Asianet Suvarna News Asianet Suvarna News

ಸಾಲಕ್ಕೆ ಹೆದರಿ ಇಬ್ಬರು ಮಕ್ಕಳ ಕೆರೆ​ಗೆ ಎಸೆದ ದಂಪತಿ: ಸಾಯಲು ಅಂಜಿ ಬದು​ಕು​ಳಿದ ತಂದೆ-ತಾಯಿ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ದಂಪತಿ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ನಡೆದ ಘಟನೆ| ಮಕ್ಕಳನ್ನು ಕೆರೆಗೆ ಎಸೆದ ದಂಪತಿ, ಮಕ್ಕಳು ಸಾವು| ಕೆರೆಗೆ ಹಾರಲು ಮನಸ್ಸು ಬರದೇ ಜೀವಕ್ಕೆ ಅಂಜಿ ಇಬ್ಬರು ಬದುಕುಳಿದ ದಂಪತಿ|

Couple Attempt to Suicide in Kudligi in Ballari District
Author
Bengaluru, First Published Aug 13, 2020, 1:33 PM IST

ಕೂಡ್ಲಿಗಿ(ಆ.13): ಸಾಲಕ್ಕೆ ಹೆದರಿ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ದಂಪತಿ ಮಕ್ಕಳನ್ನು ಕೆರೆಗೆ ಎಸೆದ ಮೇಲೆ ಮಕ್ಕಳು ಮೃತಪಟ್ಟಿದ್ದು, ಅದೃಷ್ಟವಶಾತ್‌ ದಂಪತಿ ಬದುಕುಳಿದಿರುವ ದಾರುಣ ಘಟನೆ ತಾಲೂಕಿನ ರಾಮದುರ್ಗ ಕೆರೆಯಲ್ಲಿ ಬುಧವಾರ ನಡೆದಿದೆ.

3 ವರ್ಷದ ಹೆಣ್ಣು ಮಗು ಖುಷಿ ಹಾಗೂ 1 ವರ್ಷದ ಗಂಡು ಮಗುವನ್ನು ಹೆತ್ತ ತಂದೆ ತಾಯಿಗಳೇ ಕೆರೆಯ ನೀರಿಗೆ ಹಾಕಿದ್ದು, ನಂತರ ದಂಪತಿ ಕೆರೆಗೆ ಹಾರಲು ಮನಸ್ಸು ಬರದೇ ಜೀವಕ್ಕೆ ಅಂಜಿ ಇಬ್ಬರು ಬದುಕುಳಿದಿದ್ದಾರೆ. ನಂತರ ಇಬ್ಬರು ಕಂದಮ್ಮಗಳಲ್ಲಿ ಒಂದು ವರ್ಷದ ಮಗು ಚಿರು ಶವ ಮಾತ್ರ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹರಸಾಹಸ ಮಾಡಿ ಕೆರೆಯಿಂದ ಹೊರತೆಗೆದಿದ್ದಾರೆ. ಬಾಲಕಿ ಶವ ಇನ್ನೂ ದೊರಕಿಲ್ಲ.

ಸಚಿವ ಶ್ರೀರಾಮುಲು ತಾಯಿ, ಸೋದರನಿಗೂ ಕೊರೋನಾ ಪಾಸಿಟಿವ್‌

ಮಕ್ಕಳನ್ನು ನೀರಿಗೆ ಎಸೆಯಲು ಮುಂದಾಗಿದ್ದು ಏಕೆ?

ಚಿರಂಜೀವಿ ಎನ್ನುವ ಯುವಕ ಕೊಟ್ಟೂರು ತಾಲೂಕು ಮಲ್ಲನಾಯಕನಹಳ್ಳಿ ನಿವಾಸಿ. ಕೂಡ್ಲಿಗಿ ತಾಲೂಕು ಚಂದ್ರಶೇಖರಪುರದ ನಂದಿನಿಯೊಂದಿಗೆ ಮದುವೆಯಾಗಿದ್ದು, ಚಂದ್ರಶೇಖರಪುರದಲ್ಲಿಯೇ ವಾಸಿಸುತ್ತಿದ್ದನು. ಇವರಿಗೆ ಇಬ್ಬರು ಚಿಕ್ಕಮಕ್ಕಳಿದ್ದರು. ಅಲ್ಲಲ್ಲಿ ಸಾಲ ಮಾಡಿದ್ದರಿಂದ ಸಾಲಕ್ಕೆ ಅಂಜಿ ಹೆಂಡತಿ ಹಾಗೂ ಚಿಕ್ಕ ಕಂದಮ್ಮಗಳನ್ನು ಮಂಗಳವಾರ ರಾತ್ರಿ ಬೈಕ್‌ನಲ್ಲಿ ಇತ್ತೀಚೆಗೆ ತುಂಬಿದ್ದ ರಾಮದುರ್ಗ ಕೆರೆಗೆ ಕರೆದುಕೊಂಡ ಬಂದಿದ್ದು, ಕೆರೆಯ ಹತ್ತಿರ ಹೆಂಡತಿಗೆ ಸಾಲದ ವಿಷಯ ತಿಳಿಸಿ ಎಲ್ಲರೂ ಸಾಯೋಣ ಎಂದು ತಿಳಿಸಿದ್ದಾನೆ. ಆಗ ಮೊದಲು ಮಕ್ಕಳನ್ನು ಎಸೆದಿದ್ದಾನೆ. ನಂತರ ಇಬ್ಬರು ಸಾಯೋಣ ಎಂದು ಹೆಂಡತಿಗೆ ಹೇಳಿದ್ದಾನೆ. 

ಆಗ ಹೆಂಡತಿ ನಂದಿನಿ ಸಾಯಲು ಒಪ್ಪಿಲ್ಲ. ಹೀಗಾಗಿ ಗಂಡ ಚಿರಂಜೀವಿ ಹೆಂಡತಿಯನ್ನು ಅಲ್ಲಿಯೇ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ನಂತರ ನಂದಿನಿ ಮನೆಗೆ ಬಂದು ತಾಯಿ ಹನುಮಕ್ಕಗೆ ಸುದ್ದಿ ತಿಳಿಸಿದ್ದಾಳೆ. ನಂತರ ಹನುಮಕ್ಕ ತಾಲೂಕಿನ ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದಾಗ ಪೊಲೀಸರು ಮಕ್ಕಳ ಶವವನ್ನು ಬುಧವಾರ ಶೋಧಿಸಲು ಮುಂದಾಗಿದ್ದಾರೆ. ಬುಧವಾರ ಸಂಜೆಯ ವೇಳೆಗೆ 3 ವರ್ಷದ ಹೆಣ್ಣುಮಗು ಖುಷಿಯ ಶವ ದೊರಕಿದೆ. 1 ವರ್ಷದ ಮಗು ಚಿರು ಶವ ಇನ್ನೂ ಪತ್ತೆಯಾಗಿಲ್ಲ. ಸ್ಥಳದಲ್ಲಿ ಕೂಡ್ಲಿಗಿ ಡಿವೈಎಸ್‌ಪಿ ಶಿವಕುಮಾರ್‌, ಕೂಡ್ಲಿಗಿ ಸಿಪಿಐ ಪಂಪನಗೌಡ, ಗುಡೇಕೋಟೆ ಪಿಎಸ್‌ಐ ಕಬ್ಬೇರು ರಾಮಪ್ಪ ಹಾಜರಿದ್ದರು.
 

Follow Us:
Download App:
  • android
  • ios