'ಶ್ರೀಮಂತರ ಪರವಾಗಿರುವ ಮೋದಿ ಸರ್ಕಾರ'
* ಸಿಪಿಐಎಂ ಜಿಲ್ಲಾ ಸಮ್ಮೇಳನ ಉದ್ಘಾಟಿಸಿದ ಎಸ್. ವರಲಕ್ಷ್ಮೀ
* ಜನರ ಬದುಕಿಗೆ ಅತ್ಯಗತ್ಯ ಬೇಕಾದ ವಸ್ತುಗಳ ಬೆಲೆ ವಿಪರೀತ ಏರಿಕೆ
* ಕೃಷಿಯನ್ನು ಕಂಪನೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರ
ಹುಬ್ಬಳ್ಳಿ(ನ.01): ಕೇಂದ್ರ ಸರ್ಕಾರದ ನೀತಿಗಳು ಸಂಪೂರ್ಣ ಶ್ರೀಮಂತರ ಪರವಾಗಿದ್ದು ಬಡವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತಾಗಿವೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯೆ ಎಸ್. ವರಲಕ್ಷ್ಮೀ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ (CPIM) 12ನೇ ಧಾರವಾಡ(Dhrwad) ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಆಹಾರ ವಸ್ತು, ಅಡುಗೆ ಅನಿಲ, ತೈಲಬೆಲೆ ಸೇರಿದಂತೆ ಜನರ ಬದುಕಿಗೆ ಅತ್ಯಗತ್ಯ ಬೇಕಾದ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗುತ್ತಿವೆ. ಈ ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರಿಗೆ ಅನುಕೂಲ ಕಲ್ಪಿಸಬೇಕಿದ್ದ ಸರ್ಕಾರ(Central Government) ಮೌನವಹಿಸಿದೆ. ಕೂಡಲೇ ತೈಲದ(Fuel) ಮೇಲಿನ ತೆರಿಗೆ(Tax) ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಕಾಯಿದೆಗೆ(Agricultural Act) ತಿದ್ದುಪಡಿ ತರುವ ಮೂಲಕ ಕೃಷಿಯನ್ನು ಕಂಪನೀಕರಣ ಮಾಡಲು ಹೊರಟಿದೆ. ಇದನ್ನು ವಿರೋಧಿಸಿ ರೈತರು(Farmers) ದೆಹಲಿ ಗಡಿಯಲ್ಲಿ ವರ್ಷದಿಂದ ಹೋರಾಟ ಮಾಡುತ್ತಿದ್ದರೆ. ಈ ಹೋರಾಟ ಹತ್ತಿಕ್ಕಲು ಬಿಜೆಪಿ ಸರ್ಕಾರ(BJP Government) ಅತ್ಯಂತ ಕ್ರೌರ್ಯ ಮೆರೆಯುತ್ತಿರುವುದು ಸರ್ವಾಧಿಕಾರಿ(Dictator) ನಡೆ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಡರಂಗದ ಕೋಟೆಗೆ ಬಿತ್ತು ಬೀಗ..! ಶೂನ್ಯ ಸಂಪಾದನೆಗೇನು ಕಾರಣ?
ದೇಶದ ಹಾಗೂ ರಾಜ್ಯದ ಐಕ್ಯತೆ ಹಾಗೂ ಸೌಹಾರ್ದತೆಗೆ ಬಿಜೆಪಿ ಹಾಗೂ ಸಂಘ ಪರಿವಾರಗಳು ದಕ್ಕೆ ತರುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಆಡಳಿತ ನಡೆಸುತ್ತಿರುವ ಸಿಎಂ ಹಾಗೂ ಗೃಹ ಮಂತ್ರಿಗಳೇ ಪ್ರಚೋದನಕಾರಿ ಮತ್ತು ಹೊಣೆಗೇಡಿತನದ ಹೇಳಿಕೆ ನೀಡುತ್ತಿರುವುದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ(Democracy) ಎಸಗುತ್ತಿರುವ ದ್ರೋಹವಾಗಿದೆ ಎಂದರು.
ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯ ಶಾಂತಾರಾಮ್ ನಾಯಕ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತ- ಕಾರ್ಮಿಕರನ್ನು ಬೀದಿಪಾಲು ಮಾಡಿ ದೇಶದ ಆಸ್ತಿಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತೆ ಇಡಲಿಕ್ಕೆ ಹೊರಟಿದೆ ಎಂದು ದೂರಿದರು.
ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಜನರ ಬದುಕು ಹಸನಾಗಲು ಸಂಘಟನೆ ಮೂಲಕ ಅನೇಕ ಹೋರಾಟ, ಕಾರ್ಯಕ್ರಮ ನಡೆಸಲಾಗಿದೆ. ರೈತ- ಕಾರ್ಮಿಕರು ಹಾಗೂ ಜನಸಾಮಾನ್ಯರ ಬದುಕಿಗೆ ಅಪಾಯ ತಂದೊಡ್ಡುತ್ತಿರುವ ಸರ್ಕಾರಗಳ ನೀತಿಗಳ ವಿರುದ್ಧ ಪ್ರಬಲ ಹೋರಾಟಕ್ಕೆ ಜನತೆ ಮುಂದಾಗಬೇಕು ಎಂದರು.
ಹಿರಿಯ ಮುಖಂಡ ಬಿ.ಐ. ಈಳಗೇರ ಧ್ವಜಾರೋಹಣ ನೆರವೇರಿಸಿದರು. ಬಿ.ಎಸ್. ಸೊಪ್ಪಿನ, ಆರ್.ಎಚ್. ಆಯಿ, ಎಂ.ಎಸ್. ಹಡಪದ, ಬಸವರಾಜ ಮಂತೂರು, ಮಾರುತಿ ಚಿಟಗಿ, ಫಯಾಜ್ ತೋಟದ, ವಿನಾಯಕ ಕುರಬರ ಇದ್ದರು.