ಭಜನೆ ಮಾಡುವ ಜನ ಕಾಂಗ್ರೆಸ್ಸಿಗೆ ಉಗ್ರರಂತೆ ಕಾಣುತ್ತಾರೆ: ಸಿಟಿ ರವಿ
* ಕಾಂಗ್ರೆಸ್ ಯಾವತ್ತೂ ಹಿಂದುಗಳ ಪರವಾಗಿಲ್ಲ
* ಕಾಂಗ್ರೆಸ್‌ನವರು ಮುಸ್ಲಿಂ ಪರವಾಗಿದ್ದರಿಂದಲೇ ದೇಶ ವಿಭಜನೆ ಆಯ್ತು
* ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಮಹಾನುಭಾವರು
ಚಿಕ್ಕಮಗಳೂರು(ಮೇ.13): ಭಜನೆ ಮಾಡುವ ಜನ ಕಾಂಗ್ರೆಸ್‌ನವರಿಗೆ ಭಯೋತ್ಪಾದಕರಂತೆ(Terrorists) ಕಾಣುತ್ತಾರೆ. ಅವರದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿಸಿದವರು ಬ್ರದರ್ಸ್ ಥರ ಕಾಣುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಲೇವಡಿ ಮಾಡಿದ್ದಾರೆ.
ಮಸೀದಿ(Masjid)- ದೇವಾಲಯಗಳಲ್ಲಿ(Templs) ಮೈಕ್ ಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್(Congress) ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರ ಹೇಳಿಕೆ ನೋಡಿದರೆ, ಅವರು ಈ ದೇಶದ ನ್ಯಾಯಾಲಯದ ತೀರ್ಪಿಗಿಂತ ತಮ್ಮ ಮತ ಬ್ಯಾಂಕ್ ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರು ಏಕಾಏಕಿಯಾಗಿ ತಾವು ಮುಸ್ಲಿಂ ಪರವಾಗಿದ್ದೇನೆ, ಹಿಂದೂಗಳ ಪರವಾಗಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ ಅಂತ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಯಾವತ್ತೂ ಹಿಂದುಗಳ(Hindu) ಪರವಾಗಿಲ್ಲ. ಅವರು ಮುಸ್ಲಿಂ(Muslim) ಪರವಾಗಿದ್ದರಿಂದಲೇ ದೇಶ ವಿಭಜನೆ ಆಯ್ತು, ಅವರು ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಎಂದರು. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಈ ಮಹಾನುಭಾವರು, ಮತೀಯವಾದದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದರು.
ಗಲಭೆಕೋರರ ನಾಲ್ಕು ತಲೆ ಉರುಳಿದ್ದರೆ 50 ವರ್ಷ ಹುಬ್ಬಳ್ಳಿ ಶಾಂತವಾಗಿರುತ್ತಿತ್ತು: ಸಿ.ಟಿ. ರವಿ
ಡಿಕೆಶಿಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು
ಚಿಕ್ಕಮಗಳೂರು: ಡಿ ಕೆ ಶಿವಕುಮಾರ್ ಗೆ (DK Shivakumar ) ಸೋನಿಯಾ ಗಾಂಧಿ , ಸಿಎಂ ಬೊಮ್ಮಾಯಿಗೆ ಮೋದಿಯೇ ದೇವರು ಎಂದು ಹೇಳಿಕೆ ನೀಡಿದ್ದ ಸಿ.ಎಂ.ಇಬ್ರಾಹಿಂಗೆ ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ ಇಬ್ರಾಹಿಂ ಅವರನ್ನ ರಾಜಕೀಯ ವಿಧೂಷಕ ಅಂತಾರೆ, ನಾನು ಹಾಗೇ ಹೇಳಲ್ಲ ಅವರನ್ನ ರಾಜಕೀಯದಲ್ಲಿ ಯಾರೂ ಗಂಭೀರವಾಗಿ ತಗಳಲ್ಲ ಎಂದು ಲೇವಡಿ ಮಾಡಿದ್ದರು.
ಸಿಎಂ ಇಬ್ರಾಹಿಂ ಎಲ್ಲಿ, ಯಾವ ಪಾತ್ರಕ್ಕೆ ಬೇಕಾದ್ರು ಸೂಕ್ತವಾಗುವ ವ್ಯಕ್ತಿ : ಸಿಎಂ ಇಬ್ರಾಹಿಂ ಎಲ್ಲಿ, ಯಾವ ಪಾತ್ರಕ್ಕೆ ಬೇಕಾದ್ರು ಸೂಕ್ತವಾಗುವ ವ್ಯಕ್ತಿ ಎಂದು ವ್ಯಂಗ್ಯ ಮಾಡಿದರು. ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ ಹೇಳಿದ್ದ ನೆನಪು ಮಾಡಲು ನನ್ನಿಂದ ಆಗಲ್ಲ , ಕಾಂಗ್ರೆಸ್ ಬಂದಾಗ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಿ ಎಂದು ಇಬ್ರಾಹಿಂ ಸಲಹೆ ನೀಡಿದ್ದರು.
ಕ್ಯಾಸೆಟ್ ಹಾಕಿ ನೋಡಿದ್ದಾಗ ಆಗ ಇಬ್ರಾಹಿಂಗೆ ದೇವೇಗೌಡರ ಮೇಲಿರೋ ಪ್ರಾಮಾಣಿಕ ಭಾವನೆ ಏನೆಂದು ವ್ಯಕ್ತವಾಗುತ್ತೆ ಅಲ್ಲದೆ ನಮಗೆ ಭಾರತ ಮಾತೆಯೇ ದೇವರು, ಎಲ್ಲಾ ದೇವರಿಗಿಂತ ಭಾರತಮಾತೆಯೇ ದೊಡ್ಡವಳು ಎಂದು ಹೇಳಿದರು. ಅಟಲ್ ಜೀ, ಮೋದಿ, ಅಡ್ವಾಣಿ, ಅಮಿತ್ ಶಾ ನಮ್ಮ ನಾಯಕರು ನಾಯಕರನ್ನ ನಾಯಕರ ಸ್ಥಾನದಲ್ಲೇ ನೋಡುತ್ತೇವೆ, ದೇವರ ಸ್ಥಾನದಲ್ಲಿ ಅಲ್ಲ ಎಂದು ಹೇಳಿದ್ದರು.