ಮಂಗಳೂರು(ಡಿ.20): ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಗುರುವಾರ ಹಿಂಸಾಚಾರ ರೂಪ ತಳೆದಿದ್ದು, ಇಂದು ಕಾಂಗ್ರೆಸ್‌ ನಿಯೋಗ ಮಂಗಳೂರಿಗೆ ಭೇಟಿ ನೀಡಲಿದೆ. ಈ ಸಂಬಂಧ ಕಾಂಗ್ರೆಸ್‌ ನಾಯಕರಿಗೆ ತೆರಳಲು ಈಗಾಗಲೇ ವಿಮಾನ ಟಿಕೆಟ್‌ ಬುಕ್ ಮಾಡಲಾಗಿದೆ.

ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್ ನಿಯೋಗದ ಮಂಗಳೂರು ಟಿಕೆಟ್ ಬುಕ್ ಮಾಡಿದ್ದು, 11.30ರ ಇಂಡಿಗೋ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ. ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಉಗ್ರಪ್ಪ, ನಜೀರ್ ಅಹಮದ್ ಸೇರಿ ಆರು ಜನರ ತಂಡ 12.30ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ.

ಮಂಗಳೂರು: ಮಾಧ್ಯಮದ ಹೆಸರಲ್ಲಿ ಕೇರಳದಿಂದ ಬಂದವರ ಬಂಧನ

ಸದ್ಯ ಆರು‌ ಜನರ ಹೆಸರಿನಲ್ಲಿ ಇಂಡಿಗೋ ವಿಮಾನದ ಟಿಕೆಟ್ ಬುಕ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮಂಗಳೂರು ಭೇಟಿ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಸಿದ್ದರಾಮಯ್ಯ ಹೆಸರಲ್ಲಿ ಯಾವುದೇ ವಿಮಾನದ ಟಿಕೆಟ್ ಬುಕ್ ಆಗಿಲ್ಲ.

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ