ರಾಮನಗರ (ಡಿ.14): ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾ​ಯಿಸಿ ಸಮತಾ ಸೈನಿಕ ದಳ ಹಾಗೂ ಜಿಲ್ಲಾ ದಲಿತ ಸಂಘ​ಟ​ನೆ​ಗಳ ಒಕ್ಕೂ​ಟದ ಕಾರ್ಯ​ಕ​ರ್ತರು ನಗರ​ದಲ್ಲಿ  ಪ್ರತಿ​ಭ​ಟನೆ ನಡೆ​ಸಿ​ದರು.

ನಗ​ರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾ​ಣ​ದ ಆವ​ರ​ಣ​ದಲ್ಲಿ ಪ್ರತಿ​ಭ​ಟನೆ ನಡೆ​ಸಿದ ಕಾರ್ಯ​ಕ​ರ್ತರು ಕೆಎಸ್‌ಆರ್‌ಟಿಸಿ ಸಿಬ್ಬಂದಿ​ಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವು​ದು​ ಸೇ​ರಿ​ದಂತೆ ಹಲ​ವು ಬೇಡಿಕೆಗಳನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸದೆ ಉದಾ​ಸೀನ ತೋರು​ತ್ತಿ​ರುವ ಸಚಿವ ಲಕ್ಷ್ಮಣ ಸವದಿ ಕ್ರಮ​ ಖಂಡಿ​ಸಿ​ದ​ರು.

ಕಾಂಗ್ರೆಸ್‌ - ಬಿಜೆ​ಪಿಯಿಂದ ಜೆಡಿ​ಎಸ್‌ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು

ಈ ವೇಳೆ ಮಾತ​ನಾ​ಡಿದ ಸಮತಾ ಸೈನಿಕ ದಳದ ಜಿ.ಗೋವಿಂದಯ್ಯ, 1.43 ಲಕ್ಷ ಸಾರಿಗೆ ನೌಕರರು ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಬಿಎಂಟಿಸಿಯಲ್ಲಿ ದಿನನಿತ್ಯ 73ಲಕ್ಷ ಜನ ಪ್ರಯಾಣಿಸುತ್ತಾರೆ. ಸಚಿವರ ನಿರ್ಲಕ್ಷದಿಂದಾಗಿ ಇಂದು ನೌಕರರು ಮತ್ತು ಪ್ರಯಾಣಿಕರಿಗೆ ತೊಂದರೆವುಂಟಾಗಿದೆ. ನೌಕರರ ಬೇಡಿಕೆ ಈಡೇರಿಕೆಗೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಘಟನೆ ನೌಕರರ ಜೊತೆಗಿದೆ. ಬೇಡಿಕೆ ಈಡೇರದಿದ್ದರೆ ತೀವ್ರತರಹದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಶಿವಕುಮಾರಸ್ವಾಮಿ ಮಾತನಾಡಿ, ಸಾರಿಗೆ ನೌಕರರ ಹೋರಾಟಕ್ಕೆ ದಲಿತ ಸಂಘಟನೆಗಳು ಬೆಂಬಲ ನೀಡ​ಲಿ​ವೆ. ಸರ್ಕಾರಿ ನೌಕರರಿಗೆ ಕೊಡುತ್ತಿರುವ ಸವಲತ್ತುಗಳನ್ನು ಕೊಡಬೇಕು. ಅದನ್ನು ಬಿಟ್ಟು ಖಾಸಗಿ ಬಸ್ಸು ಓಡಿಸ್ತೀವಿ ಎಂಬಿತ್ಯಾದಿ ಮೊಂಡುತನ ಮಾಡಬಾರದು ಎಂದು ಸಾರಿಗೆ ಸಚಿವರು ಮತ್ತು ಅಧಿಕಾರಿಗಳಿಗೆ ತಿಳಿ ಹೇಳಿದರು.