ಮಂಗಳೂರು (ಸೆ.10): ಕೆಲಸ ಇಲ್ಲದೆ ಸಂಬಳ ಪಡೆಯುುವುದು ಹೆಮ್ಮೆ ಎಂಬರ್ಥದಲ್ಲಿ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಗೋವಿಂದರಾಜ್‌ ಅವರಿಗೆ ಮಂಗಳೂರು ವಿವಿ ನೋಟಿಸ್‌ ನೀಡಿದೆ.

ಇವರು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಪ್ರೌಡ್‌ ಟು ಬಿ ಎ ಟೀಚರ್‌ ಬಿಕಾಸ್‌ ಡ್ರಾಯಿಂಗ್‌ ಎ ಗುಡ್‌ ಸ್ಯಾಲರಿ ವಿತೌಟ್‌ ವರ್ಕ್ ರಿಸ್ಕ್‌’ (ಕೆಲಸ, ಅಪಾಯವಿಲ್ಲದೆ ಉತ್ತಮ ಸಂಬಳ ಸಿಗುತ್ತಿದೆ, ಅದಕ್ಕೆ ಶಿಕ್ಷಕನಾಗಿರುವುದಕ್ಕೆ ಹೆಮ್ಮೆ ಇದೆ) ಎಂಬ ಪೋಸ್ಟ್‌ ಹಾಕಿದ್ದರು.

ಕೊನೆಗೂ ಶಾಲೆ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ ...

ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ವಿವಿಯು ಪ್ರಾಧ್ಯಾಪಕರಿಗೆ ನೋಟಿಸ್‌ ನೀಡಿದ್ದು, 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಸದ್ಯಕ್ಕೆ ತೆರೆಯುವ ಮುನ್ಸೂಚನೆಗಳು ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಪ್ರೊಫೆಸರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.