Asianet Suvarna News Asianet Suvarna News

Octacopter: ಬೆಂಗಳೂರಿನಲ್ಲಿ ಡ್ರೋನ್‌ ಮೂಲಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ರವಾನೆ!

*ಚಂದಾಪುರದಿಂದ ಹಾರಗದ್ದೆಗೆ ಲಸಿಕೆ ರವಾನೆ!
*14 ಕಿಮೀ ದೂರ - 20 ನಿಮಿಷಗಳ ಕಾಲ ಕಾರ್ಯಾಚರಣೆ
*ಔಷಧಗಳು, ಲಸಿಕೆಗಳು ಹಾಗೂ ಆಹಾರ ರವಾನೆಗೂ ಬಳಕೆ
*ಹಗುರವಾದ ಕಾರ್ಬನ್ ಫೈಬರ್‌ನಿಂದ ಆಕ್ಟಾಕಾಪ್ಟರ್ ರಚನೆ!

CSIR NAL octacopter drone was used to deliver Covid vaccines in Bengaluru Karnataka mnj
Author
Bengaluru, First Published Nov 13, 2021, 9:49 PM IST

ಬೆಂಗಳೂರು(ನ.13): ಡ್ರೋನ್‌ (Drone) ಸಹಾಯಸದ ಮೂಲಕ ಬೆಂಗಳೂರಿನ ಹಾರಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕೋವಿಡ್‌ ಲಸಿಕೆಗಳನ್ನು (Covid Vaccine) ತಲುಪಿಸುವ ಮೂಲಕ ಹೊಸ ಪ್ರಯತ್ನ ಮಾಡಲಾಯಿತು. CSIR-NALನ ‘ಆಕ್ಟಾಕಾಪ್ಟರ್ (octacopter)’ ಡ್ರೋನ್ ಶನಿವಾರ 50 ಕೋವಿಡ್ ಲಸಿಕೆಗಳನ್ನು ಕರ್ನಾಟಕದ ಹಾರಗದ್ದೆಯ (Haragadde) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿತು. ಚಂದಾಪುರ  ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಿಶೇಷ ಕಂಟೈನರ್‌ನಲ್ಲಿ ಸಿರಿಂಜ್‌ಗಳೊಂದಿಗೆ ಲಸಿಕೆಗಳನ್ನು ತಲುಪಿಸಲಾಯಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನ ಒಂದು ಘಟಕ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (NAL) ದೂರದ ಪ್ರದೇಶಗಳಿಗೆ ಲಸಿಕೆಗಳ ವೈಮಾನಿಕ ವಿತರಣೆಗಾಗಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಿದೆ.

14 ಕಿಮೀ ದೂರ - 20 ನಿಮಿಷಗಳ ಕಾಲ ಕಾರ್ಯಾಚರಣೆ!

“CSIR-NAL ನ ಆಕ್ಟಾಕಾಪ್ಟರ್ ಕೋವಿಡ್ -19 ಲಸಿಕೆಗಳನ್ನು ಹೊತ್ತು ಚಂದಾಪುರ PHC ಯಿಂದ ಬೆಳಿಗ್ಗೆ 9.43 ಕ್ಕೆ ಟೇಕಾಫ್ ಮಾಡಿತು ಮತ್ತು 9.53 ಕ್ಕೆ ಹಾರಗದ್ದೆ ಆರೋಗ್ಯ ಕೇಂದ್ರಕ್ಕೆ ತಲುಪಿಸಿತು. ಆಕ್ಟಾಕಾಪ್ಟರ್ ನೆಲಮಟ್ಟದಿಂದ 300 ಮೀಟರ್ ಎತ್ತರದಲ್ಲಿ 10 ಮೀಟರ್/ಸೆಕೆಂಡಿನ ವೇಗದಲ್ಲಿ ಹಾರಿತು ಮತ್ತು ಸುಮಾರು 10 ನಿಮಿಷಗಳಲ್ಲಿ 7 ಕಿಮೀ ವೈಮಾನಿಕ ದೂರವನ್ನು ಕ್ರಮಿಸಿತು. ಹಾರಗದ್ದೆಯಲ್ಲಿ ಲಸಿಕೆಗಳನ್ನು ವಿತರಿಸಿದ ನಂತರ ಆಕ್ಟಾಕಾಪ್ಟರ್ ಚಂದಾಪುರ ಆರೋಗ್ಯ ಕೇಂದ್ರಕ್ಕೆ ಮರಳಿತು. ಲಸಿಕೆಗಳ ವಿತರಣೆ ಸೇರಿದಂತೆ ಇಡೀ ಕಾರ್ಯಾಚರಣೆಯು ಸುಮಾರು 14 ಕಿಮೀ ದೂರವನ್ನು 20 ನಿಮಿಷಗಳಲ್ಲಿ ಕ್ರಮಿಸಿತು ಎಂದು ಸಿಎಸ್ಐಆರ್-ಎನ್ಎಎಲ್ ನಿರ್ದೇಶಕ ಡಾ ಜಿತೇಂದ್ರ ಜೆ ಜಾಧವ್ (Jitendra J Jadhav) ಹೇಳಿದ್ದಾರೆ.

ಔಷಧಗಳು, ಲಸಿಕೆಗಳು, ಆಹಾರ ರವಾನೆಗೆ ಬಳಕೆ!

ವೈದ್ಯಾಧಿಕಾರಿ ಡಾ.ಮನಿಷಾ ಮಾತನಾಡಿ, ಚಂದಾಪುರದಿಂದ ರಸ್ತೆ ಮಾರ್ಗವಾಗಿ ಹಾರಗದ್ದೆಗೆ ಲಸಿಕೆಗಳನ್ನು ತಲುಪಿಸಲು ಸಾಮಾನ್ಯವಾಗಿ 30-40 ನಿಮಿಷಗಳು ಬೇಕಾಗುತ್ತದೆ. "ಲಸಿಕೆಗಳ ವೇಗದ ಮತ್ತು ಸುರಕ್ಷಿತ ವೈಮಾನಿಕ ವಿತರಣೆಯ ಪ್ರದರ್ಶನವನ್ನು ವೀಕ್ಷಿಸಿ PHC ಗಳಲ್ಲಿನ ವೈದ್ಯರು ಸಂತೋಷಪಟ್ಟರು" ಎಂದು ಅವರು ಹೇಳಿದರು.

Aerospace Technology| ಏರೋಸ್ಪೇಸ್‌ಗೆ ಬೆಂಗ್ಳೂರಲ್ಲಿ ವಿಫುಲ ಅವಕಾಶ: ಸಿಎಂ ಬೊಮ್ಮಾಯಿ

"NAL ಅಭಿವೃದ್ಧಿಪಡಿಸಿದ ಆಕ್ಟಾಕಾಪ್ಟರ್ ಅನ್ನು ಔಷಧಗಳು, ಲಸಿಕೆಗಳು, ಆಹಾರ, ಪೋಸ್ಟಲ್ ಪ್ಯಾಕೆಟ್‌ಗಳು, ಮಾನವ ಅಂಗಗಳು, ಇತ್ಯಾದಿಗಳನ್ನು ದೂರದ ಪ್ರದೇಶಗಳಿಗೆ(Beyond Visual Line of Sight)ಕೊನೆಯ ಮೈಲಿ ವಿತರಣೆಗಾಗಿ ಬಳಸಬಹುದು . NAL ಆಕ್ಟಾಕಾಪ್ಟರ್ ಕೃಷಿ ಕೀಟನಾಶಕ ಸಿಂಪಡಣೆ, ಬೆಳೆ ಮೇಲ್ವಿಚಾರಣೆ, ಗಣಿಗಾರಿಕೆ ಸಮೀಕ್ಷೆ, ಮ್ಯಾಗ್ನೆಟಿಕ್ ಜಿಯೋ ಸಮೀಕ್ಷೆ ಮ್ಯಾಪಿಂಗ್ ಮುಂತಾದ ಕೆಲಸಗಳಿಗಾಗಿ ಬಳಸಬಹುದು. ಈ ಕಾರ್ಯಗಳನ್ನು ನಿರ್ವಹಿಸಲು ಆಕ್ಟಾಕಾಪ್ಟರ್‌ಗೆ  ಬೋರ್ಡ್ ಎಂಬೆಡೆಡ್ ಕಂಪ್ಯೂಟರ್ (board embedded computer) ಮತ್ತು ಇತ್ತೀಚಿನ ಹೊಸ ಮಾದರಿಯ ಸೆನ್ಸರ್ಸ್‌ (Censor) ಅಳವಡಿಸಲಾಗಿದೆ."  ಎಂದು ಜಾಧವ್ ಹೇಳಿದರು.

ಹಗುರವಾದ ಕಾರ್ಬನ್ ಫೈಬರ್‌ ರಚನೆ!

NAL ಮಧ್ಯಮ ದರ್ಜೆಯ BVLOS ಮಲ್ಟಿ-ಕಾಪ್ಟರ್ UAV ಅನ್ನು ಅಭಿವೃದ್ಧಿಪಡಿಸಿದೆ. ಇದು ಸಾರಿಗೆಯನ್ನು ಸುಲಭ ಮಾಡಿಸಬಹುದಾದ ರಚನೆಯೊಂದಿಗೆ ಹಗುರವಾದ ಕಾರ್ಬನ್ ಫೈಬರ್‌ನಿಂದ (Carbon Fibre) ಮಾಡಲ್ಪಟ್ಟಿದೆ ಮತ್ತು ಸುಧಾರಿತ ವಿಮಾನ ಸಲಕರಣೆ ವ್ಯವಸ್ಥೆಗಳೊಂದಿಗೆ ಡ್ಯುಯಲ್ ರಿಡಂಡೆಂಟ್ MEMS-ಆಧಾರಿತ ಡಿಜಿಟಲ್ ಆಟೋಪೈಲಟ್  ಮಾರ್ಗದರ್ಶನದಂತಹ ವಿಶಿಷ್ಟ ಫೀಚರ್ಸ್ ಹೊಂದಿದೆ.‌

2022ರ ಏಪ್ರಿಲ್‌ಗೆ 5ಜಿ ಸ್ಪೆಕ್ಟ್ರಂ ಹರಾಜು: ಸಚಿವ ವೈಷ್ಣವ್‌

ಈ ಪ್ರಯತ್ನಕ್ಕೆ ತಮ್ಮ ತಂಡವನ್ನು ಅಭಿನಂದಿಸಿದ ಸಿಎಸ್‌ಐಆರ್-ಎನ್‌ಎಎಲ್‌ನ ಯುಎವಿ ಮುಖ್ಯಸ್ಥ ಡಾ ಪಿ ವಿ ಸತ್ಯನಾರಾಯಣ ಮೂರ್ತಿ, ದೇಶದ ದೂರದ ಪ್ರದೇಶಗಳಲ್ಲಿ ಲಸಿಕೆಗಳ ಹೆಚ್ಚಿನ ಒಳಹೊಕ್ಕುಗೆ ಆಕ್ಟಾಕಾಪ್ಟರ್ ಈ ಸಮಯದ ಅಗತ್ಯವಾಗಿದೆ ಎಂದು ಹೇಳಿದರು. "ಎನ್ಎಎಲ್ ಆಕ್ಟಾಕಾಪ್ಟರ್ ಅನ್ನು ಅಂತಹ ಕಾರ್ಯಾಚರಣೆಗಳಿಗಾಗಿ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಯಾವುದೇ ವಿಶೇಷ ತರಬೇತಿ ಪಡೆಯದ ವ್ಯಕ್ತಿಗಳು ಕೂಡ ಸುಲಭವಾಗಿ ನಿರ್ವಹಿಸಬಹುದು. NAL ಈಗಾಗಲೇ ಡ್ರೋನ್ ತಯಾರಿಕೆ ಮತ್ತು ಕಾರ್ಯಾಚರಣೆಯ ಸೇವೆಗಳನ್ನು ನೀಡಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ"ಎಂದು ಅವರು ಮಾಹಿತಿ ನೀಡಿದರು.

Follow Us:
Download App:
  • android
  • ios