿಯೇ ಅತ್ಯಂತ ಪ್ರಸಿದ್ದಿಯಾಗಿದ್ದು ಈ ನುಡಿಯನ್ನು ಇಡಿ ವರ್ಷದ ಭವಿಷ್ಯವನ್ನು ಕೆಲವೇ ಪದಗಳಲ್ಲಿ ಹೇಳುವ ಕಾರ್ಣಿಕ ನುಡಿ ಕೇಳಲು  ಹಲವಾರು ಜಿಲ್ಲೆ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ  ಭಕ್ತರು ಆಗಮಿಸುತ್ತಿದ್ದರು.

 ಜೊತೆಗೆ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮ ದೇವತೆಗಳು ಆಗಮಿಸಿ ಪೂಜೆ ಸಲ್ಲಿಸಲಾಗುತಿತ್ತು. ವಿಶೇಷವಾಗಿ ಈ ಉತ್ಸವಕ್ಕೆ ಆಗಮಿಸಿ ದೆವರಿಗೆ ಪೂಜೆ ಸಲ್ಲಿಸಿದರೆ ನವವಿವಾಹಿತ ಜೋಡಿಗಳಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. 

Latest Videos
Follow Us:
Download App:
  • android
  • ios