* ಮಂಡ್ಯದ ಪಾಂಡವಪುರದಲ್ಲಿ ಅಮಾನವೀಯ ಘಟನೆ* ಪಿಎಸ್‌ಎಸ್‌ಕೆ ವಿರುದ್ಧ ಗಂಭೀರ ಆರೋಪ* ಕೇಸು ದಾಖಲಿಸಲು ಸೂಚನೆ  

ಪಾಂಡವಪುರ(ಮೇ.28): ಸಚಿವ ಮುರುಗೇಶ್‌ ನಿರಾಣಿ ಒಡೆತನಕ್ಕೆ ಸೇರಿದ ಎಂಆರ್‌ಎನ್‌ ಸಂಸ್ಥೆ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಆಡಳಿತದಿಂದ ದಲಿತ ಮಹಿಳೆಯನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

ಕಾರ್ಖಾನೆಯು ಕೆನ್ನಾಳು ಗ್ರಾಮದ ಆದಿ ದ್ರಾವಿಡ ಜನಾಂಗಕ್ಕೆ ಸೇರಿದ ದಲಿತ ಮಹಿಳೆ ಎಂ.ಮಂಜುಳಾ ಅವರಿಂದ ಅಮಾನವೀಯ ಕೆಲಸ ಮಾಡಿಸಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯು ತಾಲೂಕಿನ ವಿಶ್ವೇಶ್ವರ ನಗರ ಬಡಾವಣೆಯ ಪಿಎಸ್‌ಎಸ್‌ಕೆ ಕ್ವಾಟ್ರರ್ಸ್‌ನಲ್ಲಿರುವ ಒಣ ಮಲ ತುಂಬಿದಗುಂಡಿ (ಫಿಟ್‌) ಸ್ವಚ್ಛಗೊಳಿಸಲು ಸಂಸ್ಥೆಯ ಸಿವಿಲ್‌ ಎಂಜಿನಿಯರ್‌ ನಾಗೇಶ್‌ ಸೂಚಿಸಿದ್ದರು ಎನ್ನಲಾಗಿದೆ.

ಗುಂಡಿ (ಪಿಟ್‌) ಒಳಗೆ ಇಳಿದು ಸ್ವಚ್ಛಗೊಳಿಸುವಂತೆ ಸಂಸ್ಥೆಯ ಮತ್ತೊಬ್ಬ ಅಧಿಕಾರಿ ರಾಜಶಾಸ್ತ್ರಿ ಮಂಜುಳಾಗೆ ಸೂಚಿದ್ದರು ಎಂದು ಹೇಳಲಾಗಿದೆ. ನಾನೊಬ್ಬಳು ಹೆಂಗಸು, ನನ್ನ ಬಳಿ ಇಂತಹ ಕೆಲಸ ಮಾಡಿಸುತ್ತೀರಲ್ಲಾ ಎಂದು ಮಂಜುಳಾ ಪ್ರಶ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಸಂಸ್ಥೆಯವರ ಒತ್ತಡಕ್ಕೆ ಮಣಿದು ಒಣ ಮಲವನ್ನು ಕೈಗೆ ಗ್ಲೌಸ್‌ ಹಾಕಿಕೊಂಡು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.

ಜನ್ಮ ನೀಡಿದ 2 ದಿನದಲ್ಲಿ ಸೋಂಕಿತ ತಾಯಿ ಸಾವು

ದಲಿತ ಮಹಿಳೆಗೆ ಬೆದರಿಕೆ: 

ಘಟನೆ ಬಹಿರಂಗವಾದರೆ ಸಮಸ್ಯೆ ಆಗುತ್ತದೆ ಎಂದು 2 ದಿನದ ಬಳಿಕ ಪಿಎಸ್‌ಎಸ್‌ಕೆ ಹಾಗೂ ಎಂಆರ್‌ಎನ್‌ ಆಡಳಿತ ಸಂಸ್ಥೆಯವರು ಮಂಜುಳಾ ಅವರಿಗೆ ಬೆದರಿಸಿದ್ದಾರೆ. ಬಳಿಕ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಅಧಿಕೃತವಾಗಿ ಸಾಕ್ಷಿ ಸಹಿತ ದೂರು ಸಲ್ಲಿಸಿದ್ದಾರೆ.

ಕೇಸು ದಾಖಲಿಸಲು ಸೂಚನೆ: 

ಮಂಡ್ಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಂದ ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದು, ಪ್ರಕರಣ ದಾಖಲಿಸಲು ವರದಿ ಕೇಳಿದೆ. ಮೇ 31ರಂದು ಪಾಂಡವಪುರ ಪಿಎಸ್‌ಎಸ್‌ಕೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಸಪಾಯಿ ಕರ್ಮಚಾರಿ ಆಯೋಗದ ರಾಜ್ಯಾಧ್ಯಕ್ಷ ಕೋಟೆ ಶಿವಣ್ಣ ಹಾಗೂ ಕಾರ್ಯದರ್ಶಿ ರಮಾ ಆಗಮಿಸಿ ಪರಿಶೀಲಿಸಲಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಚಿವ ಮುರುಗೇಶ್‌ ನಿರಾಣಿ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಎಂಆರ್‌ಎನ್ ಸಂಸ್ಥೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ ಎಸ್ ಕೆ)ಯ ಹೊರ ಭಾಗದಲ್ಲಿ ನಡೆದಿರುವ ಈ ಘಟನೆ ಅತ್ಯಂತ ಅಮಾನವೀಯವಾದುದು. ನಮ್ಮ ಕಾರ್ಖಾನೆಯ ಆವರಣದಲ್ಲಿ ಇದು ನಡೆದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ. 

Scroll to load tweet…

ಕಳೆದ 25 ವರ್ಷಗಳಿಂದ ಉದ್ಯಮದಲ್ಲಿ ತೊಡಗಿಕೊಂಡಿರುವ ಎಂಆರ್ ಎನ್ ಕಾರ್ಖಾನೆ, ಉದ್ಯೋಗಿಗಳನ್ನು ಧರ್ಮ, ಜಾತಿ, ಮೇಲು- ಕೀಳು ಎಂದು ಎಂದಿಗೂ ನೋಡದೆ, ಅಣ್ಣ ಬಸವಣ್ಣನವರ ಆಶಯದಂತೆ “ಪ್ರತಿಯೊಬ್ಬರೂ ಸಮಾನರು" ಎಂಬ ತತ್ವವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ. 

Scroll to load tweet…

ಮತ್ತೊಮ್ಮೆ ಸ್ಪಷ್ಟಪಡಿಸುವಂತೆ ಎಂಆರ್ ಎನ್ ಸಂಸ್ಥೆ ಎಂದಿಗೂ ಜಾತಿ ಮತ್ತು ಧರ್ಮಕ್ಕೆ ಮನ್ನಣೆ ನೀಡುವುದಿಲ್ಲ. ಸಮಾನತೆ, ಸಹಬಾಳ್ವೆ, ಸಹೋದರತೆ, ಜಾತ್ಯಾತೀತೆಯಲ್ಲಿ ನಮಗೆ ಆಪಾರವಾದ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. 

Scroll to load tweet…