ಕೆ.ಆರ್ .ಪೇಟೆ (ಜೂ.17) : ಪುರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹು ಮತ ಬಾರದೆ ಅತಂತ್ರ ಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಪಕ್ಷ ಪಕ್ಷೇತರ ಮತ್ತು ಬಿಜೆಪಿ ಸದಸ್ಯರ ನೆರವಿನಿಂದ ಅಧಿಕಾರ ಹಿಡಿಯು ವುದಾಗಿ ಪುರಸಭಾ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್ ನಿವಾಸದಲ್ಲಿ 10 ಮಂದಿ ಕಾಂಗ್ರೆಸ್ ಸದಸ್ಯರು ಪುರಸಭಾ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಬಂಧ ತಂತ್ರಗಾರಿಕೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಳೆದ 6 ವರ್ಷಗಳಿಂದ ಶಾಸಕ ಕೆ.ಸಿ.ನಾರಾಯಣ ಗೌಡರು ಪುರಸಭೆಗೆ ಯಾವುದೇ ಅನುದಾನ ನೀಡಿಲ್ಲ. ಇದರಿಂದ ಪುರಸಭೆಯ ಅಭಿವೃ ದ್ಧಿಗೆ ಹಿನ್ನೆಡೆಯಾಗಿದೆ. ಒಳಚರಂಡಿ ಯೋಜನೆಯ ಕಾಮಗಾರಿ ನೆನೆಗುದಿಗೆ ಬಿದ್ದಿದೆ. 

ಕಳೆದ 6 ವರ್ಷಗಳಲ್ಲಿ ಯಾವುದೇ ವಿಶೇಷ ಅನುದಾನ ತಾರದೇ ಈಗ ಪುರಸಭೆಯ ಅಧಿಕಾರ ಹಿಡಿಯುವುದಕ್ಕಾಗಿ ಜೆಡಿಎಸ್ ಸದಸ್ಯರನ್ನು ಪ್ರವಾಸಕ್ಕೆ ಕಳಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಜೆಡಿಎಸ್ ಪಕ್ಷದವರು ಪಕ್ಷೇತರ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಕೊಡಲು ಮುಂದಾದರೆ ಕೆಲವು ಅತೃಪ್ತ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಆಗ ವಲಸೆ ಬರುವ ವರಿಗೆ ಅಧ್ಯಕ್ಷ ಸ್ಥಾನ ನೀಡಿ ಈ ಬಾರಿಯೂ ಕಾಂಗ್ರೆಸ್ ಪಕ್ಷವು ಪುರಸಭೆಯ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಸದಸ್ಯರ ಕುಟುಂಬದವರಿಗೆ ಮೊಬೈ ಲ್ ಗಳಿಗೆ ಕರೆ ಮಾಡಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿ ಸುವಂತೆ ಕೋರಿರುವುದು ನಿಜ. ಅದೇ ರೀತಿ ಜೆಡಿಎಸ್ ಪಕ್ಷದವರು ನಮ್ಮ ಕಾಂಗ್ರೆಸ್ ಪಕ್ಷದ 14ನೇ ವಾರ್ಡಿನ ಸದಸ್ಯ ರಾದ ಸೌಭಾಗ್ಯ ಉಮೇಶ್ ಹಾಗೂ 18 ವಾರ್ಡಿನ ಸದಸ್ಯೆ ಕಲ್ಪನಾದೇವರಾಜು ಪತಿಯವರ ಮೊಬೈಲ್‌ಗೆ ಕರೆ ಮಾಡಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಕೋರಿ ದ್ದಾರೆ. ಅತಂತ್ರ ಪುರಸಭೆ ಇರುವಾಗ ಅಧಿ ಕಾರಕ್ಕಾಗಿ ಸದಸ್ಯರ ಬೆಂಬಲ ಕೋರು ವುದರಲ್ಲಿ ಯಾವುದೇ ತಪ್ಪಿಲ್ಲ. 

ಆದರೂ ಜೆಡಿಎಸ್ ಪಕ್ಷದವರು ಪೊಲೀಸ್ ದೂರು ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಪುರಸಭಾ ಸದಸ್ಯ ರಾದ ಕೆ.ಸಿ. ಮಂಜುನಾಥ್, ಕೆ.ಬಿ.ಮಹೇಶ್ ಕುಮಾರ್, ಡಿ.ಪ್ರೇಮಕುಮಾರ್, ಕೆ.ಆರ್ . ರವೀಂದ್ರಬಾಬು ಪ್ರವೀಣ್, ಸುಗುಣ ರಮೇಶ್, ಖಮರ್ ಬೇಗಂ ಸಲ್ಲು, ಸೌಭಾಗ್ಯ ಉಮೇಶ್, ಕಲ್ಪನಾ ದೇವರಾಜು, ಪಂಕಜಾ ಇದ್ದರು.