ಜೇವರ್ಗಿ(ಜು.06): ಇಲ್ಲಿನ ಆಂದೋಲಾ ಗ್ರಾಮದ ಒಂದೇ ಕುಟುಂಬದ 12 ಜನರು ಹಾಗೂ ಪಟ್ಟಣದ ಬಸ್‌ ಡಿಪೋ ಹತ್ತಿರದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಮೂವರು ಸೇರಿದಂತೆ ಒಟ್ಟು 15 ಜನರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಇಡೀ ಗ್ರಾಮ ಸೀಲ್‌ಡೌನ್‌ ಮಾಡಲಾಗಿದೆ. 

ಪುಣೆಯಿಂದ ಬಂದಿದ್ದ ವ್ಯಕ್ತಿಯಿಂದಲೇ ಇವರಿಗೆ ಸೋಂಕು ತಗುಲಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಆಂದೋಲಾ ಗ್ರಾಮದ ಆಶಾ ಕಾರ್ಯಕರ್ತೆ,3 ಮಹಿಳೆಯರು, ಇಬ್ಬರು ಯುವತಿಯರು, ಇಬ್ಬರು ಯುವಕರು, ಇಬ್ಬರು ಬಾಲಕರು ಸೇರಿದಂತೆ 12 ಜನರಿಗೆ ಸೋಂಕು ದೃಢಪಟ್ಟಿದೆ.

ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

ಇವರನ್ನು ಕಲಬುರಗಿ ನಗರದ ಕೋವಿಡ್‌ ನಿಗದಿತ ಆಸ್ಪತ್ರೆ ಜಿಮ್ಸ್‌ಗೆ ದಾಖಲು ಮಾಡಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಮನೆ ಬಿಟ್ಟು ಹೊರಗಡೆ ಬರೋದಕ್ಕೂ ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.