Bengaluru: ಕೋವಿಡ್‌ನಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೂ ಮಗಳ ನಕಾರ..!
* ತಾಯಿ ಮೃತಪಟ್ಟ ಒಂದೂವರೆ ದಿನದ ಬಳಿಕ ಚಿತಾಗಾರಕ್ಕೆ ಆಗಮನ
* ವಾಯು ಪಡೆಯಲ್ಲಿ ಸಹಾಯಕ ಸಿಬ್ಬಂದಿಯಾಗಿದ್ದ ಭಾಗ್ಯಲಕ್ಷ್ಮಿ
* 10 ವರ್ಷದ ಹಿಂದೆ ಜಗಳವಾಡಿಕೊಂಡು ದೂರವಾಗಿದ್ದ ಪುತ್ರಿ
ಬೆಂಗಳೂರು(ಜ.19): ಕೊರೋನಾ(Coronavirus) ಸೋಂಕಿನಿಂದ ಮೃತಪಟ್ಟ(Death) ತಾಯಿಯ(Mother) ಅಂತಿಮ ಸಂಸ್ಕಾರಕ್ಕೆ ಮಗಳು ಹಿಂದೇಟು ಹಾಕಿದ್ದರಿಂದ ಸ್ಥಳೀಯರು ಮತ್ತು ಹಿಂದು ಪರ ಸಂಘಟನೆಯಿಂದ(Pro Hindu Organization) ಮೃತರ ಅಂತಿಮ ಸಂಸ್ಕಾರಕ್ಕೆ ಮುಂದಾಗಿದ್ದ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ.
ವಾಯುಸೇನೆ(Air Force) ಕಚೇರಿಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಗ್ಯಲಕ್ಷ್ಮಿ (52) ಮೃತ ದುರ್ದೈವಿ. ಪತಿಯ ಮರಣಾನಂತರ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಒಂದು ವಾರದಿಂದ ಕೊರೋನಾ ಸೋಂಕು ತಗುಲಿ ಅನಾರೋಗ್ಯಕ್ಕೀಡಾಗಿದ್ದ ಕಾರಣ ಸ್ಥಳೀಯರು ಆಸ್ಪತ್ರೆಗೆ(Hospital) ದಾಖಲಿಸಿದ್ದರು. ಚಿಕಿತ್ಸೆ(Treatment) ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದರು. ಇವರಿಗೆ ಒಬ್ಬಳು ಪುತ್ರಿ ಇದ್ದು, ಹತ್ತು ವರ್ಷದ ಹಿಂದೆ ಜಗಳ ಮಾಡಿಕೊಂಡು ಬೇರೆಯಾಗಿ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದರು.
Children Death:ಬೆಳಗಾವಿ, ಚುಚ್ಚುಮದ್ದು ಪಡೆದ ಮಕ್ಕಳ ಸಾವಿನ ಸಮಗ್ರ ವರದಿ ಕೊಡಿ, ಬೊಮ್ಮಾಯಿ ಕಟ್ಟಪ್ಪಣೆ
ತಾಯಿ ಭಾಗ್ಯಲಕ್ಷ್ಮಿ ಮೃತಪಟ್ಟದ್ದಾರೆ ಎಂದು ಸ್ಥಳೀಯ ವಿಷಯ ತಿಳಿಸಿದರೂ ಆಗಮಿಸುವುದಾಗಿ ತಿಳಿಸಿ ಒಂದು ದಿನವಾದರೂ ಬಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದಾಗ ಬರುತ್ತೇನೆ ಎಂದು ಫೋನ್ ಕಟ್ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ಮತ್ತು ವಿಶ್ವ ಹಿಂದೂ ಪರಿಷತ್(Vishwa Hindu Parishad) ಕಾರ್ಯಕರ್ತರು ಹೆಬ್ಬಾಳದ ಚಿರಶಾಂತಿ ಧಾಮದಲ್ಲಿ ಅಂತಿಮ ಸಂಸ್ಕಾರಕ್ಕೆ(Funeral) ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಸಂಜಯ್ ನಗರ ಪೊಲೀಸರು(Police) ಮಗಳ ಮನವೊಲಿಸಿದ ಬಳಿಕ ನೇರವಾಗಿ ಹೆಬ್ಬಾಳದ ಚಿತಾಗಾರಕ್ಕೆ ಆಗಮಿಸಿ, ಅಂತಿಮ ದರ್ಶನ ಪಡೆದರು. ಆ್ಯಂಬುಲೆನ್ಸ್‌ನಲ್ಲಿಯೇ(Ambulance) ತಾಯಿಯ ಮುಖ ನೋಡಿದ ನಂತರ ಅಂತ್ಯಕ್ರಿಯೆ ಮಾಡಲಾಯಿತು.
ಮಾನವೀಯತೆ ಮೆರೆದ ಚಿಕನ್ ಅಂಗಡಿ ಮಾಲಿಕ
ಮೃತ ಭಾಗ್ಯಲಕ್ಷ್ಮಿ ಅವರು ಗಂಗೇನಹಳ್ಳಿಯಲ್ಲಿ ಇರುವ ಕೋಳಿ ಮಾಂಸದ ಅಂಗಡಿಯಲ್ಲಿ ನಾಯಿ ಮತ್ತು ಬೆಕ್ಕಿಗೆಂದು ಮಾಂಸ ಖರೀದಿಸುತ್ತಿದ್ದರಂತೆ. ಇತ್ತೀಚೆಗೆ ಅನಾರೋಗ್ಯಗೊಂಡ ಮಾಹಿತಿ ತಿಳಿದ ಕೂಡಲೇ ಅಂಗಡಿ ಮಾಲಿಕ ಸಂಶೀರ್, ಭಾಗ್ಯಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಖರ್ಚು ವೆಚ್ಚವನ್ನು ನೀಡಿ ಮಾನವೀಯತೆ ಮರೆದಿದ್ದಾರೆ. ಮಹಿಳೆ ಮೃತಪಟ್ಟ ನಂತರ ಕುಟುಂಬಸ್ಥರಿಗೆ ಕರೆ ಮಾಡಿದಾಗ ಆಗಮಿಸಲು ನಿರಾಕರಿಸಿದರು ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಇಳಿಕೆ: ಬೆಳ್ಳಂದೂರಿನಲ್ಲಿ ಅತ್ಯಧಿಕ ಕೇಸ್!
ರಾಜಧಾನಿಯಲ್ಲಿ ನಾಲ್ಕು ದಿನಗಳ ಬಳಿಕ ಕೊರೋನಾ ಸೋಂಕಿತರ (Covid 19) ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ 15,947 ಜನರಲ್ಲಿ ಸೋಂಕು ಪತ್ತೆಯಾಗಿದೆ. ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.57 ಲಕ್ಷಕ್ಕೆ ಹೆಚ್ಚಳವಾಗಿದೆ. ಹೊಸ ಸೋಂಕಿತರ ಪತ್ತೆಯಿಂದ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 1,32,754ಕ್ಕೆ ಏರಿಕೆಯಾಗಿದೆ. 4888 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು, ಇದುವರೆಗೆ 12,59,041 ಜನರು ಗುಣಮುಖರಾಗಿದ್ದಾರೆ. ಐವರ ಸಾವಿನಿಂದ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,458ಕ್ಕೆ ಹೆಚ್ಚಳವಾಗಿದೆ.
Booster Dose: 3ನೇ ಡೋಸ್ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್
ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು, ಬೇಗೂರು ಸೇರಿದಂತೆ 10 ವಲಯಗಳಲ್ಲಿ ಕಳೆದ ಏಳು ದಿನಗಳಲ್ಲಿ ಸೋಂಕಿತರಾಗುತ್ತಿರುವವರ ಸಂಖ್ಯೆ 200ರ ಗಡಿ ದಾಟಿದೆ. ಬೆಳ್ಳಂದೂರು 427, ಬೇಗೂರು 274, ನ್ಯೂತಿಪ್ಪಸಂದ್ರ 251, ರಾಜರಾಜೇಶ್ವರಿ ನಗರ 232, ಎಚ್‌ಎಸ್‌ಆರ್ ಲೇಔಟ್ 227, ಹೊರಮಾವು 226, ದೊಡ್ಡನೆಕ್ಕುಂದಿ 213, ಕೋರಮಂಗಲ 210 ಮತ್ತು ಹೆಮ್ಮಿಗೆಪುರ 217, ವಸಂತಪುರ 200 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಕಂಟೈನ್ಮೆಂಟ್ ಸಂಖ್ಯೆ 627ಕ್ಕೆ ಏರಿಕೆ:
ಇನ್ನು ಬಿಬಿಎಂಪಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ 627ಕ್ಕೆ ಏರಿಕೆಯಾಗಿದೆ. ಮಹದೇವಪುರ 251, ಬೊಮ್ಮನಹಳ್ಳಿ 132, ದಕ್ಷಿಣ 67, ಪಶ್ಚಿಮ 57, ಯಲಹಂಕ 68, ಪೂರ್ವ 41, ರಾಜರಾಜೇಶ್ವರಿ ನಗರ 6, ದಾಸರಹಳ್ಳಿ 5 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿ ಮಾಹಿತಿ ನೀಡಿದೆ.