ದಸರೆಯ ಆನೆಗಳಿಗೂ ಕೊರೋನಾ ಟೆಸ್ಟ್ : ಅಂಬಾರಿ ಹೊರುವುದು ಯಾರು..?
ಮುಂಜಾಗೃತಾ ಕ್ರಮವಾಗಿ ಮೈಸೂರು ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೂ ಕೊರೋನಾ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.
ಮೈಸೂರು (ಸೆ.11): ವಿಶ್ವವಿಖ್ಯಾತ ವಿಖ್ಯಾತ ದಸರಾ ಮಹೋತ್ಸವ 2020ರ ತಯಾರಿ ಈಗಾಗಲೇ ನಡೆಯುತ್ತಿದ್ದು, ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೋನಾ ಟೆಸ್ಟ್ ಮಾಡುವ ಸಾಧ್ಯತೆ ಇದೆ.
ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಲಾಗುವುದು ಎಂದು ಡಿಸಿಎಫ್ ( ಉಪ ಅರಣ್ಯ ಸಂರಕ್ಷಣಾಧಿಕಾರಿ ) ಎಂ ಸಿ ಅಲೆಗ್ಸಾಂಡರ್ ಹೇಳಿದ್ದಾರೆ.
ಈ ಬಗ್ಗೆ ತಜ್ಜರ ಸಲಹೆಗಾಗಿ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹಿಂದೆ ವಿದೇಶದ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆ ದಸರಾ ಆನೆಗಳಿಗೂ ಮುಂಜಾಗೃತ ಕ್ರಮವಾಗಿ ಕೊರೋನಾ ಟೆಸ್ಟ್ ಮಾಡುವ ಸಾಧ್ಯತೆ ಇದೆ.
ಈ ಬಾರಿ ಮೈಸೂರು ದಸರಾದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿವೆ ಸಭೆಯ ತೀರ್ಮಾನಗಳು
ಅರಮನೆಗೆ ಬಂದ ನಂತತ ಪರೀಕ್ಷೆ ಮಾಡಿಸಬೇಕಾ , ಅಥವಾ ಮೊದಲೇ ಪರೀಕ್ಷೆ ಮಾಡಿಸಬೇಕಾ ಈ ಬಗ್ಗೆ ತಜ್ಞರ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಮದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಸಿ ಅಲೆಗ್ಸಾಂಡರ್ ಸ್ಪಷ್ಟನೆ ನೀಡಿದ್ದಾರೆ.
ಅಂಬಾರಿ ಹೊರುವುದು ಯಾರು?
ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರುವುದು ಬಹುತೇಕ ಖಚಿತವಾದಂತಾಗಿದೆ. ಸರ್ಕಾರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಅಭಿಮನ್ಯು ಹೆಸರನ್ನು ಅರಣ್ಯ ಇಲಾಖೆ ಸೂಚಿಸಿದೆ.
ನಾವು ಕಾನೂನು ಪಾಲಿಸಬೇಕು ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಸಿ ಅಲೆಗ್ಸಾಂಡರ್ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ಕೊನೆ ಕ್ಷಣದಲ್ಲಿ ಬದಲಾವಣೆ ಆಗಬಹುದು. ಅಂಬಾರಿ ಹೊರಲು ಆನೆಯ ಅವಶ್ಯಕತೆ ಇದೆ
ಅರ್ಜುನ ಆನೆಯೇ ಆಗಬೇಕು ಎಂದಿಲ್ಲ. ಸರ್ಕಾರದ ನಿರ್ಧಾರ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.