ದರ್ಶನ್ ಒಳ್ಳೆ ನಟ ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು; ರೇಣುಕಾಸ್ವಾಮಿ ಕುಟುಂಬ ಭೇಟಿಯಾದ ಮಾಜಿ ಸಚಿವ ರೇಣುಕಾಚಾರ್ಯ
ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ದರ್ಶನ್ ಒಳ್ಳೆಯ ನಟ. ಆದರೆ, ಕಾನೂನು ಕೈಗೆತ್ತಿಕೊಂಡಿದ್ದು ದುರಂತ ಎಂದು ಹೇಳಿದರು.
ಚಿತ್ರದುರ್ಗ (ಜೂ.16): ರಾಜ್ಯ ಸರ್ಕಾರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಎಷ್ಟೇ ದೊಡ್ಡವರಾದ್ರೂ ಕಾನೂನು ಎಲ್ಲರಿಗೂ ಒಂದೇ. ದರ್ಶನ್ ಒಳ್ಳೆಯ ಚಿತ್ರನಟ, ಕಾನೂನು ಕೈಗೆ ತೆಗೆದು ಕೊಂಡಿದ್ದು ದುರಂತ. ಒಬ್ಬ ಅಮಾಯಕ ಯುವಕ, ಅವರ ತಂದೆ ತಾಯಿ, ಧರ್ಮ ಪತ್ನಿ ಸೇರಿ ಇಡೀ ಕುಟುಂಬಕ್ಕೆ ಅನ್ಯಾಯವಾಗಿದೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರುದರ್ಗದ ಯುವಕ ರೇಣುಕಾಸ್ವಾಮಿ ಮನೆಗೆ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಷ್ಟೇ ದೊಡ್ಡವರಾದ್ರೂ ಕಾನೂನು ಎಲ್ಲರಿಗೂ ಒಂದೇ. ಒಳ್ಳೆಯ ಚಿತ್ರನಟ, ಕಾನೂನು ಕೈಗೆ ತೆಗೆದು ಕೊಂಡಿದ್ದು ದುರಂತ. ಒಬ್ಬ ಅಮಾಯಕ ಯುವಕ, ಅವರ ತಂದೆ ತಾಯಿ, ಧರ್ಮ ಪತ್ನಿ ಒಂದು ಕಡೆ ಇವರ ಕುಟುಂಬ ಹಾಳಾಗಿದೆ. ಒಬ್ಬ ಒಳ್ಳೆ ನಟ, ನಟನೆ ಬಗ್ಗೆ ಗೌರವವಿದೆ. ಆದರೆ, ಆತನ ನಡವಳಿಕೆಗಳು ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.
ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್ : ಬೀದಿ ಹೆಣವಾಗಿದ್ದ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು
ರೇಣುಕಾಸ್ವಾಮಿ ಕುಟುಂಬಕ್ಕೆ ಮಗನನ್ನು ಕಳೆದುಕೊಂಡು ಬಹಳ ನೋವಾಗಿದೆ. ಒಂದೆಡೆ ವಯಸ್ಸಾದ ತಂದೆ ತಾಯಿ, ಮತ್ತೊಂದೆಡೆ ಮದುವೆಯಾಗಿ ಒಂದು ವರ್ಷವಾಗಿರುವ ಗರ್ಭಿಣಿ ಪತ್ನಿ ಇವರೆಲ್ಲರಿಗೂ ಭಗವಂತ ಧೈರ್ಯವನ್ನು ಕೊಡಲಿ. ಮಗ ಮತ್ತು ಸೊಸೆ ಎರಡು ಒಂದೆ ಚೆನ್ನಾಗಿ ನೊಡ್ಕೊಳ್ಳಿ ಅಂತ ಕುಟುಂಬಕ್ಕೆ ಧೈರ್ಯ ಹೇಳಿದ್ದೇನೆ. ಇಲ್ಲಿ ಎಷ್ಟೇ ದೊಡ್ಡವರಾಗಿರಲಿ ಕಾನೂನು ಎಲ್ಲರಿಗೆ ಒಂದೆ, ಸೆಲೆಬ್ರಿಟಿ ಗಳಾಗಿರಲಿ, ರಾಜಕಾರಣಿಗಳಾಗಿರಲಿ, ಐಪಿಎಸ್ ಐಎಎಸ್ ಯಾರೆ ಆಗಿರಲಿ ಎಲ್ಲರಿಗೂ ಒಂದೆ ಕಾನೂನು ಎಂದು ಕಿಡಿಕಾರಿದರು.
ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ಅವನನ್ನು ಕರೆಸಿ ಎರಡು ಕಪಾಳಕ್ಕೆ ಹೊಡೆದಿದ್ರೆ ಏನು ಆಗ್ತಾ ಇರ್ಲಿಲ್ಲ. ಅವನಿಗೆ ತಿಳಿ ಹೇಳ ಬಹುದಿತ್ತು, ಬುದ್ದಿವಾದ ಹೇಳಬಹುದಿತ್ತು. ಆದರೆ, ಕೊಲೆ ಮಾಡಿ ಬೀಸಾಡಿದ್ದಾರೆ. ಪಾಪ ಅಮಾಯಕ ಒಬ್ಬನೇ ಮಗ ಇದಾನೆ. ಪೊಲೀಸ್ ಸ್ಟೇಷನ್‌ಗೆ ದೂರು ಕೊಡಬಹುದಿತ್ತು. ಅದರ ಬದಲು ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು. ಇದು ಒಳ್ಳೆಯದಲ್ಲ ಯಾರೇ ಮಾಡಿದ್ರೂ ತಪ್ಪು ತಪ್ಪೇ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.
ನಟ ದರ್ಶನ್ ಫೋಟೋಗೆ ಚಪ್ಪಲಿ, ಬೂಟಿನಿಂದ ಹೊಡೆದ ಕರವೇ ಕಾರ್ಯಕರ್ತರು
ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಭಾವಿ ಸಚಿವರಿಂದ ಒತ್ತಡ ವಿಚಾರದ ಬಗ್ಗೆ ಮಾತನಾಡಿ, ಯಾರೇ ಪ್ರಭಾವಿ ಸಚಿವರು, ರಾಜಕಾರಣಿಗಳು ಈ ಕೊಲೆ ಕೇಸಿನಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ಒಳ್ಳೆಯದಲ್ಲ. ಕನ್ನಡ ಚಿತ್ರರಂಗದ ನಟನ ಬಗ್ಗೆ ನಮಗೆಲ್ಲ ಗೌರವವಿದೆ. ದರ್ಶನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಇದಾರೆ. ಆದರೆ ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪಲ್ವಾ.? ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.