ತೀರ್ಥಹಳ್ಳಿಯಲ್ಲಿ ಕೆಲವು ಗ್ರಾಮಗಳಲ್ಲಿ ಸೀಲ್ ಡೌನ್..!

ಶಿವಮೊಗ್ಗದಲ್ಲಿ ಮತ್ತೆ ಕೊರೋನಾ ಆತಂಕ ಎದುರಾಗಿದೆ. ತಬ್ಲಿಘಿಗಳ ಶಾಕ್‌ನಿಂದ ಹೊರ ಬರುವ ಮುನ್ನವೇ ತೀರ್ಥಹಳ್ಳಿಯ ಕೆಲವು ಊರುಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Corona Threat in Shivamogga Thirthahalli 3 villages are Sealdown

ತೀರ್ಥಹಳ್ಳಿ(ಮೇ.15): ತಬ್ಲಿಘಿಗಳಿಂದ ಬೆಚ್ಚಿಬಿದ್ದಿರುವ ಶಿವಮೊಗ್ಗಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಮುಂಜಾಗೃತ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿದೆ.

ಕೊರೊನಾ ವೈರಸ್ ಹರಡದಂತೆ ಪ್ರಾಯೋಗಿಕವಾಗಿ ಹಳ್ಳಿಬೈಲು, ರಂಜದಕಟ್ಟೆ, ಮುಳುಬಾಗಿಲು, ಸುತ್ತಮುತ್ತಲಿನ ಗ್ರಾಮಗಳನ್ನು Containment ಮತ್ತು Buffer Zone ಗಳನ್ನಾಗಿ ಗುರುತಿಸಿ  ಸೀಲ್‌ಡೌನ್ ಆದೇಶ ಹೊರಡಿಸಲಾಗಿದೆ. ಈ ಗ್ರಾಮಗಳ ಆರೋಗ್ಯ, ಕುಡಿಯುವ ನೀರು ಸರಬರಾಜು, ಎಲ್ಲಾ ನಾಗರೀಕ ಸೌಲಭ್ಯ ಒದಗಿಸುವ ಬಗ್ಗೆ ಮುಳಬಾಗಿಲು ಗ್ರಾಮ ಪಂಚಾಯತಿಯ PDO ರವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಆಶಾಕಾರ್ಯಕರ್ತೆಯರಿಂದ ಗ್ರಾಮದ ಮನೆಮನೆಗೆ ಭೇಟಿ ನೀಡಿ ಕೊವಿಡ್ 19 ಬಗ್ಗೆ ಮನವರಿಕೆ ಮಾಡಲಾಗುತ್ತಿದೆ.

ಬ್ಲಿಘ್ ಜಮಾತ್‌ಗೆ ಹೋಗಿದ್ದ 9 ಜನ ಗ್ರೀನ್ ಝೋನ್ ಶಿವಮೊಗ್ಗಕ್ಕೆ ವಾಪಾಸ್

ತೀರ್ಥಹಳ್ಳಿಯಲ್ಲೀಗ ಕೊರೋನಾತಂಕ: ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ವದಂತಿ ಹಬ್ಬಿದೆ. ಸಂಜೆಯ ಹೆಲ್ತ್ ಬುಲೆಟಿನ್ ವೇಳೆಗೆ ಖಚಿತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. 

ಮುಂಬೈನಿಂದ ಬಂದ ವ್ಯಕ್ತಿಯನ್ನು ಪತ್ತೆಹಚ್ಚಿ ಕಳೆದೊಂದು ವಾರದಿಂದ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈಗಾಗಲೇ ತೀರ್ಥಹಳ್ಳಿ ಸಮೀಪದ ಹಳ್ಳಿಬೈಲು, ಮುಳಬಾಗಿಲು, ರಂಜದಕಟ್ಟೆ ಗ್ರಾಮಗಳಿಗೆ ಸೀಲ್ ಡೌನ್ ಮಾಡಲಾಗಿದೆ. ರಾತ್ರಿಯಿಂದಲೇ ಜಿಲ್ಲಾಡಳಿತದ ಕಾರ್ಯಾಚರಣೆ ನಡೆಸಲಾಗಿದ್ದು ಗ್ರಾಮದಿಂದ ಯಾರೂ ಹೊರ ಹೋಗದಂತೆ, ಗ್ರಾಮಕ್ಕೆ ಯಾರೂ ಬಾರದಂತೆ ಸೀಲ್‌ಡೌನ್ ಮಾಡಲಾಗಿದೆ. 

ಕೆಲವು ದಿನಗಳ ಹಿಂದಷ್ಟೇ ಅಹಮದಾಬಾದ್‌ ನಿಂದ ಬಂದ ತಬ್ಲಿಘಿಗಳಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. 8 ಮಂದಿ ತಬ್ಲಿಘಿಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. 
 

Latest Videos
Follow Us:
Download App:
  • android
  • ios