ಸುರಪುರ: ವರಾಹಕ್ಕೆ ಹಾಲುಣಿಸಿದ ಗೋಮಾತೆ..!
ಯಾದಗಿರಿ ಜಿಲ್ಲೆಯ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಭಕ್ತರಿಗೆ ಅಚ್ಚರಿ ಮೂಡಿಸಿದ ವಿಸ್ಮಯ ಘಟನೆ
ನಾಗರಾಜ್ ನ್ಯಾಮತಿ
ಸುರಪುರ(ಆ.21): ಗೋವನ್ನು ತಾಯಿಯಾಗಿ, ಗೋಮಾತೆಯಾಗಿ ಪೂಜಿಸುವ ನಾಡಿನಲ್ಲಿ ಅಮೃತ ಸಮಾನವಾದ ಹಾಲನ್ನು ವಿಷ್ಣುವಿನ ರೂಪವಾದ ವರಾಹನಿಗೆ ಗೋಮಾತೆ ಹಾಲುಣಿಸಿದ ವಿಸ್ಮಯಕಾರಿ ಘಟನೆ ನಗರದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ನಡೆದಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.
ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ಸಂಭ್ರಮದಿಂದ ಆರಂಭವಾಗಿದ್ದು, ಪ್ರಥಮ ದಿನವೇ ವೇಣುಗೋಪಾಲ ಸ್ವಾಮಿಗೆ ವಿಶಿಷ್ಟ ಅಲಂಕಾರ, ಉಯ್ಯಾಲೆ ಸುಸಂದರ್ಭಲ್ಲಿ ಗೋಮಾತೆ ತನ್ನ ಕರುವಿನೊಂದಿಗೆ ಆವರಣದಲ್ಲಿ ಸಂಚರಿಸುತ್ತಿರುವಾಗ ದೇವರ ಬಾವಿ ಕಡೆಯಿಂದ ಬಂದ ವರಾಹ ನೋಡು ನೋಡುತ್ತಲೇ ಗೋಮಾತೆಯ ಕೆಚ್ಚಲಿಗೆ ಬಾಯಿ ಹಾಲು ಸವಿಯಲು ಆರಂಭಿಸಿತು. ಗೋಮಾತೆ ಶಾಂತ ಚಿತ್ತದಿಂದ ಕದಲದೆ ಹಾಲು ನೀಡುತ್ತಿದ್ದರೆ ಇನ್ನೊಂದರೆ ಕರು ಸುತ್ತ ತಿರುಗುತ್ತಿತ್ತು. ಗೋಮಾತೆಯ ಮಮತೆಯಲ್ಲಿ ಕರು ಮಿಂದೆದ್ದಿತು.
PSI RECRUITMENT SCAM: ನಡೆಯದ ಪಿಎಸ್‌ಐ ನೇಮಕ ಪರೀಕ್ಷೆಯಲ್ಲೂ ಅಕ್ರಮ!
ವರಾಹ ತನ್ನ ಗೋಮಾತೆಯ ಹಾಲು ಕುಡಿಯುತ್ತಿರುವುದನ್ನು ಭಕ್ತರು ನೋಡುತ್ತಿರುವಾಗ ಕರು ಅಡ್ಡಲಾಗಿ ಬಂದು ನಿಲ್ಲುತ್ತಿತ್ತು. ಭಕ್ತರು, ಪೊಲೀಸರು, ಮಹಿಳೆಯರು, ಮಕ್ಕಳು ಬೆಕ್ಕಸ ಬೆರಗಣ್ಣಿನಿಂದ ನೋಡುತ್ತಿದ್ದರು. ಭಕ್ತರು ಕೃಷ್ಣ ಜನ್ಮಾಷ್ಠಮಿಯೆಂದೇ ಇಂತಹ ಘಟನೆ ನಡೆಯುತ್ತಿರುವುದು ನೋಡಿದರೆ ರಾಜ್ಯದಲ್ಲಿ ಶುಭ ಗಳಿಗೆಯೂ ಆರಂಭವಾಗುವ ಲಕ್ಷಣಗಳಿವೆ ಎನ್ನುವ ಮಾತುಗಳು ಕೇಳಿ ಬಂದವು.
ಮಕ್ಕಳು ಸೇರಿದಂತೆ ಕೆಲವರು ಗೋಮಾತೆಯಲ್ಲಿ ವರಾಹ ಹಾಲು ಕುಡಿಯುವ ದೃಶ್ಯ ಸೆರೆ ಹಿಡಿಯುತ್ತಿದ್ದರು. ವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಮತ್ತು ವರಾಹ ರೂಪವೂ ಒಂದಾಗಿದೆ. ಗೋವು ಸೇವೆ ಮಾಡಿಕೊಂಡು ಬರುವ ಕೃಷ್ಣ 33 ಕೋಟಿ ದೇವತೆಗಳ ಜತೆಯಲ್ಲಿ ಗೋಮಾತೆಯನ್ನು ದೈವ ಸ್ವರೂಪಿದಲ್ಲಿ ನೋಡುತ್ತೇವೆ. ಶ್ರೀಕೃಷ್ಣನಿಗೆ ಗೋ ಸೇವೆ ಮಾಡಿದ್ದರಿಂದ ದೈವತ್ವ ಪಟ್ಟ ಸಿಗುತ್ತದೆ.
ಶ್ರೀಕೃಷ್ಣ ಪರಮಾತ್ಮನ ರು.33 ಕೋಟಿ ದೇವತೆಗಳ ಸೇವೆಗೆ ಪ್ರತಿಫಲವಾಗಿ ಇಂದು ಗೋಕುಲಾಷ್ಟಅಥವಾ ಕೃಷ್ಣ ಜನ್ಮಾಷ್ಠಮಿಯೆಂದು ವಿಷ್ಣುವಿನ ರೂಪವಾದ ವರಾಹಕ್ಕೆ ಗೋಮಾತೆ ಅಮೃತ ಸಮಾನವಾದ ಹಾಲುಣಿಸುವ ಮೂಲಕ ಮನುಷ್ಯನಿಗೆ ಪರೋಪಕಾರ ಮತ್ತು ಪ್ರತಿಫಲ ನೀಡುವಂತ ಮನೋಭಾವ ಕಲಿಯುಗದಲ್ಲಿ ಮುಮುಕ್ಷಗಳಿಗೆ ಈ ಘಟನೆ ಮಾದರಿಯಾಗಿದೆ. ಕಲಿಯುಗದಲ್ಲೂ ಸಹಿತ ಯಾವುದೇ ಸೇವೆಗಳಿಗೆ ಭಗವಂತನ ಸಾಕ್ಷಾತ್ಕಾರ ಅನೇಕ ವಿಸ್ಮಯಕಾರಿ ಘಟನೆಗಳ ಮೂಲಕ ದೇವರು ಪ್ರತ್ಯಕ್ಷನಾಗುತ್ತಿರುವುದು ಇದೊಂದು ನಿದರ್ಶನವಾಗಿದೆ ಎಂದು ಜಡಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ತಿಳಿಸಿದ್ದಾರೆ.
ತಾಯಿ ನೆನಪಿಗಾಗಿ 'ಅಮ್ಮ' ಆಸ್ಪತ್ರೆ ಕಟ್ಟಿಸಲು ಮುಂದಾದ ಶಾಸಕ ರಾಜೂಗೌಡ
ಪ್ರಾಣಿಗಳು ಪರೋಪಕಾರ ಗುಣದ ಮೂಲಕ ಹಾಲುಣಿಸುವಂತಹ ಈ ಪ್ರಸಂಗ ಮನುಷ್ಯ ಗೋಮಾತೆ ಮತ್ತು ವರಾಹವನ್ನು ಭಕ್ಷಿಸುವ ಬದಲು ರಕ್ಷಿಸುವಂತಹ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ದೈವಿಸ್ವರೂಪವಾದ ಗೋವು ಮತ್ತು ವರಾಹ ರಕ್ಷಣೆ ಅತ್ಯವಶ್ಯ ಎಂಬುದನ್ನು ಈ ಘಟನೆ ಸಾರುತ್ತದೆ ಅಂತ ದೇವಾಪುರ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು ತಿಳಿಸಿದ್ದಾರೆ.
ಕೃಷ್ಣಾಷ್ಟಮಿ ಹಾಗೂ ಅಷ್ಟಮಿ ರೋಹಿಣಿ ನಕ್ಷತ್ರದಲ್ಲಿ ದೇವರ ರೂಪದಲ್ಲಿ ಬಂದಿದ್ದೇನೆ. ಪ್ರಕೃತಿಯಲ್ಲಿ ವಿಶೇಷ ಘಟನೆಗಳು ಜರುಗಲಿವೆ. ದೇಶಕ್ಕೆ ಸಂಬಂಸಿದಂತೆ ಶುಭ ಸೂಚಂಕವಾಗಿದೆ ಹಾಗೂ ಅತ್ಯುತ್ತಮ ಸಂದೇಶಗಳು ಬರಲಿವೆ. ಜೋತಿಷ್ಯಾದ ಪ್ರಕಾರ ಯಾವುದೇ ಕೆಟ್ಟ ಘಟನೆಗಳು ನಡೆಯುವುದಿಲ್ಲ ಅಂತ ಸುರಪುರದ ಖ್ಯಾತಿ ಜೋತಿಷಿಗಳು ಸುಧಾಕರ ಭಟ್ ಜೋಶಿ ಹೇಳಿದ್ದಾರೆ.