ಬಳ್ಳಾರಿ ನೀರಿನ ಬವಣೆ ನೀಗಿಸಲು ಡ್ಯಾಂ ನಿರ್ಮಾಣ: ಸಚಿವ ರಾಮುಲು
* ಯರ್ರಂಗಳಿ ಹುಲಿಗೆಮ್ಮ, ಸಂಕ್ಲಮ್ಮ ದೇವಸ್ಥಾನಕ್ಕೆ ಸಚಿವ ಶ್ರೀರಾಮುಲು ಭೇಟಿ
* ಮಳೆಯಾಶ್ರಿತ ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಅನುಕೂಲ
* ಸಮಾನಾಂತರ ಜಲಾಶಯ ನಿರ್ಮಾಣದಿಂದ ರೈತರಿಗೆ ಸಮರ್ಪಕ ನೀರು
ಕುರುಗೋಡು(ಏ.01): ಜಿಲ್ಲೆಯಲ್ಲಿ ನೀರಿನ ಬವಣೆ ನೀಗಿಸಲು ಕನಕಗಿರಿ ತಾಲೂಕಿನ ನವಲಿ ಬಳಿ 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ತಾಲೂಕಿನ ಯರ್ರಂಗಳಿ ಗ್ರಾಮದ ಹುಲಿಗೆಮ್ಮ ಮತ್ತು ಸುಂಕ್ಲಮ್ಮ ದೇವಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ನಂತರ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾನಾಂತರ ಜಲಾಶಯ ನಿರ್ಮಾಣದಿಂದ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೊನೆಯಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತದೆ. ಮಳೆಯಾಶ್ರಿತ ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುತ್ತದೆ ಎಂದರು.
ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಳಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮಕೈಗೊಡಿದ್ದಾರೆ. ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಶ್ರೀರಾಮುಲು ತವರಿನಲ್ಲಿ ವರ್ಕೌಟ್ ಆಯ್ತು ಡಿಕೆಶಿ ಒಗ್ಗಟ್ಟಿನ ಮಂತ್ರ, ಬಿಜೆಪಿಗೆ ಮಖಭಂಗ
ಯರ್ರಂಗಳಿ ಗ್ರಾಮದ ಬಡಜನರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವ ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷ ಸುನೀಲ್ ಗೌಡ, ಮುಖಂಡರಾದ ಜೆ. ಶಾಂತಾ, ಟಿ.ಎಚ್. ಸುರೇಶ್ ಬಾಬು, ಯರ್ರಂಗಳಿ ತಿಮ್ಮಾರೆಡ್ಡಿ, ಗುರುಲಿಂಗನ ಗೌಡ, ಮಹೇಶ್ ಗೌಡ, ಬಸವರಾಜ, ದಿವಾಕರ ಇದ್ದರು.
ಸಿದ್ದರಾಮಯ್ಯಗೆ ಮಾನಸಿಕ ಖಿನ್ನತೆ: ಶ್ರೀರಾಮುಲು ವಾಗ್ದಾಳಿ
ಬಳ್ಳಾರಿ: ಪಕ್ಷದಲ್ಲಿ ಒಂಟಿಯಾಗಿರೋ ಸಿದ್ದರಾಮಯ್ಯ (Siddaramaiah) ಮಾನಸಿಕ ಖಿನ್ನತೆಗೆ ಒಳಗಾಗಿ ಏನೇನೋ ಮಾತನಾಡ್ತಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲುಹರಿಹಾಯ್ದಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ತುಘಲಕ್ ರಾಜನಂತಾಗಿದ್ದಾರೆ. ಅವರ ಮಾತು ನೋಡಿದ್ರೆ ನಾಲಿಗೆ ಮೇಲೆ ಹಿಡಿತ ತಪ್ಪಿದೆ ಅನಿಸುತ್ತದೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದ್ದರು.
ಸಿದ್ದರಾಮಯ್ಯ ತಮ್ಮಷ್ಟಕ್ಕೆ ತಾವು ಬುದ್ದಿವಂತರೆಂದು ಕೊಂಡಿದ್ದು, ಹೀಗಾಗಿ ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಕ್ಕಾಗಿ ಗುರು ಪರಂಪರೆಯನ್ನು ಅವಮಾನ ಮಾಡಿದ್ದಾರೆ. ಗುರುಪರಂಪರೆ ಅಷ್ಟೇ ಅಲ್ಲ ಹನುಮನ ಬಗ್ಗೆ ಈ ಹಿಂದೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ರು. ಮೊದಲು ಹೇಳಿಕೆ ನೀಡೋದು ನಂತರ ಆ ರೀತಿಯಲ್ಲವೆಂದು ತಿರುಚುವ ಪ್ರಯತ್ನ ಮಾಡ್ತಾರೆ ಇದು ಅವರ ಹಳೆಯ ಚಾಳಿ ಎಂದು ಶ್ರೀರಾಮುಲು ಗುಡುಗಿದರು. ಜೊತೆಗೆ ಸ್ವಾಮೀಜಿಗಳಿಗೆ ಅಪಮಾನ ಮಾಡಿದ ಹಿನ್ನೆಲೆ ಕೂಡಲೇ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.
BMTC: ಎಲೆಕ್ಟ್ರಿಕ್ ಬಸ್‌ಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿಲ್ಲ: ಸಚಿವ ಶ್ರೀರಾಮುಲು
ಅತ್ಮ ವಿಶ್ವಾಸ ಕಡಿಮೆಯಾಗಿದೆ:
ಸಿದ್ದರಾಮಯ್ಯಗೆ ತಮ್ಮ ಮೇಲಿನ ವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಸಿದ್ದರಾಮಯ್ಯ ಖಿನ್ನತೆಯಿಂದ ಬಳಲುತ್ತಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯ ಅವರ ಪಕ್ಷದಲ್ಲಿ ಎಕಾಂಗಿ ಆಗಿದ್ದಾರೆ. ಪಕ್ಷ ಅವರನ್ನು ದೂರ ತಳುತ್ತಿದೆ ಎನ್ನುವ ಖಿನ್ನತೆಯಲ್ಲಿ ಇದ್ದಾರೆಂದು ವ್ಯಂಗ್ಯವಾಡಿದ್ದರು.
ಎರಡು ಮೂರು ತುಂಡಾಗಿರೋ ಕಾಂಗ್ರೆಸ್:
ಕಾಂಗ್ರೆಸ್ ಪಕ್ಷವೂ 2-3 ತುಂಡಾಗಿದೆ ಪಕ್ಷದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದ್ರೆ ಡಿಕೆಶಿಗೆ ಸಿಟ್ಟು. ಡಿಕೆಶಿಗೆ ಕಡೆ ಹೋದ್ರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಇನ್ನೂ ನಮ್ಮ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರಲಾಗಿದೆ ಮುಂದೆ ಅಧಿಕಾರಕ್ಕೆ ಬರೋ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಅತಿಹೆಚ್ಚು ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ. ಹೀಗಾಗಿ 170 ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಸಚಿವ ಆಕ್ಷಾಂಕಿಗಳು ತುಂಬಾ ಇದ್ದಾರೆ. ಕೋರ್ ಕಮೀಟಿಯಲ್ಲಿ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದ್ದರು.