ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಸಿ.ಟಿ ರವಿ ವಾಗ್ದಾಳಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧೀ ವಿರುದ್ದ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ ಎಂದಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಡಿ.17): ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. ಒಂದೊಂದು ಇಂಚು ಜಾಗಕ್ಕೂ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ತಿರುಗೇಟು ನೀಡಿದರು. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿದ್ದೆಗೆ ಜಾರಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. ಒಂದೊಂದು ಇಂಚಿಗೂ ಕೂಡಾ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ತಿರುಗೇಟು ನೀಡಿದರು.
ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ:
ಮಾನಸಿಕತೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ, ಕುಕ್ಕರ್ ಸ್ಪೋಟಗೊಂಡಿದ್ದು ಸತ್ಯ, ಆಟೋ ಚಾಲಕ, ಕುಕ್ಕರ್ ಬಾಂಬ್ ತಯಾರಿಸಿ ಮುಖ್ಯಮಂತ್ರಿಗಳನ್ನ, ಅವರ ಸಭೆಯನ್ನು ಟಾರ್ಗೆಟ್ ಮಾಡಿದ್ದವನೂ ಆಸ್ಪತ್ರೆಯಲ್ಲಿದ್ದಾನೆ. ಬಾಂಬ್ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್ ಬ್ಲಾಸ್ಟ್ ಆಗಲು ಸಾದ್ಯವೇ? ಎಂದು ಪ್ರಶ್ನಿಸಿದರು. ಇಂತಹ ಸಂದರ್ಭದಲ್ಲಿ ಆರೋಪಿಗಳ ಪರವಾಗಿರುವ ಮಾನಸಿಕತೆಯನ್ನು ಪ್ರದರ್ಶನ ಮಾಡಿದರೆ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾದ ಸಂಗತಿ. ಹೊರಗಿನ ಶತೃಗಳನ್ನು ನಿಗ್ರಹಿಸುವುದು ಬಹಳ ಸುಲಭ ಆದರೆ ಆಂತರಿಕ ಶತೃಗಳು, ಶತೃಗಳಿಗೆ ಬೆಂಬಲಿಸುವ ಮಾನಸಿಕತೆ ಬಹಳ ಅಪಾಯಕಾರಿ. ಕಾಂಗ್ರೆಸ್ ಅಧ್ಯಕ್ಷರು ತೋರಿಸಿದ್ದು ಅಂತಹ ಅಪಾಯಕಾರಿ ವರ್ತನೆಯನ್ನು. ಅವರು ಬೇಷರತ್ ಕ್ಷಮೆಯಾಚಿಸುತ್ತಾರೆ ಎಂದುಕೊಂಡಿದ್ದೆವು, ಆದರೆ ಮೊಂಡು ಸಮರ್ಥನೆಗಿಳಿದಿರುವುದು ಮತ್ತು ಅವರ ಸಮರ್ಥನೆಗೆ ಉಳಿದವರು ನಿಂತಿರುವುದು, ಇದು ಕಾಂಗ್ರೆಸ್ನ ಇಂದಿನ ಮಾನಸಿಕತೆಯನ್ನು ತೋರಿಸುತ್ತದೆ.
ಅಂದು ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಿಯಾಂಕ್ ಖರ್ಗೆ :
ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಪ್ರಿಯಾಂಕ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿರುವ ಸಿ .ಟಿ ರವಿ.2000 ಇಸವಿಯ ಆಸುಪಾಸಿನಲ್ಲಿ ನಡೆದ ಚರ್ಚುಗಳಲ್ಲಿನ ಸರಣಿ ಬಾಂಬ್ ಸ್ಫೋಟದ ವಿಷಯದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ತನಿಖೆಗೂ ಮೊದಲೇ ಈ ಕೃತ್ಯದ ಇಂದೆ ಆರ್ಎಸ್ಎಸ್ ಕೈವಾಡ ಇದೆ ಎಂದು ಹೇಳಿಕೆ ಕೊಟ್ಟಿದ್ದರು. ಆಕಸ್ಮಿಕವಾಗಿ ಬಾಂಬ್ ಒಯ್ಯುವ ವೇಳೆ ರಸ್ತೆ ಹಂಪ್ ಹತ್ತುವಾಗ ವಾಹನದಲ್ಲಿ ಬಾಂಬ್ ಸ್ಪೋಟವಾಗಿದ್ದ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ತಿಳಿಯಿತು. ಪಾಕಿಸ್ತಾನದಿಂದ ಪ್ರಚೋದನೆ ಪಡೆದ ಹುಬ್ಬಳ್ಳಿ ಮೂಲದ ಸಂಘಟನೆ ಇಡೀ ಬಾಂಬ್ ಸ್ಫೋಟವನ್ನು ಮಾಡಿತ್ತು ಎನ್ನುವ ಸತ್ಯ. ಎಲ್ಲರನ್ನೂ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿತ್ತು, ಅಂದು ವಿವೇಚನೆ ಇಲ್ಲದೆ ಹೇಳಿಕೆ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ, ಇಂದು ವಿವೇಚನೆ ಇಲ್ಲದೆ ಅವರ ಅಧ್ಯಕ್ಷರನ್ನು ಸಮರ್ಥನೆ ಮಾಡುತ್ತಿರುವುದು ಪ್ರಿಯಾಂಕ್ ಖರ್ಗೆ ಎಂದು ತಿರುಗೇಟು ನೀಡಿದರು.
ಬಿಲಾವಾಲ್ ಬುಟ್ಟೊ ಹೇಳಿದನ್ನೇ ರಾಹುಲ್ ಗಾಂಧಿ ಹೇಳೋದು:
ಮತ ಬ್ಯಾಂಕ್ಗಾಗಿ ಒಂದು ಸಮುದಾಯವನ್ನು ಓಲೈಸುವ ಡಿಎನ್ಎ ಇದನ್ನೇ ಕಾಂಗ್ರೆಸ್ ಪಾಲಿಸುತ್ತಿದೆ. ರಾಹುಲ್ ಗಾಂಧಿ ಹೇಳಿದ್ದನ್ನೇ ಬಿಲಾವಲ್ ಬುಟ್ಟಾ ಹೇಳೋದು, ಅವರು ಹೇಳಿದ್ದನೇ ರಾಹುಲ್ ಗಾಂಧಿ ಹೋಳೋದು, ಇದು ಬಹು ದೊಡ್ಡ ಅಪಾಯಕಾರಿ ಸಂಗತಿಯಾಗಿದೆ. ಇವರಿಬ್ಬರ ನಡುವಿನ ಹೊಂದಾಣೀಕೆ ಏನೆಂದು ಗೊತ್ತಿಲ್ಲ. ಆದರೆ ಇಬ್ಬರೂ ಕೂಡಾ ವಂಶ ಪಾರಂಪರ್ಯದ ಕುಡಿಗಳು, ಅಲ್ಲಿರುವ ಪಾಕಿಸ್ತಾನ ಆ ತುಂಡು, ಹಾಗೂ ಇದೂ ಕೂಡಾ ವಂಶ ಪಾರಂಪರ್ಯದ ಕುಡಿ ಎನ್ನುವುದಂತೂ ಗೊತ್ತು ಎಂದು ವ್ಯಂಗ್ಯ ಮಾಡಿದರು. ಪಾಕಿಸ್ತಾನದ ಮಾನಸಿಕತೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿರುವುದು, ಕಾಂಗ್ರೆಸ್ ಮಾನಸಿಕತೆಯಲ್ಲಿ ಪಾಕಿಸ್ತಾನ ಮಾತನಾಡುತ್ತಿರುವುದನ್ನು ನೋಡಿದರೆ ಯಾವುದಾದರೂ ಒಳ ಒಪ್ಪಂದ ನಡೆದಿದೆಯಾ ಎನ್ನುವ ಸಂಶಯದ ಸುಳಿಯಲ್ಲಿ ಜನರನ್ನು ಸಿಲುಕಿಸಿದೆ. ಕಾಂಗ್ರೆಸ್ಸಿಗರಿಗೆ ನಮ್ಮ ದೇಶದ ಸೈನಿಕರ ಮೇಲೆ ನಂಬಿಕೆ ಇಲ್ಲ. ನಮ್ಮ ದೇಶದ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದರೆ ಸಾಕ್ಷಿ ಕೇಳ್ತಾರೆ, ಆ ಸಾಕ್ಷಿಯನ್ನು ಪಾಕಿಸ್ತಾನ ಬಹಳ ದಿನಗಳ ನಂತರ ಸಂಸತ್ನಲ್ಲಿ ಒಪ್ಪಿಕೊಳ್ಳುತ್ತೆ. ಅಲ್ಲಿರುವ ಮಾದ್ಯಮಗಳು ವರದಿ ಮಾಡುತ್ತವೆ.
ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ
ಆದರೆ ಕಾಂಗ್ರೆಸ್ ಸಾಕ್ಷಿ ಕೇಳುತ್ತೆ. ಚೀನಾ - ಭಾರತ ನಡುವಿನ ಸೈನಿಕರ ಸಂಘರ್ಷದಲ್ಲಿ ನಮ್ಮ ಸೈನಿಕರು ತಮ್ಮ ಸಾಮರ್ಥ್ಯವನ್ನು ಪ್ರಕಟ ಮಾಡಿದಾಗಲೂ ಕೂಡಾ ಅವರನ್ನ ಅನುಮಾನಿಸುವ, ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಈ ಮಾನಸಿಕತೆ ಅಪಾಯಕಾರಿ, ಉಗ್ರರನ್ನು ಬೆಂಬಲಿಸುವ, ದೆ ಆರ್ ಆಲ್ ಬ್ರದರ್ಸ್ ಎನ್ನುವ ಮಾನಸಿಕತೆಯನ್ನು ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ, ಪಾದರಾಯನಪುರ ಪ್ರಕರಣದಲ್ಲಿ ನೋಡಿದ್ದೆವು. ಅದು ಮುಂದುವರೆದು ಕುಕ್ಕರ್ ಬ್ಲಾಸ್ಟ್ನ ರೂವಾರಿಯವರೆಗೂ ತಲುಪಿರುವುದು ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ, ಇದರಿಂದ ಕಾಂಗ್ರೆಸ್ ಹೊರಬರಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಜನ ನಿಯಂತ್ರಿಸುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.
ಸಿ.ಟಿ.ರವಿ ವಿರುದ್ಧ ಇ.ಡಿ.ಗೆ ದೂರು: ಕಾಂಗ್ರೆಸ್
ಮುಸ್ಲಿಂ ಮುಖಂಡರ ಸಭೆ : ಸಿ.ಟಿ ರವಿ ವ್ಯಂಗ್ಯ
ಕಾಂಗ್ರೆಸ್ ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ ವಿಷಯ ಕುರಿತು ಮಾತನಾಡಿದ ಅವರು, ಅಷ್ಟಕ್ಕೇ ಸೀಮಿತವಾದರೆ ಅದು ರಾಜಕೀಯವಾಗಿ ಮಾಡುವ ಸಾಮಾನ್ಯ ಕಸರತ್ತು ಎಂದುಕೊಳ್ಳುತ್ತಿದ್ವಿ. ಅದನ್ನ ಮೀರಿ ಕುಕ್ಕರ್ ಸ್ಪೋಟ ಮಾಡಿದವರ ಬೆಂಬಲಕ್ಕೆ ನಿಲ್ಲುವುದು, ಬೆಂಕಿ ಹಾಕಿದವರ ಬೆಂಬಲಕ್ಕೆ ನಿಲ್ಲುವುದು, ಅವರಿಗೆ ಜಾಮೀನು ಕೊಡಿಸಲು ವಕೀಲರ ನೇಮಿಸಿ ಸಹಾಯ ಮಾಡುವುದು. ಹಿಜಾಬ್ ಪ್ರಕರಣದಲ್ಲಿ ಸಮವಸ್ತ್ರದ ವಿರುದ್ಧ ಎಲ್ಲ ರೀತಿಯ ಸಹಾಯ ಮಾಡುವುದು, ಮತಾಂತರ ನಿಷೇದ ಕಾಯ್ದೆ ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳುವುದು, ಲವ್ ಜಿಹಾದ್ ಬೆಂಬಲಿಸುವ ಮಾನಸಿಕತೆ ಅಪಾಯಕಾರಿ ಇದು ಕಾಂಗ್ರೆಸ್ ಅಧೋಗತಿಗೆ ಒಂದು ನಿದರ್ಶನ ಎಂದು ಕುಟುಕಿದರು.