Asianet Suvarna News Asianet Suvarna News

ಇಂದಿನಿಂದ ಜು. 31 ರ ತನಕ ಮೀನುಗಾರಿಕೆಗೆ ರಜೆ

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಸಡಿಲಿಸಲಾಗಿದ್ದ ಮೀನುಗಾರಿಕೆ ಅವಧಿ ಭಾನುವಾರಕ್ಕೆ ಕೊನೆಗೊಂಡಿದೆ. ಜೂ.15ರಿಂದ ಜುಲೈ 31ರ ವರೆಗೆ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

Dakshina Kannada District administration restrict to Fishing till june 31
Author
Bengaluru, First Published Jun 15, 2020, 4:18 PM IST

ಮಂಗಳೂರು (ಜೂ. 15):  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಸಡಿಲಿಸಲಾಗಿದ್ದ ಮೀನುಗಾರಿಕೆ ಅವಧಿ ಭಾನುವಾರಕ್ಕೆ ಕೊನೆಗೊಂಡಿದೆ. ಜೂ.15ರಿಂದ ಜುಲೈ 31ರ ವರೆಗೆ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಪ್ರತಿ ವರ್ಷ ಕಡಲಿನಲ್ಲಿ ಮೀನುಗಾರಿಕೆಗೆ ಜೂನ್‌ನಿಂದ ಜುಲೈ ಅಂತ್ಯದ ವರೆಗೆ ನಿರ್ಬಂಧ ಇರುತ್ತಿತ್ತು. ಈ ಅವಧಿಯಲ್ಲಿ ಮತ್ಸ್ಯಸಂಪತ್ತು ವೃದ್ಧಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಸಮುದ್ರ ಕೂಡ ಮಳೆಗಾಲದಲ್ಲಿ ಪ್ರಕ್ಷುಬ್ಧವಾಗಿರುತ್ತದೆ ಎಂಬ ಇನ್ನೊಂದು ಕಾರಣವೂ ಇದೆ. ಆದರೆ ಈ ಬಾರಿ ಜೂನ್‌ ಆರಂಭವಾದರೂ 15 ದಿನಗಳ ಕಾಲ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು.

ಉಲ್ಲಾಳ ಅಲೆಗಳ ಅಬ್ಬರ, ಸ್ಥಳೀಯರಲ್ಲಿ ಆತಂಕ!

ಲಾಕ್‌ಡೌನ್‌ ಕಾರಣಕ್ಕೆ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಎರಡು ತಿಂಗಳ ಕಾಲ ಮೀನುಗಾರರು ಕಡಲಿಗೆ ಇಳಿದಿರಲಿಲ್ಲ. ಈ ಬಾರಿ ಒಂದೂವರೆ ತಿಂಗಳು ಮಾತ್ರ ಮೀನುಗಾರಿಕೆಗೆ ರಜೆ ಇರುತ್ತದೆ. ಆದರೆ ನಾಡದೋಣಿ ಮೀನುಗಾರಿಕೆಗೆ ಮುಕ್ತ ಅವಕಾಶ ಇದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios