Asianet Suvarna News Asianet Suvarna News

ಉಪ ಚುನಾವಣೆ ಬೆನ್ನಲ್ಲೇ JDS ಶಾಸಕ GTD ಬಾಂಬ್ !

ರಾಜ್ಯದಲ್ಲಿ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಬಿಜೆಪಿ ಭರ್ಜರಿ ಜಯ ಗಳಿಸಿತು. 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದು ಎರಡು ಹುಣಸೂರು ಕ್ಷೇತ್ರವು ಕೈ ತಪ್ಪಿತು. ಇದೇ ವಿಚಾರವಾಗಿ ಇದೀಗ ಮಾಜಿ ಸಚಿವ ಜಿಟಿ ದೇವೇಗೌಡ ಬಾಂಬ್ ಸಿಡಿಸಿದ್ದಾರೆ.

CP Yogeshwar Reason Behind Vishwanath Defeat in Hunsur Says GT Devegowda
Author
Bengaluru, First Published Dec 11, 2019, 11:45 AM IST

ಮೈಸೂರು [ಡಿ.11]:  ಹುಣಸೂರು ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವಿಶ್ವನಾಥ್ ಸೋಲು ಕಂಡಿದ್ದು ಇದಕ್ಕೆ ಯೋಗೀಶ್ವರ್ ಕಾರಣ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. 

ಮೈಸೂರಿನ ಜಯಪುರದಲ್ಲಿ ಮಾತನಾಡಿದ ಮಾಜಿ ಸಚಿವ ಜಿ.ಟಿ.ದೇವೇಗೌಡ ಯೋಗೀಶ್ವರ್ ಒಕ್ಕಲಿಗ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು ಎಂದರು. 

ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದ್ದರಿ. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಇತ್ತು.  5 ಕೋಟಿ ರು. ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದರು ಎಂದರು. 

ಇನ್ನು ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೀಮೀತವಾಗಿ ರಾಜಕೀಯ ಮಾಡುತ್ತೇನೆ ಎಂದ ಜಿಟಿಡಿ ಕ್ಷೇತ್ರದ ಅಭಿವೃದ್ಧಿಯೇ  ನನ್ನ ಮೊದಲ ಆದ್ಯತೆ ಎಂದರು. 

JDS ನಲ್ಲಿದ್ದು ಕೈ ಅಭ್ಯರ್ಥಿ ಗೆಲುವಿಗೆ ಸಪೋರ್ಟ್ : ಫಲಿತಾಂಶದ ಬಗ್ಗೆ ತುಟಿ ಬಿಚ್ಚದ ಶಾಸಕ.

ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ. ಸ್ಮಶಾನ, ಶಾಲೆ, ಅಂಗನವಾಡಿ, ಮಾದರಿ ವಿದ್ಯುತ್ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಟ್ಟಿದ್ದ ಯೋಜನೆಗಳು ಮುಕ್ತಾಯ ಆಗಿವೆ. ಕುಮಾರಸ್ವಾಮಿ ಸರ್ಕಾರದ ಯೋಜನೆಗಳು ಪ್ರಗತಿಯಲ್ಲಿವೆ.  ಯಡಿಯೂರಪ್ಪ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 16 ಕೋಟಿ ರು. ಅನುದಾನ ಸಿಕ್ಕಿದೆ ಎಂದು ಜಿ.ಟಿ.ದೇವೇಗೌಡದ ಹೇಳಿದರು.

ಡಿಸೆಂಬರ್ 5 ರಂದು ನಡೆದ ರಾಜ್ಯದ ಉಪ ಚುನಾವಣೆಯ ಫಲಿತಾಂಶ ಡಿಸೆಂಬರ್ 9 ರಂದು ಪ್ರಕಟವಾಗಿದ್ದು ಒಟ್ಟು 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. 

Follow Us:
Download App:
  • android
  • ios