ಗಂಗಾವತಿ ವ್ಯಕ್ತಿಗೆ ಕೊರೋನಾ ಸೋಂಕು, ಬೆಚ್ಚಿ ಬಿದ್ದ ಜನತೆ

ಮಾಸ್ಕ್ ಧರಿಸುವುದಕ್ಕೂ ಹಿಂದೇಟು, ಇನ್ನು ಬುದ್ದಿ ಕಲಿಯದ ಜನತೆ| ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಕೊವೀಡ್ ಸೋಂಕು| ಕಳೆದ ದಿನ ಒಂದೇ ದಿನದಲ್ಲಿ 6 ಜನರಿಗೆ ಸೋಂಕು ಪತ್ತೆ| ಗಂಗಾವತಿ ನಗರ ಸೇರಿದಂತೆ ತಾಲೂಕಿನ ಡಣಾಪುರ ಗ್ರಾಮದಲ್ಲಿ ಸೋಂಕು ಕಂಡು ಬಂದಿದ್ದು, ಜನರಲ್ಲಿ ಹೆಚ್ಚಿದ ಆತಂಕ|

Coronavirus Positive Case in Gangavati in Koppal District

ರಾಮಮೂರ್ತಿ ನವಲಿ

ಗಂಗಾವತಿ(ಜೂ.11): ಕಳೆದ ಮೂರು ತಿಂಗಳಿನಿಂದ ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಆಗಿ ಈಗ ಸಡಿಲಗೊಳ್ಳುತ್ತಿದ್ದಂತಯೇ ನಗರದಲ್ಲಿ ವ್ಯಕ್ತಿಗೆ ಕೋವೀಡ್ ಸೊಂಕು ಪತ್ತೆಯಾಗಿದ್ದರಿಂದ ಜನತೆಯಲ್ಲಿ ಭಯ ಭೀತಿ ಉಂಟಾಗಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಕೊವೀಡ್ ಸೊಂಕು ಕಂಡು ಬಂದಿದ್ದು, ಕಳೆದ ದಿನ ಒಂದೆ ದಿನದಲ್ಲಿ 6 ಜನರಿಗೆ ಸೊಂಕು ಪತ್ತೆಯಾಗಿದೆ. ಗಂಗಾವತಿ ನಗರ ಸೇರಿದಂತೆ ತಾಲೂಕಿನ ಡಣಾಪುರ ಗ್ರಾಮದಲ್ಲಿ ಸೊಂಕು ಕಂಡು ಬಂದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಜನ ಸಂದಣಿಯ ನಗರ ಎನಿಸಿಕೊಂಡಿರುವ ಗಂಗಾವತಿ ನಗರದಲ್ಲಿ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಬಹಳಷ್ಟು ಬಿಗಿ ಭದ್ರತೆ ನೀಡಲಾಗಿತ್ತು. ಅಲ್ಲದೆ ಜನರು ಸಹ ಎಚ್ಚೆತ್ತು ಕೊಂಡಿದ್ದರು. ಈಗ ಹೊಟೆಲ್ ಸೇರಿದಂತೆ ಅಂಗಡಿಗಳು, ಬಟ್ಟೆ ಅಂಗಡಿಗಳು ವಾಹನಗಳ ಸಂಚಾರ, ಬಾರ್‌ ಮದ್ಯದ ಅಂಗಡಿಗಳು ರಾಜರೋಷವಾಗಿ ಪ್ರಾರಂಭವಾಗಿದ್ದರಿಂದ ಕೊರೋನಾ ಸೊಂಕು ಹರುಡುವ ಸಾದ್ಯತೆ ಹೆಚ್ಚಾಯಿತು. ಬೆಂಗಳೂರಿನಿಂದ ಗಂಗಾವತಿ ನಗರಕ್ಕೆ ಬೆಚ್ಚೆ ಮಾರಲು ಬಂದಿದ್ದ ವ್ಯಕ್ತಿಗೆ ಸೊಂಕು ತಗಲಿದ್ದರಿಂದ ಆ ವ್ಯಕ್ತಿ ಎಲ್ಲೆಲ್ಲಿ ಬಟ್ಟೆ ಮಾರಾಟ ಮಾಡಿದ್ದಾರೆಂಬ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುವದಕ್ಕೆ ಮುಂದಾಗಿದ್ದಾರೆ.  ಈಗ ಸೊಂಕು ಹರಿಡದ ವ್ಯಕ್ತಿಯ ಬಾಡಿಗೆ ಹಿಡಿದಿರುವ ಮನೆಯ ಸುತ್ತಮುತ್ತಲು ಸೀಲ್ ಡೌನ್ ಮಾಡಲಾಗಿದೆ.

ಕೊಪ್ಪಳ: ಪಾಸಿಟಿವ್‌ ಕೇಸ್‌ ಈಗ ನೆಗೆಟಿವ್‌, ಐದೇ ದಿನದಲ್ಲಿ ಗುಣಮುಖನಾಗಿದ್ದು ಹೇಗೆ..?

ಮಾಸ್ಕ್ ಧರಿಸುವುದಕ್ಕೂ ಹಿಂದೇಟು

ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ನಗರದಲ್ಲಿ ಬಹಳಷ್ಟು ಜನರು ಮಾಸ್ಕ್ ಧರಿಸಿ ಸಂಚಾರ ಮಾಡುತ್ತಿದ್ದರು. ಅಲ್ಲದೆ ಅಂಗಡಿ ಮುಗ್ಗಟ್ಟುಗಳಲ್ಲಿಯು ಗ್ರಾಹಕರು ಬಂದರೆ ಸೈನಿಟೇಜರ್ ನೀಡಿ ಬರ ಮಾಡಿಕೊಳ್ಳುತ್ತಿದ್ದರು. ಈಗ ಮಾಸ್ಕ್ ಗಳು ಇಲ್ಲ ಸೈನಿಟೇಜರ್ ಇಲ್ಲದೆ ಸಂಚಾರ ಮಾಡುತ್ತಿದ್ದರಿಂದ ಸೊಂಕು ಹರುಡವ ಸಂಭವ ಹೆಚ್ಚಾಗಿದೆ. ಈ ಹಿಂದೆ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ದಂಡ ಹಾಕುತ್ದಿದ್ದರು. ಈಗ ದಂಡನು ಇಲ್ಲದಂತಾಗಿದೆ. 
 

Latest Videos
Follow Us:
Download App:
  • android
  • ios