ಕೆ.ಆರ್‌ .ಪೇಟೆ(ಆ.17) : ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕ್ರೀಡಾಂಗಣದಲ್ಲಿ 74ನೇ ಸ್ವಾತ್ಯಂತ್ರ್ಯ ದಿನಾಚರಣೆ ಅಂಗವಾಗಿ ತಹಸೀಲ್ದಾರ್‌ ಎಂ.ಶಿವಮೂರ್ತಿ ಧ್ವಜಾರೋಹಣ ನೆರವೇರಿಸಿದರು.

ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಶಿವಮೂರ್ತಿ, ಕೊರೋನಾ ಮಹಾಮಾರಿ ಇಂದು ಜಗತ್ತನು ಆವರಿಸಿ ಜನ ಭೀತಿಯಿಂದ ಬದುಕುವಂತೆ ಮಾಡಿದೆ. ಇಂದು ಕೊರೋನಾ ಭೀತಿಯಿಂದ ನಾವು ಹೇಗೆ ಬದುಕುತ್ತಿದ್ದೇವೆಯೂ ಅದೇ ರೀತಿ ಸುಮಾರು 250 ವರ್ಷಗಳ ಕಾಲ ನಮ್ಮ ದೇಶದ ಜನ ಬ್ರಿಟೀಷರ ದಬ್ಬಾಳಿಕೆಗೆ ಸಿಲುಕಿ ಭಯದಿಂದ ಬದುಕುತ್ತಿದ್ದರು. ಆಧುನಿಕ ಜಗತ್ತಿನಲ್ಲಿ ನಾವು ತಲೆಯೆತ್ತಿ ನಿಲ್ಲುವಷ್ಠರಲ್ಲಿ ಕೊರೋನಾ ಮಾರಿ ನಮ್ಮ ಬದುಕನ್ನು ಸಂಕಷ್ಠಕ್ಕೆ ಸಿಲುಕಿಸಿದೆ ಎಂದರು.

ಕೊರೋನಾ ಎಫೆಕ್ಟ್: ಟ್ರಾವೆಲ್ಸ್‌ ಉದ್ಯಮ ತತ್ತರ, ಬಿಸಿನೆಸ್‌ ಇಲ್ಲದೇ ಭಾರೀ ನಷ್ಟ...

ಕೋರೋನಾಕ್ಕೆ ನಾವು ಹೆದರುವ ಅಗತ್ಯವಿಲ್ಲ. ಬದಲಾಗಿ ನಮ್ಮ ಜೀವನ ಶೈಲಿಯನ್ನು ಬದಲಿಕೊಂಡು ಕೋರೋನಾ ಜೊತೆಯಲ್ಲಿಯೇ ಬದುಕುವ

ಕಲೆಯನ್ನು ರೂಢಿಸಿಕೊಳ್ಳಬೇಕು ಎಂದರು ಕರೆ ನೀಡಿದರು. ತಾಲೂಕು ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದ ಪತ್ರಕರ್ತರು ಮತ್ತು ಸಹಾಯ ಹಸ್ತ ನೀಡಿದ್ದ ವಿವಿಧ ಸಂಘಸಂಸ್ಥೆಗಳ  ಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಆರೋಗ್ಯ ಇಲಾಕೆಯ ಸಿಬ್ಬಂಧಿಗಳು ಸೇರಿದಂತೆ ಸುಮಾರು 135 ಕೊರೋನಾ ವಾರಿಯರ್ಸ್‌ಗಳನ್ನು ಅಭಿನಂದಿಸಲಾಯಿತು. ಪೋಲಿಸ್ ಇಲಾಖೆಯ ವತಿಯಿಂದ ಧ್ವಜವಂದನೆ ನಡೆಸಲಾಯಿತು.

ಕೊರೋನಾ ಗೆದ್ದ ಶ್ರೀರಾಮುಲು: ಅಸ್ಪತ್ರೆ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳಿದ್ದು ಜನಾರ್ದನ ರೆಡ್ಡಿ...

ಈ ವೇಳೆ ತಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು ಜಿಪಂ ಸದಸ್ಯರಾದ ಬಿ.ಎಲ….ದೇವರಾಜು, ರಾಮದಾಸ…, ತಾಪಂ ಉಪಾಧ್ಯಕ್ಷ ರವಿ, ಸದಸ್ಯರಾದ ಜಾನಕೀರಾಂ, ಮಾಧವ ಪ್ರಸಾದ್‌, ವಿನೂತ, ವಿಜಯಲಕ್ಷ್ಮಿ, ಮೀನಾಕ್ಷಿ, ಶಾಂತಮ್ಮ, ಸತ್ಯಮ್ಮ, ಕಾಂತಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ಪುರಸಭಾ ಮುಖ್ಯಾಧಿಕಾರಿ ಸತೀಶ… ಕುಮಾರ್‌ , ಸಿಪಿಐ ಕೆ.ಎನ್….ಸುಧಾಕರ್‌ ಇದ್ದರು.