ಶಿಕ್ಷಕಿ ಪದ್ಮಾಕ್ಷಿ ಸಾವಿಗೆ ವರ್ಷ: ಆರ್ಥಿಕ ನೆರವಿಗೆ ಕಾನೂನುಗಳೇ ಅಡ್ಡಿ!

  • ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಘಟನೆ ನಡೆದು ಅ.16ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ
  •  ಭರವಸೆಗಳು ಕಡತಗಳಲ್ಲೇ ಬಾಕಿಯಾಗಿ ಕುಟುಂಬವೀಗ ಆರ್ಥಿಕ ಸಂಕಷ್ಟದಲ್ಲಿದೆ
Covid Victims Teacher padmakshi family Faces Legal problems to get compensation snr

ವರದಿ :  ಗಣೇಶ್‌ ಕಾಮತ್‌

ಮೂಡುಬಿದಿರೆ (ಅ.16): ಕೋವಿಡ್‌ (Covid) ಆತಂಕದ ದಿನಗಳ ನಡುವೆ ಹೈಸ್ಕೂಲ್‌ ಶಿಕ್ಷಕಿ (High school) ವಿದ್ಯಾಗಮ ಕರ್ತವ್ಯ ನಿರ್ವಹಿಸಿ ಕೋವಿಡ್‌ಗೆ (covid) ತುತ್ತಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಘಟನೆ ನಡೆದು ಅ.16ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಮೂಡುಬಿದಿರೆಯ ಪದ್ಮಾಕ್ಷಿ (46) ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದಾಗ (Hospital) ಚಿಕಿತ್ಸೆಗೆ ಸರ್ಕಾರವೇ ಬೆನ್ನೆಲುಬಾದರೂ, ಅವರ ಮರಣ ನಂತರ ಪರಿಸ್ಥಿತಿ ಬದಲಾಯಿತು. ಭರವಸೆಗಳು ಕಡತಗಳಲ್ಲೇ ಬಾಕಿಯಾಗಿ ಕುಟುಂಬವೀಗ ಆರ್ಥಿಕ (Economic) ಸಂಕಷ್ಟದಲ್ಲಿದೆ.

ಶಿಕ್ಷಕಿಯ (Teacher) ಚಿಕಿತ್ಸಾ ವೆಚ್ಚವನ್ನೇನೋ ಕೊನೆಗೂ ಸರ್ಕಾರ ಪಾವತಿಸಿದೆ. ಆದರೆ ಕಾನೂನಿನ (Law) ಇತಿಮಿತಿಯಲ್ಲಿ ಶಿಕ್ಷಕಿಗೆ ಸೇವೆಯಲ್ಲಿದ್ದಾಗ ಮೃತಪಟ್ಟರೂ ಆರ್ಥಿಕ ನೆರವಿನ ಲಾಭ ಸಿಕ್ಕಿಲ್ಲ. ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಕೋವಿಡ್‌ ವಾರಿಯರ್ಸ್‌ (Covid warriors) ನೆಲೆಯಲ್ಲಿ ಸರ್ಕಾರದ ಪರಿಹಾರ ಧನ ಸಿಗಬೇಕಾಗಿತ್ತಾದರೂ ಶಿಕ್ಷಕರು ಈ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಅಂಶವೊಂದೇ ಪದ್ಮಾಕ್ಷಿ ಪರಿವಾರಕ್ಕೆ ದೊರೆಯಬಹುದಾಗಿದ್ದ ಆರ್ಥಿಕ ನೆರವಿಗೆ ಅಡ್ಡಿಯಾಗಿದೆ. ಮತ್ತೊಂದೆಡೆ ಶಿಕ್ಷಕ ದಂಪತಿಯ ಆದಾಯದ ಮೂಲವನ್ನು ನಂಬಿ ಮಾಡಿದ್ದ ಸಾಲದ ಹೊರೆ ಈ ಕುಟುಂಬವನ್ನು ಕಂಗಾಲಾಗಿಸಿದೆ. ಪದ್ಮಾಕ್ಷಿ ಅವರ ಪುತ್ರಿ ಐಶ್ವರ್ಯಾಳ ಉನ್ನತ ಶಿಕ್ಷಣದ ಕನಸಿಗೂ ಆರ್ಥಿಕ ತೊಂದರೆ ಕಾಡುತ್ತಿದೆ.

ರಾಜ್ಯದಲ್ಲಿ ದಾಖಲೆಯ 6 ಕೋಟಿ ಡೋಸ್‌ ಲಸಿಕೆ ನೀಡಿಕೆ

ಮಾನವೀಯ ನೆಲೆಯಲ್ಲಾದರೂ ಆಸರೆಯಾಗಿ ಧೈರ್ಯ ತುಂಬಬೇಕಾಗಿದ್ದ ಸರ್ಕಾರದ (Govt) ನಿಲುವಿಗೆ ಕಾನೂನಿನ ಅಂಶಗಳೇ ಅಡ್ಡಿಯಾಗಿರುವುದು ವಿಪರ್ಯಾಸ.

ಅಂದು ನಡೆದದ್ದೇನು?:  ಮೂಡುಬಿದಿರೆಯ ಶಶಿಕಾಂತ್‌-ಪದ್ಮಾಕ್ಷಿ ದಂಪತಿ ಇಬ್ಬರೂ ಸರ್ಕಾರಿ ಶಿಕ್ಷಕರೇ. ಕಳೆದ ವರ್ಷ ಶಿಕ್ಷಣ ಇಲಾಖೆ ವಿದ್ಯಾಗಮಕ್ಕೆ ಮುಂದಾದಾಗ ಡ್ಯೂಟಿಗೆ ತೆರಳಿದ್ದರು. ಪದ್ಮಾಕ್ಷಿ ಅವರಿಗೆ ಕೋವಿಡ್‌ ಸೋಂಕು (Covid ) ತಗಲಿ ಆಸ್ಪತ್ರೆಗೆ ದಾಖಲಾದರು. ಪರಿಸ್ಥಿತಿ ಗಂಭೀರವಾಗುವ ಹೊತ್ತಿಗೆ ಪತಿ ಶಶಿಕಾಂತ್‌, ಪುತ್ರ ಅನಯ್‌ ಇಬ್ಬರೂ ಸೋಂಕಿತರಾದರು. ಪದ್ಮಾಕ್ಷಿ ಪರಿಸ್ಥಿತಿ ಗಂಭೀರವಾದಾಗ ಪುತ್ರಿ ಐಶ್ವರ್ಯ ಸಾಮಾಜಿಕ ಜಾಲ ತಾಣದಲ್ಲೂ ಕಷ್ಟಹಂಚಿಕೊಂಡರು. ‘ಕನ್ನಡಪ್ರಭ’ದ (Kannada Prabha) ವಿಶೇಷ ವರದಿ ಮೂಲಕ ಸರ್ಕಾರದ ಮುಂದೆ ತನ್ನ ಗಂಭೀರ ಅಳಲು ತೋಡಿಕೊಂಡಿದ್ದರು. ಕೊನೆಗೂ ಸರ್ಕಾರವೇ ಶಿಕ್ಷಕಿಯ ಚಿಕಿತ್ಸೆ, ನೆರವಿಗೆ ಧಾವಿಸಿತ್ತು. 18 ದಿನಗಳ ಜೀವನ್ಮರಣ ಹೋರಾಟದಲ್ಲಿ ಪದ್ಮಾಕ್ಷಿ ಮರಳಿ ಬರಲೇ ಇಲ್ಲ.

ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ದಿನಾಂಕ ವಿಸ್ತರಣೆ

ಚಿಕಿತ್ಸೆಯ (Treatment) ವೆಚ್ಚ ಪೂರ್ಣ ಭರಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ದಿನಗಳು ಕಳೆದಂತೆ ಕಡತವೂ ಮುಚ್ಚಿಕೊಂಡಿತು. ಶಿಕ್ಷಕಿಯ ಪತಿ, ಪುತ್ರಿ ತನ್ನವರನ್ನು ಕಳಕೊಂಡ ನೋವು ನುಂಗಿ ಜನ ಪ್ರತಿನಿಧಿಗಳ ಮೂಲಕ ಕಡತವನ್ನು ಬೆನ್ನಟ್ಟಿಕೊನೆಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವರಿಕೆ ಮಾಡಿದ್ದರು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಕೊನೆಗೂ ಆಸ್ಪತ್ರೆಯ ಪೂರ್ಣ ಚಿಕಿತ್ಸಾ ವೆಚ್ಚ ಪಾವತಿಯಾಗಿದೆ.

ಶಿಕ್ಷಕಿ ವಾರಿಯರ್‌ ಅಲ್ಲ?: ಕೋವಿಡ್‌ (Covid) ಕರ್ತವ್ಯದಲ್ಲಿರುವಾಗ ಮೃತಪಟ್ಟಸರ್ಕಾರಿ ನೌಕರರಿಗೆ ಕೋವಿಡ್‌ ವಾರಿಯರ್ಸ್‌ ನೆಲೆಯಲ್ಲಿ ಸರ್ಕಾರ 30 ಲಕ್ಷ ರು. ನೆರವು ಘೋಷಿಸಿದೆ. ಆದರೆ ವಿದ್ಯಾಗಮದ ಡ್ಯೂಟಿಯಲ್ಲಿದ್ದಾಗ ಕೋವಿಡ್‌ಗೆ ಬಲಿಯಾದ ಶಿಕ್ಷಕಿ ಪದ್ಮಾಕ್ಷಿ ಅವರನ್ನು ಕೋವಿಡ್‌ ವಾರಿಯರ್ಸ್‌ ಎನ್ನಲು ಕಾನೂನು ಅಡ್ಡಿಯಾಗಿದೆ. ಅವರು ಪಾಠ ಮಾಡಿದ್ದಾರೆ, ಆದರೆ ಅದು ಕೋವಿಡ್‌ ನಿಯೋಜಿತ ಡ್ಯೂಟಿಯಲ್ಲ ಎನ್ನುವುದು ಪದ್ಮಾಕ್ಷಿ ಕುಟುಂಬಕ್ಕೆ ದೊರೆಯಬೇಕಾಗಿದ್ದ ಆರ್ಥಿಕ ನೆರವಿಗೂ ಅಡ್ಡಿಯಾಗಿದೆ.

ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ, ವಿದ್ಯಾಗಮದಿಂದ ಶಿಕ್ಷಕ ದಂಪತಿಗೆ ಸೋಂಕು!

ಪಿಂಚಣಿ, ಗ್ರಾಚ್ಯುವಿಟಿಯೂ ಇಲ್ಲ!: ಈ ದಂಪತಿ 9 ವರ್ಷಗಳ ಹಿಂದೆ ಹೊಸ ಮನೆ, ವರ್ಷದ ಹಿಂದಷ್ಟೇ ಸಾಲ ಮಾಡಿ ಕಾರ್‌ ಖರೀದಿಸಿದ್ದರು. ಆದಾಯದ ಮೂಲ ಸೊರಗಿ ಸಾಲದ ಕಂತು ಹಿಗ್ಗಿದೆ. ಅನುದಾನಿತ ಶಾಲಾ ಶಿಕ್ಷಕಿಯಾಗಿದ್ದು 2006ರ ನೂತನ ಪಿಂಚಣಿ (Pension) ಯೋಜನೆಯ ವ್ಯಾಪ್ತಿಗೆ ಬರುವ ಕಾರಣಕ್ಕೆ ಪದ್ಮಾಕ್ಷಿ ನಿಧನದ ಬಳಿಕ ಉಳಿದ ಸೇವಾವಧಿ ಪರಿಗಣಿಸಿ ಪಿಂಚಣಿ, ಗ್ರಾಚ್ಯುವಿಟಿಯ ಯಾವ ಲಾಭವೂ ಸಿಕ್ಕಿಲ್ಲ. ಅನುಕಂಪದಲ್ಲಿ ಪುತ್ರಿಗೆ ಕ್ಲರ್ಕ್ ಹುದ್ದೆಗೆ ಅವಕಾಶವಿದ್ದರೂ ಆಕೆಯ ಉನ್ನತ ಶಿಕ್ಷಣದ ಕನಸು ಇದಕ್ಕೆ ಅಡ್ಡಿಯಾಗಿದೆ. ಜರ್ಮನಿಯಲ್ಲಿ ಎಂ.ಎಸ್‌. ಶಿಕ್ಷಣ (MS Education) ಪಡೆಯುವ ಪುತ್ರಿ ಐಶ್ವರ್ಯ ಕನಸಿಗೆ ಅಮ್ಮನಿಲ್ಲದ ಆಘಾತ, ಆರ್ಥಿಕ ಸಂಕಷ್ಟದ (Economic) ಅಡ್ಡಿಯೂ ಇದೆ. ಮತ್ತೆ ಸಾಲ ಮಾಡಿ ಓದಬೇಕಾದ ಅನಿವಾರ್ಯತೆಯಿದೆ.

ನಿಲ್ಲದ ಹೋರಾಟ: ಹೆತ್ತ ತಾಯಿಯ ಪ್ರಾಣ ಸಂಕಟದಲ್ಲಿದ್ದಾಗ ಸ್ಪಂದಿಸಿದ ಸರ್ಕಾರದ ಬಗ್ಗೆ ಪುತ್ರಿ ಐಶ್ವರ್ಯ ಅವರಲ್ಲಿ ಕೃತಜ್ಞತಾ ಭಾವವಿದೆ. ಆದರೆ ಜೀವದ ಹಂಗು ತೊರೆದು ವಿದ್ಯಾಗಮ ಕರ್ತವ್ಯ ನಿರ್ವಹಿಸಿದರೂ ಅವರು ಕೋವಿಡ್‌ ವಾರಿಯರ್ಸ್‌ ಪರಿಹಾರಕ್ಕೆ ಅರ್ಹರಲ್ಲ ಎನ್ನುವುದನ್ನು ಆಕೆ ಒಪ್ಪಲು ತಯಾರಿಲ್ಲ. ಈ ಬಗ್ಗೆ ಆಕೆ ಈಗಾಗಲೇ ಮನವಿಯ ಮೂಲಕ ರಾಷ್ಟ್ರಪತಿ ಭವನ, ಕೇಂದ್ರ ಸಚಿವಾಲಯದ ಜತೆಗೆ ಮತ್ತೆ ರಾಜ್ಯಸರ್ಕಾರದ ಕದ ತಟ್ಟಿದ್ದಾಳೆ. ರಾಷ್ಟ್ರಪತಿ ಭವನದಿಂದ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಸೂಚನೆ ರವಾನೆಯಾಗಿದೆ.

ಸರ್ಕಾರ ಸಂಕಷ್ಟದಲ್ಲಿ ನಮಗೆ ನೆರವಾಗಿದಕ್ಕೆ ನಾವು ಋುಣಿಯಾಗಿದ್ದೇವೆ. ಆದರೆ ಇಂತಹ ಪ್ರಕರಣದಲ್ಲಿ ನಂತರವೂ ಅಗತ್ಯ ಸ್ಪಂದಿಸಬೇಕು. ರಾಜ್ಯದಲ್ಲಿ ಶಿಕ್ಷಕರನ್ನೂ ಫ್ರಂಟ್‌ ಲೈನ್‌ ವಾರಿಯರ್ಸ್‌ ಎಂದು ಗುರುತಿಸಲೇಬೇಕು.

-ಐಶ್ವರ್ಯ ಜೈನ್‌, ಪದ್ಮಾಕ್ಷಿ ಪುತ್ರಿ.

ಇಂತಹ ದುರ್ಘಟನೆ ಯಾರ ಜೀವನದಲ್ಲೂ ಬರಬಾರದು. ಯಾರು ಮರೆತರೂ ನಮಗೆ ಮರೆಯಲಾಗದ್ದು. ನಮ್ಮ ಸಂಕಷ್ಟಅರ್ಥ ಮಾಡಿಕೊಂಡಾಗ ಮಾನವೀಯ ಸ್ಪಂದನ ಮುಖ್ಯವೆನಿಸುತ್ತದೆ.

- ಶಶಿಕಾಂತ್‌ ವೈ, ಪದ್ಮಾಕ್ಷಿ ಅವರ ಪತಿ

Latest Videos
Follow Us:
Download App:
  • android
  • ios