ಚುನಾವಣಾ ಆಯೋಗಕ್ಕೆ ವರದಾನವಾದ ದತ್ತ ಪೀಠದ ಉರುಸ್ : ಇವಿಎಂ ಮತದಾನ ಪ್ರಾತ್ಯಾಕ್ಷಿಕೆ

ಕಳೆದ ಮೂರು ದಿನಗಳಿಂದ ನಡೆದ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಉರುಸ್ ಅನ್ನು ಜಿಲ್ಲಾಡಳಿತವು ಜನರಿಗೆ ಇವಿಎಂ ಪ್ರಾತ್ಯಕ್ಷಿಕೆ ಅರಿವು ಮೂಡಿಸಲು ವೇದಿಕೆಯನ್ನಾಗಿ ಬಳಸಿಕೊಂಡಿತು. 

Datta Peetha Urus a boon to the Election Commission EVM voting demonstration sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.11): ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಮುಸ್ಲಿಂ ಸಮುದಾಯದ ಉರುಸ್ ಆಚರಣೆ ವಿಜೃಂಭಣೆಯಿಂದ ನಡೆಯಿತು. ಕೆಲ ಸಮುದಾಯಗಳ ವಿರೋಧದ ನಡುವೆಯೂ ಜಿಲ್ಲಾಡಳಿತವು ಮುಸ್ಲಿಂ ಸಂಪ್ರಾಯದಂತೆ 3 ದಿನ ಉರುಸ್ ಆಚರಣೆಗೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಇನ್ನು ಜನರಿಗೆ ಇವಿಎಂ ಪ್ರಾತ್ಯಕ್ಷಿಕೆ ಅರಿವು ಮೂಡಿಸಲು ಜಿಲ್ಲಾಡಳಿತ ಉರುಸ್‌ ಅನ್ನೇ ವೇದಿಕೆಯನ್ನಾಗಿ ಬಳಸಿಕೊಂಡಿತು. 

ಮುಸ್ಲಿಂ ಬಾಂಧವರು ಉರುಸ್ ಸಂಭ್ರಮದಲ್ಲಿದ್ದರೆ ಪೊಲೀಸ್ ಇಲಾಖೆ ಬಂದೋಬಸ್ತ್‌ನಲ್ಲಿ ನಿರತವಾಗಿತ್ತು. ಆದರೆ, ಜಿಲ್ಲಾಡಳಿತ ಉರುಸ್ ಆಚರಣೆ ಮಧ್ಯೆಯೂ ಮುಂಬರೋ ವಿಧಾನಸಭಾ ಚುನಾವಣೆಯಲ್ಲಿನ ಮತದಾನದ ಪ್ರಾತ್ಯಾಕ್ಷಿಯನ್ನ ದತ್ತಪೀಠದ ಆವರಣದಲ್ಲಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಚಿಕ್ಕಮಗಳೂರು: ದತ್ತಪೀಠ ವ್ಯವಸ್ಥಾಪನಾ ಸಮಿತಿ ಎತ್ತಿ ಹಿಡಿದ ಕೋರ್ಟ್

ಜನರಿಗೆ ಮತದಾನದ ಪ್ರಾತ್ಯಾಕ್ಷಿಕೆ ಮಾಹಿತಿ : 
ಇದೇ ಬುಧವಾರ, ಗುರುವಾರ ಹಾಗೂ ನಿನ್ನೆಯ ತನಕ ದತ್ತಪೀಠದಲ್ಲಿ ಉರುಸ್ ಆಚರಣೆಗೆ ರಾಜ್ಯ-ಹೊರರಾಜ್ಯ ಸೇರಿದಂತೆ ಸಾವಿರಾರು ಭಕ್ತರು ಬಂದಿದ್ದರು. ಜೊತೆಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಭೇಟಿ ನೀಡಿದರು. ಮೂರು ದಿನದಲ್ಲಿ ಭಕ್ತರು, ಪ್ರವಾಸಿಗರು ಎಲ್ಲರೂ ಸೇರಿ ಸುಮಾರು 10 ಸಾವಿರಕ್ಕೂ ಅಧಿಕ ಜನ ದತ್ತಪೀಠಕ್ಕೆ ಬಂದಿರಬಹುದು. ದತ್ತಪೀಠದ ಆವರಣದಲ್ಲಿ ಪೊಲೀಸ್ ಚೌಕಿಯಲ್ಲಿ ಮತದಾನದ ಪ್ರಾತ್ಯಾಕ್ಷಿಕೆಯನ್ನ ಇಟ್ಟಿದ್ದ ಜಿಲ್ಲಾಡಳಿತ ಪ್ರತಿಯೊಬ್ಬರಿಗೂ ಕರೆದು ಮತದಾನದ ಪ್ರಕ್ರಿಯೆ ಹೇಗಿರುತ್ತೆ ಎಂದು ಅದನ್ನ ಡಿಮೋ ಮೂಲಕ ಪ್ರತಿಯೊಬ್ಬರಿಗೂ ಮಾಹಿತಿ ನೀಡಿದೆ. 

ಇವಿಎಂ ಯಂತ್ರದ ಬಟನ್‌ ಒತ್ತಿ ಖುಷಿಪಟ್ಟ ಜನರು:  ಇವಿಎಂ ಮಾದರಿಯ ಮೆಷಿನ್ನಿಂದ ಜನಸಾಮಾನ್ಯರಿಗೆ ಮತದಾನದ ಬಗ್ಗೆ ಮಾಹಿತಿ ನೀಡಿದೆ. ಇವಿಎಂ ಮಾದರಿಯ ಮೆಷಿನ್ ಮೇಲೆ ಇರುವ ಚಿತ್ರಗಳ ಮೇಲೆ ಬಟನ್ ಪ್ರೆಸ್ ಮಾಡಿದ ಬಳಿಕ ನಾವು ಪ್ರೆಸ್ ಮಾಡಿದ್ದು ಯಾವುದು, ಲೈಟ್ ಆನ್ ಆಗಿದ್ದು ಅದೇನಾ ಎಂದು ನೋಡಲು ಅವಕಾಶ ಮಾಡಿಕೊಟ್ಟಿದ್ದರು. ಪ್ರತಿಯೊಬ್ಬರು ಕೂಡ ತಮ್ಮ ಹೆಸರು ನೋಂದಾಯಿಸಿ ತಾವು ಬಟನ್ ಪ್ರೆಸ್ ಮಾಡಿದ್ದ ಲೈಟ್ ಬಂದಿದೆಯಾ ಎಂದು ಚೆಕ್ ಮಾಡಿದ್ದಾರೆ. ಇವಿಎಂ ಮೋಸ ಎಂದೆಲ್ಲಾ ಜನ ಮಾತನಾಡುತ್ತಾರೆ. 

ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್‌ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ

ಬ್ಯಾಲೆಟ್‌ ಪೇಪರ್‌ ಬಳಕೆಗೆ ಹಿಂದೇಟು: ವಿರೋಧ ಪಕ್ಷಗಳು ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಅಂತ ಆಗ್ರಹಿಸಿವೆ. ಆದರೆ, ಚುನಾವಣಾ ಆಯೋಗ ಇವಿಎಂನಿಂದಲೇ ಚುನಾವಣೆ ಎಂದು ಸಿದ್ಧತೆ ನಡೆಸಿರುವುದರಿಂದ ಮತದಾರರಿಗೆ ಇವಿಎಂ ಬಗ್ಗೆ ನಂಬಿಕೆ ಹಾಗೂ ಅದರ ಪ್ರಕ್ರಿಯೆ ಹೇಗಿರುತ್ತೆ ಎಂದು ಪ್ರಾತ್ಯಾಕ್ಷಿಕ ಮೂಲಕ ಮನವರಿಕೆ ಮಾಡಿಕೊಟ್ಟಿದೆ. ಜಿಲ್ಲಾಡಳಿತದ ಈ ಕೆಲಸಕ್ಕೆ ಯುವ ಮತದಾರರು ಹಾಗೂ ಮತದಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಸುಮಾರು 10 ಸಾವಿರ ಜನರಿಗೆ ಮತದಾನದ ಪ್ರಾತ್ಯಾಕ್ಷಿಕೆ ತೋರಿಸಬೇಕೆಂದರೆ ಕನಿಷ್ಠ ವಾರವೇ ಬೇಕು. ಆದರೆ, ದತ್ತಪೀಠದಲ್ಲಿ ಮೂರೇ ದಿನಕ್ಕೆ 10 ಸಾವಿರ ಜನ ಇವಿಎಂ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಉರುಸ್ ಚುನಾವಣಾ ಆಯೋಗಕ್ಕೂ ಅನುಕೂಲವಾಗಿದೆ. ದತ್ತಾತ್ತೇಯರ ಸನ್ನಿದಿಯಲ್ಲಿ ಒಂದೆಡೆ ಉರುಸ್ಸು ಆಯ್ತು. ಮತ್ತೊಂದೆಡೆ ಚುನಾವಣಾ ಆಯೋಗದ ಕಾರ್ಯವೂ ಆಯ್ತು.

Latest Videos
Follow Us:
Download App:
  • android
  • ios