Asianet Suvarna News Asianet Suvarna News

'ಅರಮನೆಯಲ್ಲಿ ಸಿಂಹಾಸನ ಜೋಡಣೆ ಮಾಡುತ್ತೆ ವೀರಶೈವ ಕುಟುಂಬ'

ಮೈಸೂರಿನಲ್ಲಿ ಅದ್ದೂರಿ ದಸರಾ ಆಚರಣೆಗೆ ಈ ಬಾರಿ ಬ್ರೇಕ್ ಹಾಕಲಾಗುತ್ತಿದೆ. ಕೊರೋನಾ ಹಿನ್ನೆಲೆ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತದೆ.

Dasara Preparation Begins In Mysuru snr
Author
Bengaluru, First Published Sep 17, 2020, 7:55 AM IST

ಮೈಸೂರು (ಸೆ.17): ಈ ಬಾರಿ ಸರಳವಾಗಿ ನಡೆಯಲಿರುವ ಮೈಸೂರು ದಸರಾ ಸೆ.18ರಂದು ಅರಮನೆಯಲ್ಲಿ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. 

ಪಿತೃಪಕ್ಷ ಮುಗಿದ ಹಿನ್ನೆಲೆಯಲ್ಲಿ ಇದೀಗ ಗೆಜ್ಜಗನಹಳ್ಳಿಯ ವೀರಶೈವ ಕುಟುಂಬದವರು ಅಂದು ಅರಮನೆಗೆ ಆಗಮಿಸಿ ಪೊಲೀಸ್‌ ಭದ್ರತೆ ಮತ್ತು ಅರಮನೆ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ಸಿಂಹಾಸನವನ್ನು ತೆಗೆದು ಜೋಡಿಸುವರು. 

ನವರಾತ್ರಿ ಸಂದರ್ಭದಲ್ಲಿ ರಾಜವಂಶಸ್ಥರು ಪ್ರತಿ ದಿನ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್‌ ನಡೆಸುವರು.

ಈ ಬಾರಿ ಮೈಸೂರು ದಸರಾದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿವೆ ಸಭೆಯ ತೀರ್ಮಾನಗಳು

ಈ ಬಾರಿ ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಅಟ್ಟಹಾಸವಿದ್ದು, ಕೊರೋನಾ ಹಿನ್ನೆಲೆಯಲ್ಲಿ ಸರಳಾ ದಸರಾ ಆಚರಣೆ ಮಾಡಲಾಗುತ್ತದೆ. ವಿಶ್ವವಿಖ್ಯಾತ ಮೈಸೂರು ದಸರೆಗೆ ಲಕ್ಷ ಲಕ್ಷ ಆಗಮಿಸುವ ಹಿನ್ನೆಲೆ ಸರಳವಾಗಿ ಆಚರನೆ ಜನ ಸೇರಲು ಅವಕಾಶ ನೀಡುತ್ತಿಲ್ಲ.

ಈ ಬಾರಿ ದಸರೆಯಲ್ಲಿ ಯಾವುದೇ ಅದ್ದೂರಿ ಸಮಾರಮಭ ನಡೆಸಲೂ ಸಹ ಅವಕಾಶ ಇರುವುದಿಲ್ಲ. ಕೊರೋನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿರುವುದರಿಮದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. 
 

Follow Us:
Download App:
  • android
  • ios