ದೇವದುರ್ಗ: ಕ್ವಾರಂಟೈನ್ ಕೇಂದ್ರದಲ್ಲಿ ಮೃತ ಬಾಲಕನಿಗೆ ಕೊರೋನಾ ಪಾಸಿಟಿವ್
ಬಾಲಕನಿಗೆ ಕೊರೋನಾ ಪಾಸಿಟಿವ್‌ಗಿದ್ದರೂ ಕೋವಿಡ್ ಮರಣ ಅಂತ ಸ್ಪಷ್ಟನೆ ಬಂದಿಲ್ಲ: ಡಿಸಿ ವೆಂಕಟೇಶ ಕುಮಾರ್| ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ಮೃತ ಬಾಲಕನಿಗೆ ಕೋವಿಡ್ ಸೋಂಕು| ದೇವದುರ್ಗ ತಾಲೂಕಿನಲ್ಲಿ 75 ಪ್ರಕರಣಗಳು ಪತ್ತೆ|
ರಾಯಚೂರು(ಜೂ.06): ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ಬಾಲಕನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಾರಂಟೈನ್‌ನಲ್ಲಿದ್ದ ಬಾಲಕ ಹೊಟ್ಟೆನೋವಿನಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೃದಯ ಸಂಬಂಧಿಸಿ ಸಮಸ್ಯೆ ಸೇರಿದಂತೆ ಇತರೆ ಕಾಯಿಲೆಗಳಿದ್ದವು. ಆತನಲ್ಲಿಯೂ ಕೊರೋನಾ ಸೋಂಕು ಪತ್ತೆಯಾಗಿದೆ. ತಜ್ಞರ ತಂಡದಿಂದ ಪರಿಶೀಲನೆ ನಡೆಸಿ ಆರೋಗ್ಯದ ದಾಖಲೆ ಸಂಗ್ರಹಿಸಲಾಗುತ್ತಿದೆ. ಎರಡನೇ ಬಾರಿ ಪರೀಕ್ಷೆ ನಡೆಸಿದಾದ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದರು.
ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ:
ಬಾಲಕನ ಚಿಕ್ಕಪ್ಪನಿಂದ ಕೊರೋನಾ ಬಂದಿರಬಹುದು. ಆತನಿಗೆ ಮೂರ್ನಾಲ್ಕು ವರ್ಷಗಳಿಂದ ಕಾಯಿಲೆಯಿದ್ದು ಇದನ್ನು ಪಾಲಕರು ನಮಗೆ ತಿಳಿಸಿಲ್ಲ. ಈ ಕುರಿತು ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಬಾಲಕನಿಗೆ ಕೊರೋನಾ ಪಾಸಿಟಿವ್‌ಗಿದ್ದು, ಆದರೆ ಇದನ್ನು ಕೋವಿಡ್ ಮರಣ ಅಂತ ಸ್ಪಷ್ಟನೆ ಬಂದಿಲ್ಲ. ತನಿಖಾ ತಜ್ಞರ ವರದಿ ಬಂದ ಬಳಿಕವೇ ಅದು ಕೊತ್ತಾಗಲಿದೆ ಎಂದು ಹೇಳಿದರು.
ರಾಯಚೂರು: ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಾಲಕ ಸಾವು, ಕೊರೋನಾ ಶಂಕೆ..?
ದೇವದುರ್ಗ ತಾಲೂಕಿನಲ್ಲಿ 75 ಪ್ರಕರಣಗಳು ಪತ್ತೆಯಾಗಿದ್ದು, ಕೊತ್ತದೊಡ್ಡಿಯಲ್ಲಿ 46 ಮತ್ತು ನಗರಗುಂಡ ರಸ್ತೆ ಪದವಿ ಕಾಲೇಜಿನ ಕ್ವಾರಂಟೈನ್ ಕೇಂದ್ರದಲ್ಲಿ 29 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಮರಳಿದ ಕುಟುಂಬಸ್ಥರ ಸಂಪರ್ಕದಿಂದ ವೈರಸ್ ಹರಡಿದೆ ಎಂದು ತಿಳಿಸಿದರು.
ತಪ್ಪಾಗಿ ವರದಿಯಾಗಿದೆ:
ಪಿ-2612 ಸೋಂಕಿತನಿಂದ 38 ಜನರಿಗೆ ಸೋಂಕು ಹರಡಿಲ್ಲ. ಈ ಬಗ್ಗೆ ರಾಜ್ಯ ಬುಲಿಟಿನ್‌ನಲ್ಲಿ ತಪ್ಪಾಗಿ ವರದಿಯಾಗಿದ್ದು, ಈ ಬಗ್ಗೆ ತಿಳಿಸಲಾಗಿದೆ. ಅದೇ ರೀತಿ ಪಿ 2608 ನಿಂದ 17 ಜನರಿಗೆ, ಪಿ-2936 ನಿಂದ ಆರು ಜನರಿಗೆ 2939 ರಿಂದ 14 ಜನರಿಗೆ ಸೋಂಕು ಹರಡಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಹತ್ತಿರ ಕುಟುಂಬಸ್ಥರಿಂದ ವಿಸ್ತರಿಸಿಕೊಂಡಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಬಿಡುಗಡೆಗೊಳಿಸಲಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುವ ಆರ್‌ಟಿ-ಪಿಸಿಎರ್ ಪರೀಕಾ ಕೇಂದ್ರದಲ್ಲಿ 932 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 119 ಪ್ರಕರಣಗಳ ಫಲಿತಾಂಶ ಲಭಿಸಿದೆ. ಗುರುವಾರ ತನಕ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿದ್ದ 11,066 ಜನರಲ್ಲಿ 9,885 ಜನರನ್ನು ಬಿಡುಗಡೆಗೊಳಿಸಲಾಗಿದೆ. 1,238 ಜನರು ಇನ್ನೂ ಕೇಂದ್ರಗಳಿದ್ದು ಪರೀಕ್ಷೆ ನಡೆಸಿ ಬಿಡುಗಡೆಗೊಳಿಸಲಾಗುತ್ತದೆ.