ಶ್ರೀರಂಗಪಟ್ಟಣ (ಏ.27): ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯ ಆವರಣದಲ್ಲೇ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

 ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಪೇಟೆ ಬೀದಿ ನಿವಾಸಿ ಜಯಕುಮಾರ್‌(48) ಆತ್ಮಹತ್ಯೆಗೆ ಶರಣಾದವರು. ಅವರಿಗೆ ಏ.21ರಂದು ಕೋವಿಡ್‌ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಗಣಂಗೂರು ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೋನಾ ಸೋಂಕಿನಿಂದ ಪೊಲೀಸ್ ಅಧಿಕಾರಿ ಸಾವು

 ಮತ್ತೆ ಜ್ವರ ತೀವ್ರಗೊಂಡು ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಏ.25ರ ಭಾನುವಾರ ಬೆಳಗ್ಗೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿತ್ತು. ಸೋಮವಾರ ಮುಂಜಾನೆ 4ರ ವೇಳೆ ಆಸ್ಪತ್ರೆ ಆವರಣದ ಮರವೊಂದಕ್ಕೆ ಜಯಕುಮಾರ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀರಂಗಪಟ್ಟಣ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಕೋವಿಡ್ ಸೋಂಕಿತರ ಗಮನಕ್ಕೆ