ಮಯೂರ ಹೆಗಡೆ

ಹುಬ್ಬಳ್ಳಿ [ಸೆ.23]:  ಕೆಆರ್‌ಟಿಎಸ್, ಸಿಆರ್‌ಎಫ್ ಅನುದಾನದಡಿಯ ಕಾಮಗಾರಿಗಳಿಗೆ ಅಡ್ಡಿಯಾಗಿರುವ ದರ್ಗಾ, ದೇವಸ್ಥಾನಗಳ ತೆರವಿನ ಗೊಂದಲ ಇನ್ನಾದರೂ ಬಗೆಹರಿಯಲಿದೆಯೆ ಎಂಬ ಪ್ರಶ್ನೆ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆ ಹೆಚ್ಚಿದೆ. 

ಹುಬ್ಬಳ್ಳಿಯಿಂದ-ಧಾರವಾಡಕ್ಕೆ ಸಂಪರ್ಕಿಸುವ ಬಿಆರ್‌ಟಿಎಸ್ ಕಾರಿಡಾರ್ ಕಾಮಗಾರಿಗಾಗಿ 890 ಕಟ್ಟಡಗಳ ತೆರವು, ಭಾಗಶಃ ತೆರವಿಗಾಗಿ ಗುರುತು ಮಾಡಲಾಗಿದೆ. ಅವುಗಳಲ್ಲಿ ಶೇ. 98 ರಷ್ಟು ಪೂರ್ಣ ಗೊಂಡಿವೆ. ಈ ಮಾರ್ಗದಲ್ಲಿ ಒಟ್ಟು 14 ಮಂದಿರಗಳನ್ನು ಭಾಗಶಃ ತೆರವು ಮಾಡಲಾಗಿದೆ. ಮಸೀದಿ, ದರ್ಗಾ, ಚರ್ಚ್‌ಗಲೂ ತೆರವಾಗಿವೆ. ಇವುಗಳಲ್ಲೀಗ ಉಣಕಲ್ ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ, ಬೈರಿದೇವ ಕೊಪ್ಪದ ದರ್ಗಾ, ನವಲೂರು ಬಳಿಯ ದರ್ಗಾ ಹಾಗೂ ಧಾರವಾಡದ ಟೋಲನಾಕಾ ಬಳಿಯ ವಾಲ್ಮೀಕಿ ದೇವಸ್ಥಾನ ಸಮಸ್ಯೆಯಾಗಿ ಉಳಿದುಕೊಂಡಿವೆ.

ಇದಲ್ಲದೆ ಸಿಆರ್‌ಎಫ್ ಕೆಲ ಕಾಮಗಾರಿಗಳು ಕೂಡ ಇದೇ ಕಾಮಗಾರಿಗಾಗಿ ಅಡ್ಡಿಯಾಗಿ ಉಳಿದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹತ್ತು ಹಲವು ಬಾರಿ ಸಭೆ ಗಳಲ್ಲಿ ಈ ಕುರಿತಾಗಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸೆ. 16 ರಂದು ನಡೆದ ಸ್ಮಾರ್ಟ್‌ಸಿಟಿ ಸಭೆಯಲ್ಲಿ ಈ ಕುರಿತು  ಅಂತಿಮ ತೀರ್ಮಾನಕ್ಕೆ ಬರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಸಚಿವರಾದ ಬಳಿಕ ಈ ಇಬ್ಬರೂ ಮಹನೀಯರು ನೀಡಿರುವ ಈ ಸೂಚನೆ ಹೆಚ್ಚಿನ ಮಹತ್ವ ಪಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಣಪತಿ ಗುಡಿ ತೆರವು: ಇವುಗಳ ಜತೆಗೆ ಹೊಸೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಚಿಕ್ಕ ಗುಡಿ ತೆರವಿಗೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೆ ಕಾರ್ಯಾಚರಣೆ ನಡೆಸಿದ ಪಾಲಿಕೆ ಗುಡಿಯನ್ನು ಬುಧವಾರ ತೆರವು ಮಾಡಿದೆ. ಹೀಗಾಗಿ ಸೋಮವಾರ ನಡೆಯುವ ಸಭೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದು ವೇಳೆ ಎರಡೂ ಕಡೆಯವರು ದರ್ಗಾ, ದೇವಸ್ಥಾನ ತೆರವಿಗೆ ವಿರೋಧ ವ್ಯಕ್ತಪಡಿಸಿದಲ್ಲಿ ಪೊಲೀಸ್ ಭದ್ರತೆ ಯಲ್ಲಿ ಪಾಲಿಕೆ ಜಾಗೆ ಖುಲ್ಲಾಪಡಿಸಿ ಅಭಿವೃದ್ಧಿ ಕಾಮಗಾರಿಗೆ ಇಚ್ಛಾಶಕ್ತಿ ಪ್ರದರ್ಶಿಸಲಿ ದ್ದಾರೆಯೇ? ಎಂಬ ಪ್ರಶ್ನೆಯೂ ಮೂಡಿದೆ. ಸೋಮ ವಾರ ಬಿಆರ್ ಟಿಎಸ್ ಕಚೇರಿಯಲ್ಲಿ ಸಭೆ ನಿಗದಿ ಯಾಗಿ ದೆ. ಎರಡೂ ಕಡೆಯವರಿಗೆ ಈ ಸಭೆಗೆ ಹಾಜರಾಗಲು ತಿಳಿಸಿ ನೋಟೀಸ್ ನೀಡಲಾಗಿದೆ. 

ಸಭೆಯಲ್ಲಿ ತೆರವಿನ ಕುರಿತು ಇವರು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಮಾತನಾಡಿದ ಪಾಲಿಕೆ ಕಮಿಷನರ್ ಸುರೇಶ ಇಟ್ನಾಳ, ಸಚಿವರ ಸೂಚನೆಯಂತೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಜತೆಗೆ ಈ ಕುರಿತು ಸಭೆ ನಡೆಸಿದ್ದೇವೆ. ಅವರ ಸೂಚನೆಯಂತೆ ಸಮಸ್ಯೆ ಇರುವ ಈ ದರ್ಗಾ, ದೇವಸ್ಥಾನಕ್ಕೆ ಸಂಬಂಧಿಸಿದವರ ಜತೆ ಚ ರ್ಚೆ ನಡೆಸಲಿದ್ದೇವೆ. ನನ್ನ ಅಧ್ಯಕ್ಷತೆಯಲ್ಲಿ, ಡಿಸಿಪಿ ಡಿ. ಎಲ್. ನಾಗೇಶ, ಬಿಆರ್‌ಟಿಎಸ್ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಪಾಲ್ಗೊಂಡು ಇವರ ಮನ ವೊಲಿಸಿ ತೆರವಿಗೆ ಅನುವು ಮಾಡಿಕೊಟ್ಟು ಅಭಿವೃದ್ಧಿಗೆ ಸಹಕರಿಸುವಂತೆ ಕೇಳಿಕೊಳ್ಳಲಿದ್ದೇವೆ ಎಂದಿದ್ದಾರೆ. 

ಮುಖಂಡರು ಏನಂತಾರೆ?: ಆರು ವರ್ಷದ ಹಿಂದೆ ಬಿಆರ್‌ಟಿಎಸ್ ಯೋಜನೆಗಾಗಿ ಮಠ-ಮಂದಿರಗಳು ತೆರವು ಆಗಬೇಕು ಎಂದಾಗ ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂಪರ ಸಂಘಟನೆ ಪ್ರತಿಭಟನೆ ನಡೆಸಿತ್ತು. ದರ್ಗಾ ಉಳಿಸಿ ಕೊಳ್ಳಲು ಹೋರಾಟಗಳು ನಡೆದಿದ್ದವು. ಮನವೊಲಿಕೆ ಬಳಿಕ ಹಲವರು ತೆರವಿಗೆ ಒಪ್ಪಿದ್ದರು. ಆದರೆ, ಬೈರಿದೇವರಕೊಪ್ಪದ ದರ್ಗಾ, ರಾಮಲಿಂಗೇಶ್ವರ ದೇವಸ್ಥಾನ ತೆರವಿನ ಕುರಿತು ಎರಡು ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಸಭೆಯಲ್ಲಿ ತಮ್ಮ ನಿಲುವು ಪ್ರಕಟಿಸುವುದಾಗಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ.