ಹಾಸನ(ಏ.14): ಕೊರೋನಾ ಮಹಾಮಾರಿಯ ಕರಾಳ ಮುಖ ದರ್ಶನದಿಂದ ಈಗಾಗಲೇ ಜನಜೀವನ ಅಸ್ತವಸ್ಥಗೊಂಡಿರುವುದು ಅಲ್ಲದೇ, ಪೂರ್ವ ನಿಗದಿತ ಸಭೆ ಸಮಾರಂಭಗಳು ಹಾಗೂ ಮಂಗಲ ಕಾರ‍್ಯಕ್ರಮಗಳ ಮೇಲೂ ಕರಿ ನೆರಳು ಆವರಿಸಿದೆ.

ಮಂಗಳವಾದ್ಯ ಸಮೇತ ಮಂತ್ರೋಪದೇಶದೊಂದಿಗೆ ಬಂಧು- ಬಾಂಧವರು ಸಡಗರ ಸಂಭ್ರಮದಿಂದ ನಡೆಯಬೇಕಾದ ವಿವಾಹ ಮಹೋತ್ಸವದ ಸಮಾರಂಭಗಳು ಸಹ ಕೊರೋನಾ ಎಂಬ ಮಹಾಮಾರಿಯ ವಕ್ರ ದೃಷ್ಟಿಯಿಂದ ಕಳೆಗುಂದುವಂತಾಗಿದೆ.

ಮದ್ಯಪ್ರಿಯರಿಗೆ ಸಿಗುತ್ತಾ ಸಿಹಿಸುದ್ದಿ: ಮಾರಾಟಕ್ಕೆ ತಯಾರಿ...?

ಈ ಪೈಕಿ ಗುರು ಹಿರಿಯರು, ಬಂಧು ಬಾಂಧವರು, ನೆರೆಹೊರೆಯವರ ಸಮ್ಮುಖದಲ್ಲಿ ಗೃಹಶ್ರಮ ಪ್ರವೇಶಿಸುವ ಕನಸು ಕಂಡಿದ್ದ ನಗರದ ವಾಸಿ ಎಲೆ ಜಯಣ್ಣ ಅವರ ಪುತ್ರಿ ದೀಪಾ (ರೋಹಿಣಿ) ಕಡೂರಿನ ದ್ರಾಕ್ಷಾಯಿಣಿ ಶಿವಕುಮಾರ ಅವರ ಪುತ್ರ ವಿನಯ್‌ ಅವರನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಅರಸೀಕೆರೆಯಲ್ಲಿ ನಿಮಿಷದಲ್ಲಿ ನಡೆದ ಈ ಅಪರೂಪದ ಸರಳ ವಿವಾಹ ಮಹೋತ್ಸವಕ್ಕೆ ಕೇವಲ ವಧು ಮತ್ತು ವರನ ಕುಟುಂಬ ಸದಸ್ಯರಷ್ಟೇ ಸಾಕ್ಷಿಯಾದರು.