ಉಡು​ಪಿ [ಮಾ.17]: ದುಬೈನಿಂದ ಆಗಮಿಸಿದ್ದ ಮಹಿಳೆಯೊಬ್ಬರು ಕೆಮ್ಮಿನ ಸಮಸ್ಯೆಯಿಂದಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ   ದಾಖಲಾಗಿದ್ದಾರೆ. 

ಮಾ.13ರಂದು ದುಬೈಯಿಂದ ಊರಿಗೆ ಮರಳಿದ್ದ 26 ವರ್ಷದ ಈ ಮಹಿಳೆಗೆ ಕೆಮ್ಮು ಕಾಣಿಸಿಕೊಂಡ ಕಾರಣ ಅವರನ್ನು ಮುಂಜಾಗ್ರತಾ ಕ್ರಮವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರತ್ಯೇಕ ವಿಶೇಷ ವಾರ್ಡ್‌ಗೆ ದಾಖಲಿಸಲಾಗಿದೆ. 

ಕೊರೋನಾ ಆತಂಕ ನಿವಾರಣೆಗೆ ರಾಜ್ಯ ಸರ್ಕಾರದಿಂದ ಟೆಲಿಗ್ರಾಂ ಗ್ರೂಪ್‌!...

ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಶಿವಮೊಗ್ಗದ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗ​ಳ​ವಾ​ರ ಪರೀಕ್ಷೆಯ ವರದಿ ಬರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸೂಡ ತಿಳಿಸಿದ್ದಾರೆ. 

ಈ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ವರದಿಯಾಗಿರುವ ಶಂಕಿತ ಕೊರೋನಾ ಪ್ರಕರಣಗಳ ಸಂಖ್ಯೆ11ಕ್ಕೇರಿದೆ. ಅವರಲ್ಲಿ 10 ಮಂದಿಯ ಪ್ರಯೋಗಾಲಯದ ಪರೀಕ್ಷೆಯ ವರದಿ ನೆಗೆಟಿವ್‌ ಎಂದು ಬಂದಿದೆ.