ಚಿತ್ರದುರ್ಗ: ಅಂಬಾರಿ ಅರ್ಜುನನ ನೆನಪಿಗೆ ಕ್ರಿಕೆಟ್ ಟೂರ್ನಿ
ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಜನ್ಮದಿನದ ಪ್ರಯುಕ್ತ ಪಂದ್ಯಾವಳಿ ನಡೆಸೋದು ಸಹಜ. ಆದ್ರೆ ಚಿತ್ರದುರ್ಗದಲ್ಲಿ ದುರ್ಗನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ 8 ಬಾರಿ ಅಂಬಾರಿ ಹೊತ್ತು ಅಕಾಲಿಕ ಮರಣಕ್ಕೆ ತುತ್ತಾಗಿರುವ ಅರ್ಜುನನ ಹೆಸರಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಡಿ.21): ವ್ಯಕ್ತಿಯ ಹೆಸರಲ್ಲಿ ವಿವಿಧ ರೀತಿಯ ಪಂದ್ಯಾವಳಿ ನಡೆಸೋದು ಸಹಜ. ಆದರೆ 8 ಬಾರಿ ಅಂಬಾರಿ ಹೊತ್ತು ಇತ್ತೀಚಿಗೆ ಅಕಾಲಿಕ ಮರಣಕ್ಕೆ ತುತ್ತಾದ ಅರ್ಜುನನ ಹೆಸರಲ್ಲಿ ಕ್ರಿಕೆಟ್ ಟುರ್ನಮೆಂಟ್ ನಡೆಯುತ್ತಿರೋದೆ ವಿಶೇಷ. ಈ ಕುರಿತು ಒಂದು ವರದಿ ಇಲ್ಲಿದೆ.
ಹೌದು ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಜನ್ಮದಿನದ ಪ್ರಯುಕ್ತ ಪಂದ್ಯಾವಳಿ ನಡೆಸೋದು ಸಹಜ. ಆದ್ರೆ ಚಿತ್ರದುರ್ಗದಲ್ಲಿ ದುರ್ಗನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ 8 ಬಾರಿ ಅಂಬಾರಿ ಹೊತ್ತು ಅಕಾಲಿಕ ಮರಣಕ್ಕೆ ತುತ್ತಾಗಿರುವ ಅರ್ಜುನನ ಹೆಸರಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ. ಚಿತ್ರದುರ್ಗ ನಗರದ ಹಳೆ ಸರ್ಕಾರಿ ಬಾಲಕರ ಮೈದಾನದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಬಿ ಕಾಂತರಾಜ್ ಅವರ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ 2 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 1 ಲಕ್ಷ ತೃತೀಯ ಬಹುಮಾನ 50 ಸಾವಿರ ನಿಗಧಿ, ಜೊತೆಗೆ ವಿಜೇತ ತಂಡಗಳಿಗೆ ಅರ್ಜುನ, ಬಲರಾಮ, ದ್ರೋಣ ಟ್ರೋಫಿಗಳನ್ನು ನೀಡಲಾಗುತ್ತಿದೆ. ಪ್ರತಿ ಸಲ ದುರ್ಗಾನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಕ್ರಿಕೆಟ್ ಕ್ರಿಡಾಕೂಟ ನಡೆಸಲಾಗುತ್ತಿತ್ತು, ಆದ್ರೆ ಈ ಬಾರಿ ನಾಡಿಗೆ ಸೇವೆ ಸಲ್ಲಿಸಿ ಆಕಸ್ಮಿಕ ಮರಣ ಹೊಂದಿರುವ ಅರ್ಜುನನ ಹೆಸರಲ್ಲಿ ಕ್ರಿಕೆಟ್ ಹಮ್ಮಿಕೊಂಡಿರುವುದು ಇದೆ ಮೊದಲು ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ ಎನ್ನುತ್ತಾರೆ ಕ್ರೀಡಾಭಿಮಾನಿಗಳು.
ಚಿತ್ರದುರ್ಗದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ, ಬೆಚ್ಚಿಬಿದ್ದ ಜನತೆ..!
ಇನ್ನೂ ಪ್ರಾಣಿ ಸಂಪತ್ತು ನಮ್ಮ ದೇಶದ ಸಂಪತ್ತು ಅದನ್ನು ಉಳಿಸಬೇಕು, ವನ್ಯಜೀವಿ ಹೆಸರಲ್ಲಿ ಕ್ರಿಕೆಟ್ ಆಡಿಸುತ್ತಿರುವುದು ಇದೇ ಮೊದಲು 8 ಬಾರಿ ಅಂಬಾರಿ ಹೋತಿದ್ದ ಅರ್ಜುನನಿಗೆ ನಮನ ಸಲ್ಲಿಸುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಈ ಪಂದ್ಯಾವಳಿಯಲ್ಲಿ 35 ತಂಡಗಳು ಭಾಗವಹಿಸುತ್ತಿದ್ದಾವೆ, ಅದ್ರಲ್ಲಿ ಒಂದು ತಂಡ ಹೊರ ರಾಜ್ಯ ಚನ್ನೈ ಯಿಂದ ಬರುತ್ತಿದೆ.ಅರ್ಜುನ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಮತ್ತು ಭಾಗವಹಿಸಿರುವುದು ಖುಷಿ ತಂದಿದೆ ಎನ್ನುತ್ತಾರೆ ಆಟಗಾರರು.
ಒಟ್ಟಾರೆಯಾಗಿ ಒಂದು ಆನೆಯ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನಡೆಸುತ್ತಿರುವುದು ಇದೆ ಮೊದಲಾಗಿದ್ದು, ಬದುಕಿದ್ದಾಗ ಅದರ ಸೇವೆಯನ್ನು ಗಮನಿಸಿ ಅದ್ರ ಅಗಲಿಕೆಯ ಅವಧಿಯಲ್ಲೂ ಅದಕ್ಕೆ ಗೌರವ ಸಲ್ಲಿಸುತ್ತಿವರ ದುರ್ಗನ್ಸ್ ಕ್ರಿಕೆಟ್ ಕ್ಲಬ್ ನ ಈ ಕಾರ್ಯ ಪ್ರಾಣಿ ಪ್ರಿಯರಿಗೆ ಸಂತಸ ಮೂಡಿಸಿದೆ ಎಂದು ಹೇಳಬಹುದು.