ಮಧುಗಿರಿ (ಮಾ.08): ಮುಖ್ಯ​ಮಂತ್ರಿ ಬಿ.ಎ​ಸ್‌. ಯಡಿ​ಯೂ​ರಪ್ಪ ಅವರು ಮುಂದಿನ ಸಲ ರಾಜ್ಯ​ದಲ್ಲಿ 150 ಸ್ಥಾನ ಗೆಲ್ಲು​ತ್ತೇವೆ ಎಂದು ಹೇಳು​ತ್ತಿ​ದ್ದಾರೆ. ಪ್ರತಿದಿನ ಜನ ಟೀವಿಯಲ್ಲಿ ಬಿಜೆಪಿ ಸಿನಿಮಾ(ಸೀ​ಡಿ​) ನೋಡು​ತ್ತಿ​ದ್ದಾರೆ, ಇಂಥ ಪರಿ​ಸ್ಥಿ​ತಿ​ಯಲ್ಲಿ ಮುಂದಿನ ಸಲ 150 ಸೀಟು ಗೆಲ್ಲೋದು ಬಿಜೆಪಿ ಅಲ್ಲ, ಕಾಂಗ್ರೆಸ್‌ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ತಿಳಿ​ಸಿ​ದ್ದಾ​ರೆ.

ನಗ​ರ​ದಲ್ಲಿ ಭಾನು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮತ್ತು ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭ ಮತ್ತು ಜನಧ್ವನಿ ಯಾತ್ರೆ, ಕಾರ್ಯಕರ್ತರ ಸಮಾವೇಶದಲ್ಲಿ ಮಾ​ತ​ನಾ​ಡಿ ಕೆಲವರು ಕುರ್ಚಿಗಾಗಿ ಗೌರವ ತರುತ್ತಾರೆ. ಇನ್ನು ಕೆಲವರು ಕುರ್ಚಿಗಾಗಿ ಗೌರವ ಕಳೀತಾರೆ ಎಂದು ಮಾರ್ಮಿ​ಕ​ವಾಗಿ ನುಡಿ​ದ​ರು.

'ಸಿದ್ದು-ಡಿಕೆಶಿ ನಡುವಿನ ಬಿರುಕಿಗೆ ತೇಪೆ ಹಚ್ಚದಿದ್ದರೆ ಕಷ್ಟ' ..

ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋ​ಪಿ​ಸಿದ ಅವ​ರು, ಜನತೆ ಇದರ ಬಿಸಿ ತಾಳಲಾರದೆ ಪರದಾಡುತ್ತಿದ್ದಾರೆ. ಇದರ ಜತೆಗೆ, ಕಳೆದ ಮೂರು ತಿಂಗಳಿನಿಂದಲೂ ಮಳೆ, ಗಾಳಿಯೆನ್ನದೆ ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆ​ಗ​ಳನ್ನು ವಿರೋ​ಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವರು ಪ್ರತಿ​ಭ​ಟನೆ ವೇಳೆ ಅಸು​ನೀ​ಗು​ತ್ತಿ​ದ್ದಾ​ರೆ. ಸ್ವಾತಂತ್ರ್ಯ ಬಂದಾ​ಗಿ​ನಿಂದಲೂ ಇಂಥ ಪ್ರತಿಭಟನೆಯನ್ನು ದೇಶ ಕಂಡೇ ಇಲ್ಲ. ಇಷ್ಟಾ​ದ​ರೂ ಪ್ರಧಾನಿ ಮೋದಿಗೆ ರೈತರ ಕಷ್ಟಕೇಳುವ ಸೌಜನ್ಯ ಇಲ್ಲ. ನಾವೇ ರೈತರ ರಕ್ಷಣೆಗೆ ಮುಂದಾಗಬೇಕಿದೆ ಎಂದರು.