ಅನ್ನಭಾಗ್ಯದ ಜೋಳದಲ್ಲಿ ಹುಳು: ದನ ಕೂಡ ಇದನ್ನ ತಿನ್ನೋದಿಲ್ಲ ಎಂದು ಗ್ರಾಹಕರ ಆಕ್ರೋಶ
ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಪ್ರತಿ ತಿಂಗಳು ಜೋಳ, ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ, ಕುಂದಗೋಳದ ಸಾಲಿಯವರ ಪ್ಲಾಟ್‌ನ ಬಾನಿಯವರ ನ್ಯಾಯಬೆಲೆ ಅಂಗಡಿ ಹಾಗೂ ಹಿರೇನರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳು ವಿತರಿಸಿರುವ ಜೋಳದಲ್ಲಿ ಬಿಳಿ ಫೌಡರ್ ಬಂದಿದೆ. ಜತೆಗೆ ಜೋಳದಲ್ಲಿ ಹುಳುಗಳು ಕಂಡು ಬಂದಿವೆ.
ಕುಂದಗೋಳ(ನ.29): ಅನ್ನಭಾಗ್ಯ ಯೋಜನೆಯ ಜೋಳದಲ್ಲಿ ಹುಳು, ಬಿಳಿ ಫೌಡರ್ ಹಾಗೂ ಕಸ ಮಿಶ್ರಿತ ಆಗಿರುವುದರಿಂದ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ನ್ಯಾಯಬೆಲೆ ಅಂಗಡಿಗೆ ತೆರಳಿ ಮರಳಿ ಪಡಿತರ ನೀಡಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಹಾಗೂ ತಾಲೂಕಿನ ಹಿರೇನರ್ತಿ ಗ್ರಾಮದ ಗ್ರಾಹಕರು ತಮಗೆ ವಿತರಿಸಿದ್ದ ಪಡಿತರವನ್ನು ಮರಳಿ ನ್ಯಾಯಬೆಲೆ ಅಂಗಡಿಗೇ ಕೊಟ್ಟಿದ್ದಾರೆ. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಪ್ರತಿ ತಿಂಗಳು ಜೋಳ, ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ, ಕುಂದಗೋಳದ ಸಾಲಿಯವರ ಪ್ಲಾಟ್‌ನ ಬಾನಿಯವರ ನ್ಯಾಯಬೆಲೆ ಅಂಗಡಿ ಹಾಗೂ ಹಿರೇನರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳು ವಿತರಿಸಿರುವ ಜೋಳದಲ್ಲಿ ಬಿಳಿ ಫೌಡರ್ ಬಂದಿದೆ. ಜತೆಗೆ ಜೋಳದಲ್ಲಿ ಹುಳುಗಳು ಕಂಡು ಬಂದಿವೆ. ಇದನ್ನು ನೋಡಿದರೆ ದನಗಳು ಕೂಡ ಇಂಥ ಜೋಳ ತಿನ್ನುವುದಿಲ್ಲ. ಜೋಳವೆಲ್ಲ ಪುಡಿ ಪುಡಿಯಾಗಿದೆ. ಇದನ್ನು ತಿಂದರೆ ಅನಾರೋಗ್ಯದಿಂದ ಬಳಲುವುದು ಗ್ಯಾರಂಟಿ ಎಂದು ಗಂಗಾಧರ, ಈಶ್ವರ, ಹಜರೇಸಾಬ, ಮಹೇಶ, ಮಂಜುಳಾ ಮತ್ತಿತರರು ಅಳಲನ್ನು ತೊಡಿಕೊಂಡರು ಆಹಾರ ಇಲಾಖೆಯ ಅಧಿಕಾರಿ ಚೆಕ್ ಮಾಡದೆ ಬಡವರಿಗೆ ವಿತರಿಸಿದ್ದಾರೆ.
ಅನ್ನಭಾಗ್ಯದ ಇನ್ನೂ 1700 ಕ್ವಿಂ. ಅಕ್ಕಿ ಎಲ್ಹೋಯ್ತು?: ಫೋನ್ ಪೇ ಮೂಲಕ ಅಧಿಕಾರಿಗಳಿಗೆ ಲಂಚ
ಅಧಿಕಾರಿಗಳೆಲ್ಲ ಕಣ್ಮುಚ್ಚಿ ಕೊಂಡು ಕುಳಿತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಮಂಜುಳಾ, ಇಂಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ನಮಗೆ ಬೇರೆ ಹಾಗೂ ಗುಣಮಟ್ಟದ ಪಡಿತರ ವಿತರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಕಳುಹಿಸಿದ ಆಹಾರ ಧಾನ್ಯ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ವಿತರಿಸಬೇಕು. ಆದರೆ, ಇಲ್ಲಿ 28ರ ವರೆಗೂ ವಿತರಿಸಲಾಗುತ್ತಿದೆ.
ಏಕೆ ಎಂಬ ಪ್ರಶ್ನೆಗೆ ನ್ಯಾಯಬೆಲೆ ಅಂಗಡಿಕಾರರಲ್ಲಿ ಉತ್ತರವಿಲ್ಲ. ನೆ. 27ರಂದು ಪಡಿತರ ವಿತರಿಸಲಾಗಿದೆ. 28ರಂದು ಪರಿಶೀಲಿಸಿದರೆ ಈ ರೀತಿ ಹುಳು ಹತ್ತಿರುವುದು ಕಂಡು ಬಂದಿದೆ. ಅದನ್ನು ಗುರುವಾರ ಅಂಗಡಿಗೆ ತಂದು ಮರಳಿ ಕೊಡುತ್ತಿರುವುದು ಕಂಡು ಬಂತು. ಆದರೆ, ಅದನ್ನು ಪಡೆದ ನ್ಯಾಯಬೆಲೆ ಅಂಗಡಿಕಾರರು ಮರಳಿ ಬೇರೆ ಗ್ರಾಹಕರಿಗೆ ನೀಡುತ್ತಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳು ಕೊಂಚ ಗಮನ ಹರಿಸಿ ಬಡವರಿಗೆ ಪಡಿತರ ಸರಿಯಾಗಿ ಹಾಗೂ ಗುಣಮಟ್ಟದ ಪಡಿತರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಕಳಪೆ ಮಟ್ಟದ ಜೋಳ ವಿತರಣೆ ಆಗಿರುವದು ಗಮನಕ್ಕೆ ಬಂದಿದೆ. ಕುಂದಗೋಳ ಪಟ್ಟಣದ ಬಾನಿಯವರ ನ್ಯಾಯ ಬೆಲೆ ಅಂಗಡಿಯಲ್ಲಿ 40 ಪಾಕೆಟ್ ಹಾಗೂ ಹಿರೇನರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ 30 ಪಾಕೆಟ್ ಈ ತರಹ ಬಂದಿರುವುದು ಗಮನದಲ್ಲಿದೆ. ನಾನು ಕೂಡ ಗೋದಾಮಿಗೆ ಹೋಗಿ ಪರಿಶೀಲಿಸುತ್ತೇನೆ ಎಂದು ತಹಸೀಲ್ದಾರ್ ರಾಜು ಮಾವರಕರ್ ತಿಳಿಸಿದ್ದಾರೆ.
ಸರ್ಕಾರ ಕಳಪೆ ಜೋಳ ವಿತರಣೆ ಮಾಡಿ. ಬಡವರ ಜೀವದ ಜತೆ ಆಟವಾಡುತ್ತಿದೆ. ಈಗ ಕೊಟ್ಟಿರುವ ಜೋಳ ಬಳಸಿದರೆ ಅನಾರೋಗ್ಯಕ್ಕೆ ಒಳಗಾಗುವುದು ಗ್ಯಾರಂಟಿ. ಗುಣಮಟ್ಟದ ಜೋಳವನ್ನೇ ವಿತರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕುಂದಗೋಳ ರೈತ ಮುಂಖಡ ಶಂಕರಗೌಡ ದೊಡ್ಡಮನಿ ಹೇಳಿದ್ದಾರೆ.
ಅನ್ನಭಾಗ್ಯ: ಹಣದ ಬದಲು ದಿನಸಿ ಕಿಟ್?; ಹೊಸ ಯೋಜನೆಗೆ ಸರ್ಕಾರ ಚಿಂತನೆ
ಅನ್ನಭಾಗ್ಯ ನಡೆಸಲು ಆಗದೆ ಬಿಪಿಎಲ್ ಕಾರ್ಡ್ ರದ್ದು: ಜಗದೀಶ ಶೆಟ್ಟರ್
ಹುಬ್ಬಳ್ಳಿ: ಯಾವುದೇ ರೀತಿಯ ಪೂರ್ವಾಪರ ಯೋಚನೆಗಳಿಲ್ಲದೇ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈಗ ಅನ್ನಭಾಗ್ಯ ಯೋಜನೆ ಮುನ್ನಡೆಸಲು ಆಗದಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಮಾರ್ಗಕ್ಕೆ ಮುಂದಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುವ . ಕೆಲಸ ಮಾಡುತ್ತಿದೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ಅನರ್ಹ ಕಾರ್ಡ್‌ಗಳಿವೆ ಎಂಬ ಅರಿವು ಸರ್ಕಾರಕ್ಕೆ ಬಂದಿದೆ. ಈಗ ಎಲ್ಲ ಚುನಾವಣೆಗಳು ಮುಗಿದ ಬಳಿಕ ಬಿಪಿಎಲ್ ಕಾರ್ಡ್‌ಗಳಿಗೆ ಕೈ ಹಾಕಿರುವುದು ಗ್ಯಾರಂಟಿ ಯೋಜನೆ ನಿಲ್ಲಿಸುವ ಸೂಚನೆಯಾಗಿದೆ ಎಂದರು.