ಗದಗ [ಮಾ.17]: ಗದಗದಲ್ಲಿ ಮೂರುವರೆ ವರ್ಷದ ಮಗುವಿಗೆ ಕೊರೋನಾ ಶಂಕೆ ವ್ಯಕ್ತವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. 

ಮಾರ್ಚ್ 9 ರಂದು ಲಂಡನ್ ನಿಂದ ಆಗಮಿಸಿದ್ದ ದಂಪತಿ  ಹಾಗೂ ಮಗುವಿಗೆ ಕೊರೋನಾ ಶಂಕೆ ವ್ಯಕ್ತವಾಗಿದ್ದು, ಅವರ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. 

ಕೊರೋನಾ ಪೀಡಿತರ ಸಂಖ್ಯೆ 123ಕ್ಕೆ: 13 ಜನರು ಗುಣಮುಖ, ಬಿಡುಗಡೆ!...

ಮಂಗಳವಾರ ದಂಪತಿ ಹಾಗೂ ಮಗು ಆಸ್ಪತ್ರೆಗೆ ದಾಖಲಾಗಿದ್ದು, ನಿಗಾ ವಹಿಸಲಾಗಿದೆ ಎಂದು  ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ಹೇಳಿದ್ದಾರೆ. 

10 ವಾರ್ಡುಗಳಿದ್ದ ಆಸ್ಪತ್ರೆಯಲ್ಲಿ ಇದೀಗ ವಾರ್ಡುಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಆದೇಶದ ಮೇರೆಗೆ ವಾರ್ಡುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.