ಕಾಂಗ್ರೆಸ್‌ ಗೆಲುವು ಖಚಿತ: ಷಾಬಾಬು ವಿಶ್ವಾಸ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ಗ್ಯಾರಂಟಿ ಪ್ರಣಾಳಿಕೆಯ ಜನಪರ ಕಾರ್ಯಕ್ರಮ ಹಾಗೂ ಶಾಸಕ ವೆಂಕಟರಮಣಪ್ಪ ಅಭಿವೃದ್ಧಿ ಕಾರ್ಯಗಳ ಹಿನ್ನಲೆಯಲ್ಲಿ ತಾಲೂಕಿನ ಜನತೆ ಕೈಪರ ಮತದಾನ ಮಾಡಿದ್ದು, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಪಾವಗಡದ ಷಾಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Congress victory is certain: Shahbabu Vishwas snr

ಪಾವಗಡ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ಗ್ಯಾರಂಟಿ ಪ್ರಣಾಳಿಕೆಯ ಜನಪರ ಕಾರ್ಯಕ್ರಮ ಹಾಗೂ ಶಾಸಕ ವೆಂಕಟರಮಣಪ್ಪ ಅಭಿವೃದ್ಧಿ ಕಾರ್ಯಗಳ ಹಿನ್ನಲೆಯಲ್ಲಿ ತಾಲೂಕಿನ ಜನತೆ ಕೈಪರ ಮತದಾನ ಮಾಡಿದ್ದು, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಪಾವಗಡದ ಷಾಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾಡಿದ ಮುಖಂಡ ಷಾಬಾಬು, ಜನಪರ ಕಾರ್ಯಕ್ರಮ ಅನುಷ್ಟಾನದ ಭರವಸೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ವ್ಯಾಪಕವಾಗಿದೆ. ಪ್ರಚಾರದ ವೇಳೆ ಮನೆಮನೆಗೆ ಪ್ರಣಾಳಿಕೆಯ ಯೋಜನೆಗಳ ಮಾಹಿತಿ ತಿಳಿಸಿದ್ದ ಮೇರೆಗೆ ತಾಲೂಕಿನ ಜನತೆ ಹೆಚ್ಚು ಒಲವು ತೋರಿದ್ದು ಶಾಸಕ ವೆಂಕಟರಮಣಪ್ಪರ ಅಧಿಕಾರ ಅವಧಿಯಲ್ಲಿ ಕೈಗೊಂಡ ಶಾಶ್ವತ ಕಾಮಗಾರಿ, ಶೈಕ್ಷಣಿಕ ಪ್ರಗತಿಗೆ ಶಾಲಾ ಕಾಲೇಜುಗಳ ನಿರ್ಮಾಣ, ಕುಡಿವ ನೀರು ನೀರಾವರಿ ಯೋಜನೆಗಳ ಅನುಷ್ಟಾನದ ಮೇರೆಗೆ ಕಾಂಗ್ರೆಸ್‌ ಪರ ಹೆಚ್ಚು ಮತದಾನ ಮಾಡಿದ್ದು ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ನಿಶ್ಚಿತ

ಬೆಳಗಾವಿ (ಮೇ.13) : ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟುಬರುವುದಿಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 120ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಈ ಬಾರಿ ಕಾಂಗ್ರೆಸ್‌ ಸರ್ಕಾರ ರಚಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಾರಾಗುತ್ತಾರೆ? ಎನ್ನುವುದಕ್ಕಿಂತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ಮುಖ್ಯವಿದೆ. ಬಹುಮತ ಸಿಕ್ಕ ನಂತರ ಎಲ್ಲ ಶಾಸಕರು ಸೇರಿ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.

Karnataka assembly election: ಪಕ್ಷೇತರರ ಸೆಳೆಯಲು ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯತ್ನ...

ಗೌಡರ ಸಲಹೆ ಬೇಕು?: ಮೈತ್ರಿಗೆ ನಾವು ಸಿದ್ಧ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರುವ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದರೆ ಒಳ್ಳೆಯದು. ದೇವೇಗೌಡರದ್ದು, ಕುಮಾರಸ್ವಾಮಿ ಸಲಹೆ ಇದ್ದರೆ ಒಳ್ಳೆಯದು ಎಂದು ಹೇಳಿದ ಅವರು ಕಡೆಗೆ ಮೈತ್ರಿಗೂ ಮುಕ್ತ ಎಂಬ ಸುಳುಹು ಬಿಚ್ಚಿಟ್ಟರು.

ಅಶೋಕ್‌ ಪ್ಲಾನ್‌ ಫಲಿಸದು: ಕಡಿಮೆ ಕ್ಷೇತ್ರದಲ್ಲಿ ಗೆದ್ದರೂ ಸರ್ಕಾರ ರಚನೆ ಮಾಡುತ್ತೇವೆ ಎಂಬ ಆರ್‌.ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 75ರಿಂದ 80 ಕ್ಷೇತ್ರ ಮಾತ್ರ ಗೆಲ್ಲುತ್ತದೆ. ಅವರಿಗೆ ಸರ್ಕಾರ ಮಾಡಲು 30 ರಿಂದ 40 ಸೀಟ್‌ ಬೇಕಾಗುತ್ತದೆ. ಇನ್ನು, ಬಿಜೆಪಿ ಆಪರೇಷನ್‌ ಕಮಲ ಮಾಡುವುದು ಅವರ ಹಗಲುಗನಸಾಗಿದೆ. ಸುಮ್ಮನೆ ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ ಎಂದು ವ್ಯಂಗ್ಯವಾಡಿದರು.

Latest Videos
Follow Us:
Download App:
  • android
  • ios