Asianet Suvarna News Asianet Suvarna News

Covid Crisis: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಮತ್ತಷ್ಟು ಇಳಿಕೆ

ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಇಳಿಕೆ ಭಾನುವಾರವೂ ಮುಂದುವರಿದಿದೆ. ಹತ್ತು ಹದಿನೈದು ದಿನಗಳ ಹಿಂದೆ 25-30 ಸಾವಿರದವರೆಗೆ ದೈನಂದಿನ ಪ್ರಕರಣ ಕಂಡಿದ್ದ ನಗರದಲ್ಲಿ ಭಾನುವಾರ ಕೇವಲ 3,822 ಪ್ರಕರಣ ಮಾತ್ರ ಪತ್ತೆಯಾಗಿದೆ. 

Corona Active Cases down 90 per cent in Bengaluru gvd
Author
Bangalore, First Published Feb 7, 2022, 6:23 AM IST

ಬೆಂಗಳೂರು (ಫೆ.07): ನಗರದಲ್ಲಿ ಕೊರೋನಾ ಮತ್ತಷ್ಟು ಇಳಿಕೆಗರದಲ್ಲಿ ಕೊರೋನಾ ಸೋಂಕು (Coronavirus) ಪ್ರಕರಣಗಳ ಇಳಿಕೆ ಭಾನುವಾರವೂ ಮುಂದುವರಿದಿದೆ. ಹತ್ತು ಹದಿನೈದು ದಿನಗಳ ಹಿಂದೆ 25-30 ಸಾವಿರದವರೆಗೆ ದೈನಂದಿನ ಪ್ರಕರಣ ಕಂಡಿದ್ದ ನಗರದಲ್ಲಿ ಭಾನುವಾರ ಕೇವಲ 3,822 ಪ್ರಕರಣ ಮಾತ್ರ ಪತ್ತೆಯಾಗಿದೆ. ಜನವರಿ ತಿಂಗಳ ಕೊನೆಯ ವಾರಕ್ಕೆ ಹೋಲಿಸಿದರೆ ಹೊಸ ಸೋಂಕಿನ ಪ್ರಕರಣದಲ್ಲಿ ಶೇಕಡ 90ರಷ್ಟು ಕಡಿಮೆಯಾಗಿದೆ.

ಸೋಂಕಿತರ ಪೈಕಿ 1,454 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 63 ಮಂದಿ ಐಸಿಯು ಸಹಿತ ವೆಂಟಿಲೇಟರ್‌, 280 ಮಂದಿ ಐಸಿಯು, 143 ಮಂದಿ ಆಮ್ಲಜನಕಯುಕ್ತ ಬೆಡ್‌ ಮತ್ತು 968 ಮಂದಿ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9,893 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

51,987 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಶೇ.9.74 ಪಾಸಿಟಿವಿಟಿ ದರ ವರದಿಯಾಗಿದೆ. ನಗರದಲ್ಲಿ ಕೋವಿಡ್‌ ಕ್ಲಸ್ಟರ್‌ಗಳ ಸಂಖ್ಯೆ ಕಡಿಮೆ ಆಗಿದೆ. ಸದ್ಯ 80 ಕ್ಲಸ್ಟರ್‌ಗಳು ಸಕ್ರಿಯವಾಗಿದೆ. ಇದರಲ್ಲಿ 5 ಪ್ರಕರಣಗಳಿಗಿಂತ ಹೆಚ್ಚಿರುವ 54 ಕ್ಲಸ್ಟರ್‌ ಮತ್ತು 5ಕ್ಕಿಂತ ಕಡಿಮೆ ಪ್ರಕರಣವಿರುವ 28 ಮೈಕ್ರೋ ಕಂಟೈನ್‌ಮೆಂಟ್‌ ವಲಯಗಳಿವೆ.

ಲಸಿಕೆ ಅಭಿಯಾನ: ನಗರದಲ್ಲಿ 62,198 ಮಂದಿ ಕೋವಿಡ್‌ ಲಸಿಕೆ (Covid Vaccine) ಪಡೆದುಕೊಂಡಿದ್ದಾರೆ. 6,758 ಮಂದಿ ಮೊದಲ, 47,211 ಮಂದಿ ಎರಡನೇ ಮತ್ತು 8,229 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 92.21 ಲಕ್ಷ ಮೊದಲ, 76.72 ಲಕ್ಷ ಎರಡನೇ ಮತ್ತು 2 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ.

Covid Crisis: ಬೆಂಗ್ಳೂರಲ್ಲಿ ವಾರದಲ್ಲಿ 2 ಲಕ್ಷ ಮಂದಿ ಗುಣಮುಖ: 92,000 ಕ್ಕಿಳಿದ ಸಕ್ರಿಯ ಕೇಸ್‌

ಇಬ್ಬರು ವಿದೇಶಿಯರಲ್ಲಿ ಕೊರೋನಾ: ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಪೈಕಿ ಇಬ್ಬರಲ್ಲಿ ಕೊರೋನಾ ದೃಢಪಟ್ಟಿದೆ. ಇದರೊಂದಿಗೆ ನವೆಂಬರ್‌ನಿಂದ ಈವರೆಗೆ ರಾಜ್ಯಕ್ಕೆ ಬಂದ ಪ್ರಯಾಣಿಕರ ಪೈಕಿ 399 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಭಾನುವಾರ ಐರ್ಲೆಂಡ್‌ನಿಂದ ಆಗಮಿಸಿದ 28 ವರ್ಷದ ಮಹಿಳೆ, ಅಮೆರಿಕದಿಂದ ಬಂದ 43 ವರ್ಷದ ಪುರುಷನಲ್ಲಿ ಕೋವಿಡ್‌ ಪತ್ತೆಯಾಗಿದೆ. ಇವರಿಬ್ಬರನ್ನು ಕೋವಿಡ್‌ ಮಾರ್ಗಸೂಚಿ ಪ್ರಕಾರ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

87 ಜನರಿಗೆ ಕೊರೋನಾ, ಒಂದು ಸಾವು: ಜಿಲ್ಲೆಯಲ್ಲಿ ಭಾನುವಾರ 87 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಬ್ಯಾಡಗಿ-7, ಹಾನಗಲ್ಲ-16, ಹಾವೇರಿ-12, ಹಿರೇಕೆರೂರು-11, ರಾಣಿಬೆನ್ನೂರು-25, ಶಿಗ್ಗಾಂವಿ-7, ಸವಣೂರು-9 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 26,632 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ. ಭಾನುವಾರ 134 ಜನರು ಗುಣಮುಖರಾಗಿದ್ದು, ಇದುವರೆಗೆ 24,852 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 

ಈವರೆಗೆ 667 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, 1,113 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 1,086 ಜನರು ಹೋಮ್‌ ಐಸೋಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಭಾನುವಾರ ಕೊರೋನಾ ಸೋಂಕಿನಿಂದ ರಾಣಿಬೆನ್ನೂರು ತಾಲೂಕಿನ 62 ವರ್ಷದ ವೃದ್ಧ ಮೃತಪಟ್ಟಿದ್ದು, ಕೋವಿಡ್‌ ನಿಯಮದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಡಿಎಚ್‌ಒ ಡಾ. ಎಚ್‌.ಎಸ್‌. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

Covid Crisis: ಬೆಂಗ್ಳೂರಲ್ಲಿ ಕುಸಿದ ಕೊರೋನಾ ಸೋಂಕು ಕೇಸ್‌

ವಿದೇಶದಿಂದ ಬಂದ 7 ಮಂದಿಗೆ ಸೋಂಕು: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದ ಪ್ರಯಾಣಿಕರ ಪೈಕಿ ಏಳು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಜರ್ಮನಿ ಮತ್ತು ಅಮೆರಿಕದಿಂದ ಬಂದ ತಲಾ ಇಬ್ಬರು, ದಕ್ಷಿಣ ಆಫ್ರಿಕಾ, ನೆದರ್‌ಲ್ಯಾಂಡ್‌ ಹಾಗೂ ಇಂಗ್ಲೆಂಡ್‌ನಿಂದ ಬಂದ ತಲಾ ಒಬ್ಬ ಪ್ರಯಾಣಿಕ ಸೇರಿ ಏಳು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರೆಲ್ಲರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿ, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡಿ.1ರಿಂದ ಈವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ377ಕ್ಕೆ ಏರಿಕೆಯಾಗಿದೆ.

Follow Us:
Download App:
  • android
  • ios