Asianet Suvarna News Asianet Suvarna News

ಕೊರೋನಾ ಸೋಂಕಿನಿಂದ ಗುಣಪಟ್ಟ ಹರಿಹರದ ವೃದ್ಧ ನಾಪತ್ತೆ..!

ಹರಿಹರದ ಗಂಗಾ ನಗರದ ನಿವಾಸಿ ಸುಮಾರು 65 ವರ್ಷದ ವೃದ್ಧನಲ್ಲಿ ಕೊರೋನಾ ಪಾಸಿಟಿವ್‌ ಬಂದಿತ್ತು. ದಾವಣಗೆರೆ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ಸೋಂಕಿನಿಂದ ಗುಣಮುಖರಾಗಿ, ಮನೆಗೆ ವಾಪಾಸ್ಸಾಗಿದ್ದರು. ಈಗ ಆ ವ್ಯಕ್ತಿ ನಾಪತ್ತೆಯಾಗಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

cured COVID 19 Patient Missing in Harihara Davanagere District
Author
Davanagere, First Published Jul 6, 2020, 10:52 AM IST | Last Updated Jul 6, 2020, 10:52 AM IST

ದಾವಣಗೆರೆ(ಜು.06): ಕೋವಿಡ್‌ ಆಸ್ಪತ್ರೆಯಿಂದ ಮನೆಗೆ ಬಂದು ಕ್ವಾರಂಟೈನ್‌ನಲ್ಲಿ ಇರಬೇಕಾಗಿದ್ದ 65 ವರ್ಷದ ವೃದ್ಧನೊಬ್ಬ ಮನೆಯಿಂದ ನಾಪತ್ತೆಯಾದ ಘಟನೆ ಹರಿಹರದ ಗಂಗಾ ನಗರದಲ್ಲಿ ವರದಿಯಾಗಿದೆ.

ಹರಿಹರದ ಗಂಗಾ ನಗರದ ನಿವಾಸಿ ಸುಮಾರು 65 ವರ್ಷದ ವೃದ್ಧನಲ್ಲಿ ಕೊರೋನಾ ಪಾಸಿಟಿವ್‌ ಬಂದಿತ್ತು. ದಾವಣಗೆರೆ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ಸೋಂಕಿನಿಂದ ಗುಣಮುಖರಾಗಿ, ಮನೆಗೆ ವಾಪಾಸ್ಸಾಗಿದ್ದರು.

ಸೋಂಕಿತ ವೃದ್ಧನ ಮನೆಯ ಸದಸ್ಯರು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಇತ್ತ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆಗೆ ಮರಳಿದ್ದ ವೃದ್ಧನ ಮನೆ ಬೀಗ ಹಾಕಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅದೇ ಮನೆ ಮುಂದೆ ವೃದ್ಧನನ್ನು ಬಿಟ್ಟು ಹೋಗಿದ್ದರು.

ವಿಜಯಪುರ: ಆಸ್ಪತ್ರೆ ಸೀಲ್‌ಡೌನ್‌, ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ..!

ಮನೆ ಬೀಗ ಹಾಕಿದ್ದರಿಂದ ಅಲ್ಲಿಯೇ ಜಗುಲಿ ಮೇಲೆ ಶನಿವಾರ ರಾತ್ರಿ ಮಲಗಿದ್ದ ವೃದ್ಧ ರಾತ್ರೋರಾತ್ರಿ ಚಳಿಯಲ್ಲಿ ಮನೆಯನ್ನು ಬಿಟ್ಟು ಹೋಗಿದ್ದಾರೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕಾಗಿದ್ದ ವೃದ್ಧನು ತನ್ನದೇ ಮನೆ ಬೀಗ ಹಾಕಿದ್ದರಿಂದ ಅಲ್ಲಿಂದ ನಾಪತ್ತೆಯಾಗಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ಹರಿಹರಗದ ಗಂಗಾ ನಗರದಿಂದ ನಾಪತ್ತೆಯಾದ ವೃದ್ಧನ ವಿಚಾರ ತಿಳಿದ ಸ್ಥಳೀಯರು, ನೆರೆಹೊರೆಯವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪರಿಚಯಸ್ಥರು ಗಂಗಾ ನಗರ, ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ಅಜ್ಜನ ಸುಳಿವು ಸಿಕ್ಕಿಲ್ಲ. ಬೀಗ ಹಾಕಿದ್ದ ಮನೆ ಮುಂದೆ ವೃದ್ಧನನ್ನು ಇಳಿಸಿ, ಹೋಂ ಕ್ವಾರಂಟೈನ್‌ನಲ್ಲಿರುವಂತೆ ಹೇಳಿ ಹೋದ ಆರೋಗ್ಯ ಇಲಾಖೆ ಸಹ ಈಗ ಕೈಗೆ ಸೀಲು ಹಾಕಿದ್ದ ವೃದ್ಧನ ಬಗ್ಗೆ ಚಿಂತೆ ಮಾಡುವಂತಾಗಿದೆ.

Latest Videos
Follow Us:
Download App:
  • android
  • ios