ಸಂಗಮ ಗ್ರಾಮದ ಹತ್ತಿರದ ಮಾಂಜ್ರಾ ನದಿಯಲ್ಲಿ ಬಿದ್ದು ದಂಪತಿ ಸಾವು ಮಹಾರಾಷ್ಟ್ರದ ಉದಗೀರ ಪಟ್ಟಣದ ದಂಪತಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ನದಿಯೊಳಗೆ ಬಿದ್ದು ಸಾವು

ಬೀದರ್ (ಜು.06):  ಕಮಲನಗರ ತಾಲೂಕಿನ ಸಂಗಮ ಗ್ರಾಮದ ಹತ್ತಿರದ ಮಾಂಜ್ರಾ ನದಿಯ ಹತ್ತಿರ ಮಹಾರಾಷ್ಟ್ರದ ಉದಗೀರ ಪಟ್ಟಣದ ದಂಪತಿಗಳು ಸ್ನಾನ ಮಾಡಲು ಹೋಗಿ ಕಾಲು ಜಾರಿ ನದಿಯೊಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಸುಕಿನ ಜಾವ ಜರುಗಿದೆ.

ಮೃತರು ಮೂಲತಃ ಮಹಾರಾಷ್ಟ್ರದ ಉದಗೀರ ಪಟ್ಟಣದ ದಂಪತಿಗಳಾದ ಚಂದ್ರಕಾಂತ ಅಮೃತಪ್ಪ (55), ಪತ್ನಿ ರಾಜೇಶ್ವರಿ ಚಂದ್ರಕಾಂತ(50) ಎಂದು ಗುರುತಿಸಲಾಗಿದ್ದು, ಮಾಂಜ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪೂಜೆ ಮಾಡಿಕೊಂಡು ಬರುವುದಾಗಿ ವಾಹನ ಚಾಲಕನಿಗೆ ಹೇಳಿ ನದಿಯ ಹತ್ತಿರ ಸ್ನಾನ ಮಾಡಲು ಹೋಗಿದ್ದರು.

ಸಾವಿನಲ್ಲೂ ಒಂದಾದ ಅವಳಿ ಸಹೋದರಿಯರು! ..

ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲದಿಂದ ತಿಳಿದು ಬಂದಿದೆ. ಮೃತರಿಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಕ್ಕಳು ಇದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಠಾಣಾಕುಶನೂರ ಪೊಲೀಸ್‌ ಠಾಣೆಯ ಪಿಎಸ್‌ಐ ರೇಣುಕಾ, ಎಎಸ್‌ಐ ಚಂದ್ರಕಾಂತ, ಪಿ.ಸಿ ವಿಜಯಕುಮಾರ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಪುತ್ರನ ದೂರಿನ ಮೇರೆಗೆ ಠಾಣಾಕುಶನೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.