"

ಅಥಣಿ(ನ.27): ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೂ ಮುನ್ನ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ದೊಡ್ಡವರು ಬಿಜೆಪಿಗೆ  ಸೇರಲು ನಿರ್ಧರಿಸಿದ್ದರು. ಬಿಜೆಪಿಗೆ ನನ್ನನ್ನು ಸೆಳೆಯಲು ಯತ್ನವೂ ನಡೆದಿತ್ತು, ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಭೆಯನ್ನೂ ಮಾಡಿದ್ದರು. ಬಿಜೆಪಿಗೆ ಹೋಗೋಣ ಅಂದ್ರು, ಆಗ ಯವ್ವಾ ನಂಗ ಆಗೋದಿಲ್ಲ ಅಂತ ಹೇಳಿ ಸಭೆಯನ್ನು ಮೊಟಕುಗೊಳಿಸಿ ಹೊರ ಬಂದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದ್ದಾರೆ. 

ಬುಧವಾರ ಅಥಣಿ ಕ್ಷೇತ್ರದ ಸಂಕೋನಟ್ಟಿಯಲ್ಲಿ‌ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಸಂಕೋನಟ್ಟಿ ಮತದಾರರೇ ‌‌ಈ ಬೈ ಎಲೆಕ್ಷನ್ ಯಾಕೆ ಬಂದಿದೆ ಅಂತ ಸ್ವಲ್ಪ ಯೋಚಿಸಿ ಮತ ಹಾಕಿ. ಮೂರು ತಿಂಗಳ ಹಿಂದೆ ಬರ ಇತ್ತು, ನೆರೆ ಬಂದಿತ್ತು, ಮಕ್ಕಳು, ಜ‌ನ ನೀರಿನಲ್ಲಿ ತೇಲಾಡುತ್ತಿದ್ದರು, ನಿಮಗ ಗಂಜಿ ಕುಡ್ಯಾಕ ಇರಲಿಲ್ಲ, ಅವಾಗ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಪ್ರವಾಹ ಬಂದಾಗ ಮುಂಬೈದಾಗ ಫೈವ್ ಸ್ಟಾರ್ ಹೊಟೇಲದಾಗ ಆರಾಮಾಗಿದ್ದ ಕುಳಿತಿದ್ದ, ನಾನು, ನನ್ನ ಮಗ, ನನ್ನ ಕುಟುಂಬದವರು 43 ದಿನ ಪ್ರವಾಹ ಸಂದರ್ಭಸಲ್ಲಿ ಸಂತ್ರಸ್ತರ ಪರ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ವಿದಾನಸಭೆ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಗೆಲ್ಲಲು ರಾಹುಲ್ ಗಾಂಧಿ ಕರಕೊಂಡು ಬಂದು ಪ್ರಚಾರ ಮಾಡಿದ್ದೆವು. ಆದರೆ, ಕುಮಟಳ್ಳಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಡಿಸಿಎಂ ಲಕ್ಷ್ಮಣ ಸವದಿ ದೊಡ್ಡ ಶಕ್ತಿಯನ್ನು ಸೋಲಿಸಿದ್ರಿ, ಸಂಭಾವಿತ ಎಂದು ಆರಿಸಿದ ಕುಮಟಳ್ಳಿ ಪ್ರವಾಹ ಸಂದರ್ಭದಾಗ ನಿಮಗ ಸ್ಪಂದಿಸಲಿಲ್ಲ, ಕುಮಟಳ್ಳಿ ನಿಮ್ಮ ಕಷ್ಟದಲ್ಲಿ ನಿಲ್ಲಲಿಲ್ಲ, ನಾನು ಜೋರಾಗಿ ಮಾತನಾಡಿದ್ರ ಮಾಧ್ಯಮವರು ತೋರಿಸುತ್ತಾರೆ. ಅದಕ್ಕೆ ನಾನು ಸೂಕ್ಷ್ಮವಾಗಿ ಮಾತಾಡ್ತೇನೆ, ಕುಮಡಳ್ಳಿಗೆ ಮನುಷ್ಯತ್ವ ಇಲ್ಲ, ಮುಗ್ದ ಮುಖದ ಹಿಂದೆ ಏನಿದೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ ಸೇರಿದ ಕುಮಟಳ್ಳಿಗೆ ಸಮ್ಮಿಶ್ರ ಸರಕಾರದ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು. ಸಮ್ಮಿಶ್ರ ಸರಕಾರ ರಚನೆಗೂ ಮುನ್ನವೇ ಬಿಜೆಪಿ ಸೇರಲು ನಿರ್ಧರಿಸಿದ ಇವರಿಗೆ ತಕ್ಕ ಪಾಠ ಕಲಿಸಲೇಬೇಕು. ಚುನಾವಣೆಯಲ್ಲಿ ಆಯ್ಕೆಯಾದ ಏಳೆಂಟು ದಿನದ ಬಳಿಕವೇ ಅವರು ಬಿಜೆಪಿ ಸೇರಲು ಯೋಚಿಸಿದ್ದರು. ಅಭಿವೃದ್ಧಿಗೆ ಸ್ಪಂದಿಸದಿದ್ದರೆ ಇವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಬೇಕಿತ್ತು, ಆಗ ಒಪ್ಪದಿದ್ದರೆ ರಾಜೀನಾಮೆ ನೀಡಬೇಕಿತ್ತು, ಆಗ ಒಪ್ಪುತ್ತಿದ್ದೆವು, ಈಗ ರಾಜೀನಾಮೆ ನೀಡಿದ್ದು ಸ್ವಾರ್ಥಕ್ಕಾಗಿ ಎಂದು ಕುಮಟಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ. 

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: